Advertisement
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳ ವಾರ ನಡೆದ ಪ್ರವಾಸೋದ್ಯಮ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು, ಅತಿಥಿ ದೇವೋಭವ ಎಂಬುದು ಪ್ರಧಾನಿ ಮೋದಿಯವರ ಆಶಯವಾಗಿದೆ. ಇದೇ ಆಶಯಯೊಂದಿಗೆ ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯ ಗುರಿಯಿದೆ. ಸಂಚಾರ ಸೌಲಭ್ಯ, ಸ್ವಚ್ಛತೆ ಆತಿಥ್ಯ ಸತ್ಕಾರ ಮತ್ತು ಸಹಭಾಗಿತ್ವಕ್ಕೆ ವಸತಿ ವ್ಯವಸ್ಥೆಗಳ ಅಭಿವೃದ್ಧಿ ಮೂಲಕ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಬೇಕಿದೆ ಎದರು.
Related Articles
Advertisement
ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿರಿಸಿಕೊಂಡು ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆ ರೂಪಿಸ ಬೇಕು. ಭೂದೃಶ್ಯ ವೀಕ್ಷಣೆಗೆ, ಯಾವುದೇ ರೀತಿಯ ಅಡ್ಡಿಯಾಗದಂತೆ ಕಟ್ಟಡಗಳ ನಿರ್ಮಾಣವಾಗಬೇಕು ಎಂದ ಸಚಿವರು, ಬೇಲೂರು ದೇವಾಲಯದಲ್ಲಿ ಇತಿಹಾಸ ಪರಂಪರೆಗಳನ್ನು ಸಾರುವ ಧ್ವನಿಬೆಳಕು ಕಾರ್ಯಕ್ರಮದ ವ್ಯವಸ್ಥೆಗೆ ಯೋಜನೆ ತಯಾರಿಸಿ ವರದಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದರು.
ಕಲಾಭವನದ ದುರಸ್ತಿಗೆ ಕ್ರಮ: ಹಾಸನ ನಗರದ ಕಲಾಭವನದ ಅಭಿವೃದ್ಧಿಗೆ ವಿಸ್ತೃತ ಕ್ರಿಯಾ ಯೋಜನೆ ತಯಾರಿಸಿ ಪ್ರಸ್ತಾವನೆ ಸಲ್ಲಿಸಬೇಕು. ತುರ್ತಾಗಿ ಆಗ ಬೇಕಾಗಿರುವ ದುರಸ್ತಿ ಕಾರ್ಯಗಳನ್ನು ನಿರ್ಮಿತಿ ಕೇಂದ್ರದಿಂದ ಕೈಗೊಳ್ಳುವಂತೆ ಸಚಿವ ಸಿ.ಟಿ.ರವಿ ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಹಾಲಿ ನಿರ್ಮಿಸಿ ಬಳಸದೇ ಇರುವ ಯಾತ್ರಿನಿವಾಸಗಳನ್ನು ಹಾಸನದ ಸೆಂಟ್ರಲ್ ಬಸ್ ನಿಲ್ದಾಣದ ಚನ್ನಪಟ್ಟಣ ಕೆರೆಯಲ್ಲಿ ನಿರ್ಮಿಸಿರುವ ಪ್ರವಾಸಿ ಹೋಟೆಲ್ಗಳನ್ನು ಕೆಎಸ್‌ಟಿಡಿಸಿಗೆ ವಹಿಸಿ ನಿರ್ವಹಣೆ ಮಾಡುವಂತೆ ಸಚಿವ ಸಿ.ಟಿ.ರವಿ ಸೂಚನೆ ನೀಡಿದರು.
ಶಾಸಕರಾದ ಕೆ.ಎಸ್.ಲಿಂಗೇಶ್ ಅವರು ಯಗಚಿ, ಬೇಲೂರು, ಹಳೇಬೀಡು, ಪುಷ್ಪಗಿರಿ, ವಿಷ್ಣುಸಮುದ್ರ ಕೆರೆಗಳ ಅಭಿವೃದ್ಧಿ ಬೇಲೂರು ಸಾಂಸ್ಕೃತಿಕ ಸಮುದಾಯ ನಿರ್ಮಾಣ ಕುರಿತು ಗಮನ ಸೆಳೆದರು.
ಜಿಪಂ ಅಧ್ಯಕ್ಷೆ ಬಿ.ಎಸ್.ಶ್ವೇತಾ, ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಜಿಲ್ಲೆಯ ಪ್ರವಾಸಿ ಯೋಜನಾ ವರದಿ ತಯಾರಿ, ಪ್ರವಾಸಿ ತಾಣಗಳ ಅಭಿವೃದ್ಧಿ ಕುರಿತು ಮಾಹಿತಿ ನೀಡಿದರು.
ಪ್ರಭಾರ ಅಪರ ಜಿಲ್ಲಾಧಿಕಾರಿ ಹಾಗೂ ಉತ್ತರ ವಿಭಾಗಾಧಿಕಾರಿ ನಾಗರಾಜ್, ಸಕಲೇಶ ಪುರ ಉಪವಿಭಾಗಾಧಿಕಾರಿ ಕವಿತಾ ರಾಜಾರಾಂ, ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಭಾರಿ ಅಧಿಕಾರಿ ಶಿವಲಿಂಗಪ್ಪ ಎಸ್.ಕುಂಬಾರ ಸಭೆಯಲ್ಲಿ ಹಾಜರಿದ್ದರು.