Advertisement

ಬದುಕಿನ ಪಥ ಬದಲಿಸುವ ಟೂರಿಸ್ಟ್‌ ಗೈಡ್‌

10:45 PM May 21, 2019 | mahesh |

ಶಿಕ್ಷಣ ಮುಗಿದ ಕೂಡಲೇ ಹೆಚ್ಚು ಸಂಬಳ ಸಿಗುವ ಉದ್ಯೋಗಗಳಿಗೆ ಮುಖ ಮಾಡುವ ಯುವ ಜನತೆ ನೆಮ್ಮದಿ ಜೀವನಕ್ಕೆ ಗುಡ್‌ಬೈ ಹೇಳುತ್ತಾರೆ. ನಾವು ಮಾಡುವ ಕೆಲಸ ನಮಗೆ ಖುಷಿ ಕೊಡುವಂತಿರಬೇಕು. ಆಗ ಮಾತ್ರ ನೆಮ್ಮದಿಯ ಬದುಕು ಸಾಧ್ಯವಿದೆ. ಹೀಗೆ ಖುಷಿ ನೀಡುವ ಕೆಲಸಗಳಲ್ಲೊಂದು ಟೂರಿಸ್ಟ್‌ ಗೈಡ್‌.

Advertisement

ಟ್ರಾವೆಲಿಂಗ್‌ ಎಂದರೆ ಹೆಚ್ಚಿನವರಿಗೆ ಪಂಚಪ್ರಾಣ. ಮಾತು ನಿಮ್ಮ ಬಂಡವಾಳವಾಗಿದ್ದರೆ, ದಿನನಿತ್ಯ ಹೊಸ ಹೊಸ ವ್ಯಕ್ತಿಗಳನ್ನು ಪರಿಚಯ ಮಾಡಿಕೊಳ್ಳುವ ಸ್ವಭಾವ ನಿಮ್ಮದಾಗಿದ್ದರೆ ಟೂರಿಸ್ಟ್‌ ಗೈಡ್‌ ಉದ್ಯೋಗ ನಿಮಗೆ ಸೂಕ್ತ. ಇದಕ್ಕಾಗಿ ವಿಶೇಷ ಶಿಕ್ಷಣ ಪಡೆದುಕೊಂಡಿರಬೇಕಾದ ಆವಶ್ಯಕತೆ ಇಲ್ಲ. ಪ್ರವಾಸಕ್ಕೆ ಬರುವ ಪ್ರವಾಸಿಗರಿಗೆ ಸ್ಥಳಗಳ ಇತಿಹಾಸ, ಆಸಕ್ತಿದಾಯಕ ವಿಷಯಗಳ ಕುರಿತಾದ ಮಾಹಿತಿಗಳನ್ನು ಅಚ್ಚುಕಟ್ಟಾಗಿ ವಿವರಿಸುವ ಕಲೆ ಗೊತ್ತಿದ್ದರೆ ಸಾಕು. ಇದರೊಂದಿಗೆ ವಿವಿಧ ಭಾಷೆಗಳ ಮೇಲೆ ಹಿಡಿತವಿದ್ದರೆ ಟೂರಿಸ್ಟ್‌ ಗೈಡ್‌ ಯಾರು ಬೇಕಾದರೂ ಆಗಬಹುದು. ಟೂರಿಸ್ಟ್‌ ಗೈಡ್‌ ಕೆಲಸ ಸಂತೋಷಕರ ಮತ್ತು ಸವಾಲುಗಳಿಂದ ಕೂಡಿರುವಂಹಥದ್ದು. ಮಾರ್ಗದರ್ಶಿ ಪ್ರವಾಸಿಗರಿಗೆ ಸ್ಥಳೀಯ ಸಂಪ್ರದಾಯಗಳ ಜತೆಗೆ ಸಾಮಾಜಿಕ ವಿಚಾರಗಳ ಕುರಿತು ಮಾಹಿತಿ ನೀಡುವವರು. ಈ ಉದ್ಯೋಗದಲ್ಲಿ ಮಾರ್ಗದರ್ಶಿ ಪ್ರವಾಸಿಗರ ಅದರಲ್ಲೂ ಮೊದಲ ಬಾರಿಗೆ ಭೇಟಿ ನೀಡುವ ಪ್ರವಾಸಿಗರ ಕುತೂಹಲವನ್ನು ತೃಪ್ತಿಪಡಿಸಬೇಕು. ಟೂರಿಸ್ಟ್‌ ಗೈಡ್‌ ಉದ್ಯೋಗಿಗೆ ಯಾವುದೇ ವಯಸ್ಸಿನ ಮಿತಿ ಇಲ್ಲ. ಪದವಿ ಶಿಕ್ಷಣ ಓದಿಕೊಂಡು ಪ್ರವಾಸಿ ತಾಣಗಳ ಕುರಿತು ಸ್ಪಷ್ಟ ಮಾಹಿತಿ ಇದ್ದರೇ ಯಾವುದೇ ವ್ಯಕ್ತಿ ಕೂಡ ಟೂರಿಸ್ಟ್‌ ಗೈಡ್‌ ಆಗಿ ಉದ್ಯೋಗ ಮಾಡಬಹುದು.

ವೈಯಕ್ತಿಕ ಗುಣಲಕ್ಷಣಗಳು
ಟೂರಿಸ್ಟ್‌ ಗೈಡ್‌ ಉದ್ಯೋಗ ಆಯ್ಕೆ ಮಾಡಿಕೊಳ್ಳುವವರು ಎಲ್ಲರಿಗಿಂತ ವಿಭಿನ್ನ ಗುಣಲಕ್ಷಣಗಳನ್ನು ಹೊಂದಿರುವುದು ಅಗತ್ಯ. ಟೂರಿಸ್ಟ್‌ ಗೈಡ್‌ನ‌ಲ್ಲಿರಬೇಕಾದ ಲಕ್ಷಣಗಳೆಂದರೆ ಸಂಗಾಸಕ್ತ, ಸ್ನೇಹಪರ ವ್ಯಕ್ತಿತ್ವ, ಜನರನ್ನು ನಿಭಾಯಿಸುವ ಸಾಮರ್ಥ್ಯ, ಮೌಖೀಕ ಸ್ಪಷ್ಟತೆ. ಇದರೊಂದಿಗೆ ಪ್ರಯಾಣ, ಪ್ರವಾಸಿ ತಾಣಗಳು, ವ್ಯವಹಾರ ತಂತ್ರಗಳು ಮತ್ತು ಸಾಮಾಜಿಕ ಶಿಷ್ಟಾಚಾರಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ಜ್ಞಾನವನ್ನು ಹೊಂದಿರಬೇಕು. ಅಂತೆಯೇ ಸಹಾಯ, ಆತಿಥ್ಯ ಒದಗಿಸುವ ಸಾಮರ್ಥ್ಯ ಮತ್ತು ತಾಳ್ಮೆ ಈ ಉದ್ಯೋಗದಲ್ಲಿ ಅಗತ್ಯವಾಗಿರುತ್ತದೆ. ಒಂದು ಕ್ಷೇತ್ರದಲ್ಲಿ ಲಭ್ಯವಿರುವ ಸೌಲಭ್ಯಗಳ ಮತ್ತು ಸೇವೆಗಳ ಅಪ್‌-ಟು ಡೇಟ್‌ ಜ್ಞಾನವನ್ನು ಕೂಡ ಹೊಂದಿರಬೇಕು.

ತರಬೇತಿಗಳು ಕೂಡ ಲಭ್ಯ
ಟೂರಿಸ್ಟ್‌ ಗೈಡ್‌ ಉದ್ಯೋಗ ಬಯಸುವವರಿಗೆ ತರಬೇತಿ ಕೂಡ ಲಭ್ಯವಿದೆ. ಭಾಷಾ ಕೌಶಲ, ಮಾತು, ನಡವಳಿಕೆ ಮೊದಲಾದ ಸಾಮಾನ್ಯ ಶಿಕ್ಷಣದೊಂದಿಗೆ ಟೂರಿಸ್ಟ್‌ ಗೈಡ್‌ ಉದ್ಯೋಗವನ್ನು ವೃತ್ತಿಪರವಾಗಿ ತೆಗೆದುಕೊಳ್ಳುವುದು ಹೇಗೆ ಎಂಬುದನ್ನು ಕೂಡ ಕಲಿಸಿಕೊಡಲಾಗುತ್ತದೆ.

-  ರಮ್ಯಾ ಕೆದಿಲಾಯ

Advertisement
Advertisement

Udayavani is now on Telegram. Click here to join our channel and stay updated with the latest news.

Next