Advertisement

Tourism day: ಕುದುರೆಮುಖ ರಾಷ್ಟ್ರೀಯ ಉದ್ಯಾನವನ-ಪ್ರಕೃತಿ ಸೌಂದರ್ಯದ “ಗಂಗಡಿಕಲ್”‌ ಚಾರಣ

05:32 PM Sep 26, 2023 | Team Udayavani |

2023ರ ಜೂನ್ ತಿಂಗಳು ಬೇಸಿಗೆ ಮುಗಿದು ಮಳೆಗಾಲದ ಸಮಯ. ನಾನು ಮತ್ತು ನನ್ನ ಗೆಳೆಯರು ಯಾವುದಾದರೂ ಸುಂದರವಾದಂತಹ ಚಾರಣಕ್ಕೆ ಹೋಗಬೇಕೆಂದು ಸಿದ್ದರಾಗಿದ್ದೆವು .ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಬಹಳ ಪ್ರಸಿದ್ಧ ವಾಗಿರುವಂತಹ ಕುದುರೆಮುಖ ಚಾರಣವನ್ನು ನಾವೆಲ್ಲರೂ ಕೇಳಿರುತ್ತೇವೆ. ಆದರೆ ಈ ಗಂಗಡಿಕಲ್ ಚಾರಣವು ಅತಿ ಕಡಿಮೆ ಪ್ರಸಿದ್ಧವಾದ ಚಾರಣವಾಗಿದೆ. ಅತೀ ಸುಂದರವಾದ ಚಾರಣವೂ ಕೂಡ

Advertisement

ಹೌದು! ನಾನು ಮತ್ತು ನನ್ನ ಗೆಳೆಯರು ಜೂನ್ ತಿಂಗಳಲ್ಲಿಯೇ ಈ ಚಾರಣಕ್ಕೆ ಹೊರಟೆವು. ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಅನುಮತಿಯನ್ನು ಪಡೆದು ಗಂಗಡಿಕಲ್ ಚಾರಣವನ್ನು ಶುರುಮಾಡಿದೆವು. ಶುರು ಮಾಡಿದ ಕೂಡಲೇ ಜಿಗಣೆಗಳ ಕಾಟ ಶುರುವಾಯಿತು. ಅದನ್ನು ಲೆಕ್ಕಿಸದೆ ನಾವು ನಮ್ಮ ಚಾರಣವನ್ನು ಮುಂದುವರಿಸಿದೆವು .ಚಾರಣ ಹೋಗುತ್ತಿದ್ದ ಹಾಗೆ ಸ್ವಲ್ಪ ಕಷ್ಟಕರ ಎನಿಸತೊಡಗಿತು ಮಳೆ ಜೋರು ಬರುತ್ತಿದ್ದರಿಂದ ಕಲ್ಲು ಬಂಡೆಗಳು ಜಾರುತ್ತಿತ್ತು.ಆದರೂ ನಾವು ನಮ್ಮ ಚಾರಣವನ್ನು ನಿಲ್ಲಿಸದೆ ಮುಂದೆ ಹೋದೆವು, ಸುಮಾರು ಒಂದೂವರೆ ಗಂಟೆ ನಂತರ ಪರ್ವತಕ್ಕೆ ಬಂದು ತಲುಪಿದೆವು. ಲಕ್ಯಾ ಅಣೆಕಟ್ಟು ಹಿನ್ನೀರು ಕುದುರೆಮುಖ ಪರ್ವತಗಳು ಮತ್ತು ಕಣಿವೆಯ ಅದ್ಭುತ ನೋಟ ನೋಡಿ ನಮಗೆ ಆದ ಸಂತೋಷ ಅಷ್ಟಿಷ್ಟಲ್ಲ . ಅರ್ಧ ಗಂಟೆ ಅಲ್ಲಿ ಕಾಲ ಕಳೆದ ನಂತರ ಮಂಜು ಆವರಿಸತೊಡಗಿತು ಜೋರಾಗಿ ಮಳೆ ಕೂಡ ಬಂತು ಬೇಗನೆ ಅಲ್ಲಿಂದ ಹೊರಟೆವು ಪರ್ವತಕ್ಕೆ ಹೋದದ್ದು ಸಾರ್ಥಕವಾಯಿತು ಎಂದು ನನಗನಿಸಿತು.

ಈ ಚಾರಣವು ಸುಮಾರು ಎಂಟು ಕಿಲೋಮೀಟರ್ ಚಾರಣವಾಗಿದೆ .ಈ ಗಂಗಡಿಕಲ್ ಪರ್ವತವು ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಹದಿಮೂರು ಶಿಖರಗಳಲ್ಲಿ ಒಂದಾಗಿದೆ. ಈ ಚಾರಣಕ್ಕೆ ಕುದುರೆಮುಖ ಟೌನಲ್ಲಿ ಅನುಮತಿಯನ್ನು ಪಡೆಯಬೇಕು ಒಬ್ಬರಿಗೆ ತಲಾ 475 ಮೊತ್ತವನ್ನು ವಿಧಿಸುತ್ತಾರೆ, ಮತ್ತೆ ಮಾರ್ಗದರ್ಶಕರನ್ನು ನಮ್ಮ ಜೊತೆ ಕಳುಹಿಸಿ ಕೊಡುತ್ತಾರೆ. ಈ ಚಾರಣಕ್ಕೆ ಅನುಮತಿಯನ್ನು ಇತ್ತೀಚಿಗೆ ಕೊಡಲು ಆರಂಭಿಸಿದ್ದಾರೆ .ಈ ಚಾರಣಕ್ಕೆ ಹೋಗುವವರಲ್ಲಿ ನನ್ನದೊಂದು ವಿನಂತಿ ಕಸಗಡ್ಡಿಗಳನ್ನು ಹಾಕದೆ ಪ್ರಕೃತಿಯನ್ನು ಉಳಿಸಿ ಬೆಳಸಿ …

-ಅನಿರುದ್ಧ ರಾವ್.

Advertisement
Advertisement

Udayavani is now on Telegram. Click here to join our channel and stay updated with the latest news.

Next