Advertisement
ದ.ಕ. ಮತ್ತು ಉಡುಪಿ ಭಾಗದಿಂದ ಪ್ರತೀ ವರ್ಷ ಲಕ್ಷಾಂತರ ಅಯ್ಯಪ್ಪ ಮಾಲಾಧಾರಿಗಳು 48 ದಿನಗಳ ಕಠಿನ ವೃತಾಚರಣೆ ಪಾಲಿಸಿಕೊಂಡು ತೆರಳುತ್ತಾರೆ. ಆದರೆ ಈ ಬಾರಿ ಕೊರೊನಾ ಮತ್ತು ಕಠಿನ ನಿಯಮಾವಳಿಯ ಪರಿಣಾಮ ಶೇ. 90ರಷ್ಟು ಮಾಲಾಧಾರಿಗಳ ಸಂಖ್ಯೆ ಕಡಿಮೆಯಾಗಿದೆ ಎನ್ನಲಾಗಿದೆ. ಈಗ ರೈಲು ಸೇವೆ ಕೂಡ ಪೂರ್ಣಮಟ್ಟದಲ್ಲಿ ಇಲ್ಲದೆ ಯಾತ್ರೆಗೆ ಮತ್ತಷ್ಟು ಸಮಸ್ಯೆ ಉಂಟಾಗಿದೆ.
ಕೇರಳ ಬಿಗಿ ನಿಯಮಾವಳಿ ರೂಪಿಸಿದೆ. ದಿನಕ್ಕೆ ಲಕ್ಷಾಂತರ ಭಕ್ತರು ಆಗಮಿಸುವಲ್ಲಿ ಸದ್ಯ 2,000 ಮಂದಿ ಮಾತ್ರ ತೆರಳುವಂತೆ ನಿರ್ಬಂಧಿಸಿದೆ. ಜತೆಗೆ ಆನ್‌ಲೈನ್ ಮೂಲಕ ಟಿಕೆಟ್ ಪಡೆದು ಆಗಮಿಸುವಂತೆ ಸೂಚಿಸಿದೆ. ಈ ನಿಯಮ ಅಯ್ಯಪ್ಪ ಮಾಲಾಧಾರಿಗಳಿಗೆ ಸಮಸ್ಯೆಯಾಗಿದೆ. ಭಕ್ತರಿಗೆ ಬೇಕಾದ ದಿನ ಸಿಗುವುದಿಲ್ಲ ಜತೆಗೆ ಪ್ರತೀ ದಿನವೂ ಬುಕ್ಕಿಂಗ್ ಮಾಡಲು ಬಯಸಿದಾಗ “ಫುಲ್’ ಎಂಬ ಒಕ್ಕಣೆ ಬರುತ್ತಿದೆ. ಈ ಮಧ್ಯೆ ಕರಾವಳಿಯಿಂದ ಅರ್ಜಿ ಸಲ್ಲಿಸಿದ ಶೇ.50ಕ್ಕೂ ಅಧಿಕ ಮಂದಿಗೆ ಇನ್ನೂ ದಿನಾಂಕ ಸಿಕ್ಕಿಲ್ಲ!. ಟಿಕೆಟ್ ಸಿಗದಿದ್ದರೆ ಮನೆಯಲ್ಲಿಯೇ ಅಥವಾ ಸ್ಥಳೀಯ ಅಯ್ಯಪ್ಪ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಅನ್ನದಾನ ಸೇವೆ ನೀಡುವ ಬಗ್ಗೆ ಹಲವು ಭಕ್ತರು ಚಿಂತನೆ ನಡೆಸಿದ್ದಾರೆ. ಪಂಪಾ ಸ್ನಾನವಿಲ್ಲ!
ಯಾತ್ರೆಯ ಸಂಪ್ರದಾಯದ ಪ್ರಕಾರ ಪಂಪಾ ನದಿಯಲ್ಲಿ ಸ್ನಾನ ಮಾಡಿ ಹರಕೆ ರೂಪದಲ್ಲಿ ಅಭಿಷೇಕ ಸಲ್ಲಿಸಬೇಕು. ಆದರೆ ಈಗ ಇದಕ್ಕೆ ನಿಷೇಧವಿದೆ. ಇರುಮುಡಿಯನ್ನು ಕೌಂಟರ್‌ನಲ್ಲಿ ತೆಗೆದುಕೊಂಡು ರಶೀದಿ ನೀಡಲಾಗುತ್ತಿದೆ.
Related Articles
ಯಾತ್ರೆ ಮುನ್ನ ಟೆಸ್ಟ್ ಮಾಡಿಸಿದರೂ ಅಲ್ಲಿ 650 ರೂ. ಪಾವತಿಸಿ ಮತ್ತೆ ರಿಪೋರ್ಟ್ ಮಾಡಿಸ ಬೇಕು. ಅನಂತರವಷ್ಟೇ ಕ್ಷೇತ್ರಕ್ಕೆ ತೆರಳಬೇಕು.
Advertisement
ಪ್ರತೀ ವರ್ಷ 1.50 ಲಕ್ಷ ಮಾಲಾಧಾರಿಗಳು!ಅವರ ಪ್ರಕಾರ, ದ.ಕ. ಜಿಲ್ಲೆಯಲ್ಲಿ 2017ರಲ್ಲಿ 1ರಿಂದ 1.10 ಲಕ್ಷ ಮಂದಿ, 2018ರಲ್ಲಿ 90 ಸಾವಿರದಿಂದ 1 ಲಕ್ಷ ಮಂದಿ, 2019ರಲ್ಲಿ 1.20 ಲಕ್ಷದಿಂದ 1.30 ಲಕ್ಷ ಮಂದಿ ಮಾಲಾಧಾರಣೆ ಮಾಡಿ ಶಬರಿಮಲೆಗೆ ತೆರಳಿದ್ದಾರೆ. ಉಡುಪಿ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಮೆಂಡನ್ ಅವರ ಪ್ರಕಾರ, 2017ರಲ್ಲಿ 70 ಸಾವಿರ ಮಂದಿ, 2018ರಲ್ಲಿ 60 ಸಾವಿರ ಮಂದಿ, 2019ರಲ್ಲಿ 70 ಸಾವಿರ ಮಂದಿ ಶಬರಿಮಲೆಗೆ ತೆರಳಿದ್ದಾರೆ. ಆದರೆ ಈ ವರ್ಷ ಆನ್‌ಲೈನ್ ನಿಯಮವಿರುವ ಕಾರಣ ಈ ಸಂಖ್ಯೆ ಸದ್ಯ ಗೊತ್ತಾಗುತ್ತಿಲ್ಲ ಎಂದವರು ತಿಳಿಸಿದ್ದಾರೆ. ಭವನಂ ಸನ್ನಿಧಾನಂ !
ಸರಕಾರ ಮೂಲ ಸೌಕರ್ಯ ಕಲ್ಪಿಸದ ಕಾರಣ ಭಕ್ತರು ಈ ಬಾರಿ ಯಾತ್ರೆ ಕೈಗೊಳ್ಳುವ ಬದಲು ವೃತಾಚರಣೆ ಮಾಡಿ ಮನೆಯಲ್ಲಿಯೇ (ಭವನಂ ಸನ್ನಿಧಾನಂ)ಅಯ್ಯಪ್ಪನ ಆರಾಧನೆ ಮಾಡಿಕೊಂಡು ಸ್ಥಳೀಯ ಅಯ್ಯಪ್ಪ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸುವಂತೆ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ದ.ಕ. ಜಿಲ್ಲಾಧ್ಯಕ್ಷ ಗಣೇಶ್ ಪೊದುವಾಳ್ ಅವರು ಮನವಿ ಮಾಡಿದ್ದಾರೆ. ಶೇ.90ರಷ್ಟು ಕಡಿಮೆ
ಶಬರಿಮಲೆಗೆ ಈ ಬಾರಿ 2000 ಮಂದಿಗೆ ಮಾತ್ರ ಅವಕಾಶ ನೀಡಿದ ಕಾರಣ ಶೇ.90ರಷ್ಟು ಮಂದಿ ಮಾಲಾಧಾರಣೆ ಮಾಡಿಲ್ಲ. ಆನ್‌ಲೈನ್‌ನಲ್ಲೂ ಟಿಕೆಟ್ ಸಿಗುತ್ತಿಲ್ಲ. ಪಂಪೆಯಲ್ಲಿ ಸ್ನಾನಕ್ಕೂ ಅವಕಾಶ ಇಲ್ಲ. ಆದರೆ ವೃತ ಮಾಡಿದ್ದರೆ ಪಂದಳಕ್ಕೆ ಹೋಗಲು ಅವಕಾಶವಿದೆ.
ವಿಕ್ರಮ್ ಸ್ವಾಮೀಜಿ ಕದ್ರಿ, ಹಿರಿಯ ಗುರು ಸ್ವಾಮಿ