Advertisement

Road Development: ದ.ಕನ್ನಡ ಜಿಲ್ಲೆಯ ವಿವಿಧ ರಸ್ತೆಗಳ ಅಭಿವೃದ್ಧಿಗೆ 42 ಕೋ. ರೂ. ಅನುದಾನ

07:12 PM Sep 03, 2024 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಒಟ್ಟು 42 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು  ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.

Advertisement

ಕೇಂದ್ರ ಸರ್ಕಾರವು, ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿ (CRIF) ಅಡಿ ಈ ಅನುದಾನ ನೀಡಿದ್ದು, ಜಿಲ್ಲಾ ವ್ಯಾಪ್ತಿಯಲ್ಲಿ ಸುಮಾರು 74.30 ಕಿಲೋ ಮೀಟರ್ ರಸ್ತೆಗಳ ಅಭಿವೃದ್ಧಿಪಡಿಸಲಾಗುತ್ತದೆ. ಈ ಎಲ್ಲಾ ಕಾಮಗಾರಿಗಳಿಗೆ ಕೇಂದ್ರ ಸರ್ಕಾರದಿಂದ 42 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರಿಗೆ ಧನ್ಯವಾದ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಜಿಲ್ಲೆಯ ಯಾವೆಲ್ಲ ರಸ್ತೆಗಳ ಅಭಿವೃದ್ದಿ ಕಾಮಗಾರಿಗೆ ಎಷ್ಟು ಅನುದಾನ ಸಿಕ್ಕಿದೆ? 

1. ಮಂಗಳೂರು ತಾಲೂಕು ವ್ಯಾಪ್ತಿಯ ಮಾಣಿ-ಉಳ್ಳಾಲ ರಾಜ್ಯ ಹೆದ್ದಾರಿಯ  5.7 ಕಿ.ಮೀ ರಸ್ತೆ ನವೀಕರಣಕ್ಕೆ 3.42 ಕೋ.ರೂ.

2. ಉಚ್ಚಿಲ-ದೇರಳಕಟ್ಟೆ ಜಿಲ್ಲಾ ರಸ್ತೆಯ 1 ಕಿ.ಮೀ. ನವೀಕರಣಕ್ಕೆ 60 ಲಕ್ಷ ರೂ.

Advertisement

3. ಪೆರ್ಮನ್ನೂರು-ಪಾವೂರು ರಸ್ತೆ 1.1 ಕಿ.ಮೀ. ನವೀಕರಣಕ್ಕೆ 66 ಲಕ್ಷ ರೂ.

4. ಕೋಟೆಕಾರು – ಪಾತೂರು 2.2 ಕಿ.ಮೀ ರಸ್ತೆಗೆ 1.32 ಕೋ.ರೂ.

5. ರಾಜ್ಯ ಹೆದ್ದಾರಿ 64ರ ಕಡೂರು-ಕಾಞಂಗಾಡ್ 2.25ಕಿ.ಮೀ. ರಸ್ತೆಗೆ 1.35 ಕೋ.ರೂ.

6. ಬಂಟ್ವಾಳ ವ್ಯಾಪ್ತಿಯಲ್ಲಿನ ಸುರತ್ಕಲ್ -ಕಬಕ 3.33 ಕಿ.ಮೀ. ರಸ್ತೆ ಕಾಮಗಾರಿಗೆ 2 ಕೋ.ರೂ

7. ಪಾಣೆಮಂಗಳೂರು-ಪಾತೂರು 3.2 ಕಿ.ಮೀ ರಸ್ತೆಗೆ 1.92 ಕೋ.ರೂ.

8. ಮಾರಿಪಳ್ಳ-ಕಲ್ಪನೆ 1.22 ಕಿ.ಮೀ. ರಸ್ತೆಗೆ 73 ಲ.ರೂ.

9. ನಿಂತಿಕಲ್ಲು-ಬೆಳ್ಳಾರೆ-ನೆಟ್ಟಾರು 6.2 ಕಿ.ಮೀ. ರಸ್ತೆ ಮೇಲ್ದರ್ಜೆಗೇರಿಸಲು 3.72 ಕೋ.ರೂ.

10. ಸುಳ್ಯ-ಪೈಚಾರು-ಬೆಳ್ಳಾರೆ 3.8 ಕಿಮೀ ರಸ್ತೆ ಮೇಲ್ದರ್ಜೆಗೇರಿಸಲು 2.28 ಕೋ.ರೂ.

11. ರಾಜ್ಯ ಹೆದ್ದಾರಿ ಸುಬ್ರಹ್ಮಣ್ಯ-ಮಂಜೇಶ್ವರದ 5.2 ಕಿಮೀ ರಸ್ತೆಗೆ 3.12ಕೋ.ರೂ.

12. ಪುತ್ತೂರು ತಾಲೂಕಿನ ನಿಂತಿಕಲ್ಲು-ಬೆಳ್ಳಾರೆ-ನೆಟ್ಟಾರು-ಅಮ್ಚಿನಡ್ಕ-ಕಾವು-ಈಶ್ವರಮಂಗಲ-ಪಲ್ಲತ್ತಾರು ರಾಜ್ಯ ಹೆದ್ದಾರಿಯಿಂದ ಜಿಲ್ಲಾರಸ್ತೆಗೆ ಸಂಪರ್ಕದ 4.8 ಕಿ.ಮೀ ರಸ್ತೆ ಕಾಮಗಾರಿಗೆ 2.88 ಕೋ.ರೂ.

13. ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ-ಉಪ್ಪಿನಂಗಡಿ 10 ಕಿಮೀ ರಸ್ತೆ ಕಾಮಗಾರಿಗಳಿಗೆ 6 ಕೋ.ರೂ.

14. ಮಂಗಳೂರು ತಾಲೂಕಿನ ಪುನರೂರು-ಶಾಂತಿಪಲ್ಕೆ-ದಾಮಸ್ಕಟ್ಟೆಯ 11.7 ಕಿ.ಮೀ.ರಸ್ತೆ ನವೀಕರಣಕ್ಕೆ 6 ಕೋ.ರೂ.

15. ಮಂಗಳೂರು ತಾಲೂಕಿನ ಭಟ್ರಕೆರೆ-ಕತ್ತಲ್ಸರ್ -ಕುಕ್ಕುದಕಟ್ಟೆ- ನೀರ್ಕೆರೆ-ತೋಡಾರು -ಮಾಸ್ತಿಕಟ್ಟೆ 6.1 ಕಿ.ಮೀ. ಜಿಲ್ಲಾ ರಸ್ತೆಗೆ 3ಕೋ.ರೂ.

16. ಸಂಪಿಗೆ-ಅಶ್ವಥಪುರ -ನೀರ್ಕೆರೆ -ಮಿಜಾರು 6.5ಕಿ.ಮೀ. ಜಿಲ್ಲಾ ರಸ್ತೆ ಅಭಿವೃದ್ದಿಗೆ 3ಕೋ.ರೂ.

Advertisement

Udayavani is now on Telegram. Click here to join our channel and stay updated with the latest news.