Advertisement

Tourism policy; 47,000 ನೇರ ಉದ್ಯೋಗ ಗುರಿ: ನೂತನ ಪ್ರವಾಸೋದ್ಯಮ ನೀತಿಗೆ ಸಂಪುಟ ಒಪ್ಪಿಗೆ.

02:30 AM Oct 29, 2024 | Team Udayavani |

ಬೆಂಗಳೂರು: ರಾಜ್ಯ ಸರಕಾರದ ಮಹತ್ವದ ಪ್ರವಾಸೋದ್ಯಮ ನೀತಿಗೆ ಸೋಮವಾರ ನಡೆದ ಸಚಿವ
ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡ ಲಾಗಿದ್ದು, 2024-29ರ ವರೆಗೆ ಈ ನೀತಿ ಜಾರಿಯಲ್ಲಿರುತ್ತದೆ. 9 ಪ್ರಮುಖ
ಕೇಂದ್ರೀಕೃತ ಪ್ರದೇಶಗಳನ್ನು ಗುರುತಿಸಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸು ವುದಕ್ಕೆ ಯೋಜಿಸಲಾಗಿದೆ. ಕನಿಷ್ಠ
47 ಸಾವಿರ ಜನರಿಗೆ ನೇರ ಉದ್ಯೋಗ ಕಲ್ಪಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ.

Advertisement

ಸಂಪುಟ ಸಭೆಯ ಬಳಿಕ ಪ್ರವಾಸೋದ್ಯಮ ಸಚಿವರೂ ಆಗಿರುವ ಎಚ್‌.ಕೆ. ಪಾಟೀಲ್‌ ಪತ್ರಿಕಾಗೋಷ್ಠಿ ಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, 25 ವಿಷಯಾಧಾರಿತ ಕ್ಷೇತ್ರಗಳ 44 ಯೋಜನೆಗಳನ್ನು ಗುರುತಿಸಲಾಗಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಆದ್ಯತೆ ನೀಡಲಾಗಿದ್ದು, 30 ಸಾವಿರ ಜನ ರಿಗೆ ಉದ್ಯೋಗ ಕಲ್ಪಿಸುವ ಗುರಿ ಹೊಂದ ಲಾಗಿದೆ. ಒಟ್ಟು 1,500 ಕೋಟಿ ರೂ. ಬಂಡವಾಳ ಹೂಡಿಕೆಯನ್ನು ಸರ್ಕಾರ ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.

ಕ್ಷೇತ್ರ ಯಾವುದು?
ಶೈಕ್ಷಣಿಕ, ಕೃಷಿ, ಆರೋಗ್ಯ-ವೆಲ್‌ನೆಸ್‌, ಆಧ್ಯಾತ್ಮಿಕ, ಯಾತ್ರಾ, ಪಾರಂ ಪರಿಕ ತಾಣಗಳ ಅಧ್ಯಯನ ಪ್ರವಾಸ, ಸಾಹಸ, ವಿರಾಮ, ವಿನೋದ, ಜ್ಞಾನಾರ್ಜನೆ, ಮನಃಶಾಂತಿ, ವಿಶ್ರಾಂತಿ ಪ್ರವಾಸೋದ್ಯಮ ಎಂದು ವರ್ಗೀಕರಿಸ ಲಾಗಿದೆ. 9 ಪ್ರೋತ್ಸಾಹಗಳು, 2 ಬಗೆಯ ಸಹಾಯ ಧನ ಹಾಗೂ 7 ರೀತಿಯ ರಿಯಾಯಿತಿಗಳನ್ನು ಈ ನೀತಿಯಲ್ಲಿ ಪ್ರಕಟಿಸಲಾಗಿದೆ.

ಗುರಿ ಏನು?
ದೇಶೀಯ ಪ್ರವಾಸೋದ್ಯಮದಲ್ಲಿ ದೇಶದ ಮೊದಲ 3 ರಾಜ್ಯಗಳಲ್ಲಿ ಒಂದಾಗುವುದು
ವಿದೇಶಿ ಪ್ರವಾಸಿಗರ ಭೇಟಿಯಲ್ಲಿ ಮೊದಲ 5 ಸ್ಥಾನದಲ್ಲಿರುವುದು
ಕನಿಷ್ಠ 47 ಸಾವಿರ ಜನರಿಗೆ ನೇರ ಉದ್ಯೋಗ ಕಲ್ಪಿಸುವುದು
1 ಲಕ್ಷ ಪರೋಕ್ಷ ಹಾಗೂ ಪ್ರೇರಿತ ಉದ್ಯೋಗ ಸೃಷ್ಟಿ
ಇಲಾಖೆಯ ಮಾಲಕತ್ವದಲ್ಲಿರುವ 680 ಎಕರೆ ಭೂಮಿಯನ್ನು ಪ್ರವಾಸೋದ್ಯಮ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳುವುದು
30 ಜಿಲ್ಲೆಗಳಲ್ಲಿ 30 ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವುದು
ರಾಜ್ಯವನ್ನು ಕನಿಷ್ಠ 50 ಅಂತಾರಾಷ್ಟ್ರೀಯ ಪ್ರವಾಸಿ ಮೇಳಗಳಲ್ಲಿ ಪ್ರಚಾರಪಡಿಸುವುದು

ನೀತಿಯ ಉದ್ದೇಶ
 ಗ್ರಾಮೀಣ ಉದುಮಶೀಲತೆ ಹಾಗೂ ಅಭಿವೃದ್ಧಿಗೆ ಉತ್ತೇಜನ
 ಶ್ರೇಷ್ಠ ಗುಣಮಟ್ಟದ ಪ್ರವಾಸೋದ್ಯಮ ಸೌಕರ್ಯ ಒದಗಿಸಿ ರಾಜ್ಯದ ತಾಣಗಳನ್ನು ರಾಷ್ಟ್ರ ಹಾಗೂ ಜಾಗತಿಕ ಮಟ್ಟದಲ್ಲಿ ಉತ್ತೇಜಿಸುವುದು
 ಪ್ರವಾಸೋದ್ಯಮ ಕೇಂದ್ರಗಳಲ್ಲಿ ಸೇವಾ ಗುಣಮಟ್ಟವನ್ನು ಉತ್ಕೃಷ್ಟಗೊಳಿಸುವುದು
ಪ್ರವಾಸೋದ್ಯಮವನ್ನು ಜ್ಞಾನಾರ್ಜನೆಯ ಸಾಧನವಾಗಿ ಮತ್ತು ಕೋಮು ಸೌಹಾರ್ದ ಹಾಗೂ ಶಾಂತಿ ಸಾಧನವಾಗಿ ಬಳಸುವುದು
ಯುನೆಸ್ಕೋ ಮಾನ್ಯತೆ ಪಡೆದ ಪಾರಂಪರಿಕ ತಾಣಗಳು ಸೇರಿದಂತೆ ಐತಿಹಾಸಿಕ ಸ್ಥಳಗಳ ರಕ್ಷಣೆ ಮತ್ತು ಮೌಲ್ಯವರ್ಧನೆ
ರಾಜ್ಯದ ಶ್ರೀಮಂಥ ಆಧ್ಯಾತ್ಮಿಕ ಪರಂಪರೆಯ ಅನಾವರಣ

Advertisement

ಅಧಿವೇಶನ ನಿರ್ಣಯ ಸಿಎಂ ಸಿದ್ದು ವಿವೇಚನೆಗೆ
ಬೆಂಗಳೂರು: ಬೆಳಗಾವಿಯಲ್ಲಿ ನಡೆಸಲು ಉದ್ದೇಶಿಸಿರುವ ವಿಧಾನ ಮಂಡಲದ ಚಳಿಗಾಲದ ಅಧಿವೇಶನದ ದಿನಾಂಕ ನಿರ್ಧರಿಸುವ ಹೊಣೆಯನ್ನು ಸಿಎಂ ಸಿದ್ದರಾಮಯ್ಯ ಅವರ ವಿವೇಚನೆಗೆ ಬಿಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ಸೋಮವಾರ ಈ ಬಗ್ಗೆ ಸುದೀರ್ಘ‌ ಚರ್ಚೆ ನಡೆಸಲಾಗಿದೆ. ಡಿ. 9ರಿಂದ ಅಧಿವೇಶನ ನಡೆಸುವಂತೆ ಸ್ಪೀಕರ್‌ ಯು.ಟಿ. ಖಾದರ್‌ ಹಾಗೂ ಪರಿಷತ್‌ ಸಭಾಪತಿ ಬಸವರಾಜ್‌ ಹೊರಟ್ಟಿ ಈಗಾಗಲೇ ಸಲಹೆ ನೀಡಿದ್ದಾರೆ. ಆದರೆ ಎಐಸಿಸಿ ಅಧಿವೇಶನದ ಶತಮಾನೋತ್ಸವ, ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ ಸ್ಥಳ ಹಾಗೂ ದಿನಾಂಕ ನಿಗದಿ ಅಧಿಕಾರವನ್ನು ಸಿದ್ದರಾಮಯ್ಯ ಅವರಿಗೆ ಸಂಪುಟ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next