Advertisement

Australia Tour; ವನಿತಾ ‘ಎ’ ತಂಡಕ್ಕೆ ಮಿನ್ನು ಮಣಿ ನಾಯಕಿ

11:59 PM Jul 14, 2024 | Team Udayavani |

ಮುಂಬಯಿ: ಆಸ್ಟ್ರೇಲಿಯ ಪ್ರವಾಸ ಕೈಗೊಳ್ಳಲಿರುವ ಭಾರತೀಯ ವನಿತಾ “ಎ’ ತಂಡಕ್ಕೆ ಆಫ್ಸ್ಪಿನ್ನರ್‌ ಮಿನ್ನು ಮಣಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಶ್ವೇತಾ ಸೆಹ್ರಾವತ್‌ ಉಪನಾಯಕಿಯಾಗಿದ್ದಾರೆ.

Advertisement

ಸಾಜನಾ ಸಜೀವನ್‌, ಉಮಾ ಛೇತ್ರಿ, ಸೈಕಾ ಇಶಾಕ್‌, ವೇಗಿ ಸೈಮಾ ಠಾಕೂರ್‌ ಈ ತಂಡದ ಪ್ರಮುಖರು. ಶಬ್ನಂ ಶಕೀಲ್‌ ಕೂಡ ಆಯ್ಕೆಯಾಗಿದ್ದು, ಫಿಟ್‌ನೆಸ್‌ ಹೊಂದಿದ್ದರಷ್ಟೇ ತಂಡದೊಂದಿಗೆ ತೆರಳಲಿದ್ದಾರೆ.

ಆಸ್ಟ್ರೇಲಿಯ ಪ್ರವಾಸದ ವೇಳೆ ಭಾರತ “ಎ’ ತಂಡ 3 ಟಿ20 (ಬ್ರಿಸ್ಬೇನ್‌, ಆ. 7, 9, 11), 3 ಏಕದಿನ (ಮಕಾಯ್‌, ಆ. 14, 16, 18) ಹಾಗೂ ಒಂದು ಚತುರ್ದಿನ ಪಂದ್ಯವನ್ನಾಡಲಿದೆ (ಗೋಲ್ಡ್‌ ಕೋಸ್ಟ್‌, ಆ. 22-25).

ಭಾರತ ತಂಡ: ಮಿನ್ನು ಮಣಿ (ನಾಯಕಿ), ಶ್ವೇತಾ ಸೆಹ್ರಾವತ್‌, ಪ್ರಿಯಾ ಪುನಿಯಾ, ಶುಭಾ ಸತೀಶ್‌, ತೇಜಲ್‌ ಹಸಬಿ°ಸ್‌, ಕಿರಣ್‌ ನವ್ಗಿರೆ, ಸಾಜನಾ ಸಜೀವನ್‌, ಉಮಾ ಛೇತ್ರಿ, ಶಿಪ್ರಾ ಗಿರಿ, ರಾಘವಿ ಬಿಷ್ಟ್, ಸೈಕಾ ಇಶಾಖ್‌, ಮನ್ನತ್‌ ಕಶ್ಯಪ್‌, ತನುಜಾ ಕನ್ವರ್‌, ಪ್ರಿಯಾ ಮಿಶ್ರಾ, ಮೇಘನಾ ಸಿಂಗ್‌, ಸಯಾಲಿ ಸತ್ಕರೆ, ಶಬ್ನಂ ಶಕೀಲ್‌, ಎಸ್‌. ಯಶಶ್ರೀ.

Advertisement

Udayavani is now on Telegram. Click here to join our channel and stay updated with the latest news.

Next