Advertisement

Covid: ಪ್ರವಾಸೋದ್ಯಮ ಕ್ಷೇತ್ರಕ್ಕಿಲ್ಲ ಆತಂಕ: ಕೇಂದ್ರ ಸಚಿವ ಶ್ರೀಪಾದ್‌ ನಾಯ್ಕ

07:54 PM Dec 24, 2023 | Team Udayavani |

ಪಣಜಿ/ನವದೆಹಲಿ: ಹೆಚ್ಚುತ್ತಿರುವ ಕೋವಿಡ್‌ನಿಂದ ಪ್ರವಾಸೋದ್ದಿಮೆ ಕ್ಷೇತ್ರ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಕೇಂದ್ರ ಪ್ರವಾಸೋದ್ಯಮ ಖಾತೆ ಸಹಾಯಕ ಸಚಿವ ಶ್ರೀಪಾದ್‌ ನಾಯ್ಕ ಭರವಸೆ ನೀಡಿದ್ದಾರೆ. ಪಣಜಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಂದರ್ಭದಲ್ಲಿ “ದೇಶದಲ್ಲಿ ಮತ್ತೆ ಲಾಕ್‌ಡೌನ್‌ ಉಂಟಾದೀತೇ’ ಎಂಬ ಆತಂಕಕ್ಕೆ ಪ್ರತಿಕ್ರಿಯೆ ನೀಡಿದ ಅವರು, “ಯಾವುದೇ ಕಾರಣಕ್ಕೂ ಆತಂಕಪಡುವ ಅಗತ್ಯವಿಲ್ಲ. ಒಂದು ವೇಳೆ ಕೋವಿಡ್‌ ಪರಿಸ್ಥಿತಿ ಮರುಕಳಿಸಿದರೂ ಉಂಟಾದರೂ, ಅದನ್ನು ಸಮರ್ಥವಾಗಿ ಎದುರಿಸಲಿದ್ದೇವೆ’ ಎಂದರು. ಹಿಂದಿನ ಸಂದರ್ಭದಲ್ಲಿ ಪರಿಸ್ಥಿತಿಯನ್ನೂ ಸೂಕ್ತ ಮುನ್ನೆಚ್ಚರಿಕೆಗಳಿಂದ ಎದುರಿಸಿದ್ದ ಹಿನ್ನೆಲೆಯಲ್ಲಿ ದೇಶದ ಹಲವು ಕ್ಷೇತ್ರಗಳು ಕ್ಷಿಪ್ರವಾಗಿ ಚೇತರಿಕೆ ಕಾಣುವಂತಾಯಿತು ಎಂದರು.

Advertisement

ಹೊಸತಾಗಿ 656 ಕೇಸು:
ಶನಿವಾರದಿಂದ ಭಾನುವಾರದ ಅವಧಿಯಲ್ಲಿ ದೇಶದಲ್ಲಿ ಹೊಸತಾಗಿ 656 ಕೋವಿಡ್‌ ಕೇಸುಗಳು ದೃಢಪಟ್ಟಿವೆ. ಈ ಪೈಕಿ ಕೇರಳದಲ್ಲಿಯೇ 128 ಕೇಸುಗಳು ದೃಢಪಟ್ಟಿವೆ. ಜತೆಗೆ ಆ ರಾಜ್ಯದಿಂದ ಒಂದು ಸಾವು ದೃಢಪಟ್ಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಕೂಡ 3,742ಕ್ಕೆ ಏರಿಕೆಯಾಗಿದೆ.

ನಿಗಾ ಹೆಚ್ಚಲಿ:
ಕೋವಿಡ್‌ ಆತಂಕ ಹೆಚ್ಚುತ್ತಿರುವಂತೆಯೇ ಜಗತ್ತಿನ ಎಲ್ಲಾ ರಾಷ್ಟ್ರಗಳು ವಿಶೇಷವಾಗಿ ಆಗ್ನೇಯ ಏಷ್ಯಾ ರಾಷ್ಟ್ರಗಳು ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಪತ್ತೆ ಕ್ರಮಗಳನ್ನು ಹೆಚ್ಚಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ವಿಶೇಷವಾಗಿ ಜೆಎನ್‌.1 ರೂಪಾಂತರಿ ಬಗ್ಗೆ ಗಮನಹರಿಸಬೇಕಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾದ ಪ್ರಾದೇಶಿಕ ನಿರ್ದೇಶಕಿ ಡಾ.ಪೂನಂ ಖೇತ್ರಪಾಲ್‌ ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next