Advertisement

ಕಠಿಣ ಲಾಕ್‌ ಡೌನ್‌ 3ನೇ ದಿನ 38 ವಾಹನ ಜಪ್ತಿ

05:54 PM May 23, 2021 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೊರೊನಾ ಸೋಂಕುತಡೆಗಟ್ಟಲು ಜಿಲ್ಲಾಡಳಿತ ಕಠಿಣ ಲಾಕ್‌ಡೌನ್‌ಘೋಷಣೆ ಮಾಡಿದ್ದು, 3ನೇ ದಿನವೂ ರೇಷ್ಮೆ ನಾಡ ಸಂಪೂರ್ಣ ಸ್ತಬ್ಧವಾಗಿತ್ತು.

Advertisement

ಕೊರೊನಾ ಸೋಂಕು ನಿಯಂತ್ರಿಸಲು ಸರ್ಕಾರಹಲವು ಕ್ರಮಗಳನ್ನು ಕೈಗೊಂಡರೂ ನಾಗರಿಕರ ಅಸಹಕಾರದಿಂದ ಸೋಂಕು ನಿಯಂತ್ರಣಕ್ಕೆ ಬಂದಿರಲಿಲ್ಲ. ಬೆಳಗ್ಗೆ 6ರಿಂದ 10ಗಂಟೆವರೆಗೆ ದಿನಸಿಸೇರಿ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಿದ್ದನ್ನೇ ದುರ್ಬಳಕೆ ಮಾಡಿಕೊಂಡ ಜನರು ಕೊರೊನಾನಿಯಮ ಪಾಲಿಸದೇ, ರಸ್ತೆಗಳಲ್ಲಿ, ಮಾರುಕಟ್ಟೆಗಳಲ್ಲಿ,ಅಂಗಡಿಗಳ ಮುಂದೆ ಗುಂಪಾಗಿ ನಿಲ್ಲುತ್ತಿದ್ದರು.

ಇದರಿಂದ ಸೋಂಕು ಮತ್ತಷ್ಟು ಹೆಚ್ಚುವ ಆತಂಕಎದುರಾಗಿತ್ತು. ಹೀಗಾಗಿ, ಜಿಲ್ಲಾಡಳಿತ ಮೇ 23 ತನಕಅಗತ್ಯ ವಸ್ತುಗಳ ಖರೀದಿಗೂ ಅವಕಾಶವಿಲ್ಲದಂತೆಕಠಿಣ ಲಾಕ್‌ಡೌನ್‌ ಘೋಷಣೆ ಮಾಡಿದೆ. ಇದರಿಂದ ಜಿಲ್ಲಾದ್ಯಂತ ಜನ ಮತ್ತು ವಾಹನ ಸಂಚಾರ ಇಲ್ಲದೇಪ್ರಮುಖ ಬೀದಿಗಳು ಬಿಕೋ ಎನ್ನುತ್ತಿವೆ.

ಮಾರುಕಟ್ಟೆ ನಿಯಮ ಉಲ್ಲಂಘನೆ: ಜಿಲ್ಲೆಯಶಿಡ್ಲಘಟ್ಟ ನಗರದ ಸರ್ಕಾರಿ ರೇಷ್ಮೆ ಗೂಡಿನಮಾರುಕಟ್ಟೆಯಲ್ಲಿ ಎಂದಿನಂತೆ ಮೂರನೇ ದಿನವೂವ್ಯಾಪಾರ ವಹಿವಾಟು ನಡೆದಿದೆ. ರೇಷ್ಮೆ ಬೆಳೆಗಾರರುಮತ್ತು ನೂಲು ಬಿಚ್ಚಾಣಿಕೆದಾರರು ಇ ಹರಾಜುಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.

ಸಾಮಾಜಿಕಅಂತರಕ್ಕೆ ತಿಲಾಂಜಲಿ ಇಟ್ಟು ವ್ಯಾಪಾರ ವಹಿವಾಟುನಡೆಯುತ್ತಿದೆ ಎಂದು ದೂರುಗಳು ಕೇಳಿ ಬರುತ್ತಿದೆ. ಜಿಲ್ಲೆಯಲ್ಲಿ ಲಾಕ್‌ಡೌನ್‌ಗೆ ಸಹಕಾರ ನೀಡಿರುವನಾಗರಿಕರು, ದಿನಸಿಗಾಗಿ ಪರದಾಡುವಂತಹ ಪರಿಸ್ಥಿತಿನಿರ್ಮಾಣವಾಗಿದೆ.ಜಿಲ್ಲೆಯಲ್ಲಿ ಹಾಲಿನ ಮಳಿಗೆಗಳಿಗೆ ಬೆಳಗ್ಗೆ 6ರಿಂದ10 ಗಂಟೆವರೆಗೆ ಹಾಲು ಮಾರಾಟ ಮಾಡಲುಅನುಮತಿ ನೀಡಿರುವ ಮಾದರಿಯಲ್ಲಿ ಕನಿಷ್ಠ 1ಗಂಟೆಯಾದರೂದಿನಸಿ ಸಾಮಗ್ರಿಗಳನ್ನು ಖರೀದಿಸಲುಜಿಲ್ಲಾಡಳಿತ ಅನುಕೂಲ ಮಾಡಿಕೊಡಬೇಕೆಂದುಸಾರ್ವಜನಿಕರು ಒತ್ತಾಯಿಸಿದ್ದರು.

Advertisement

ಒಂದು ವೇಳೆಯಲ್ಲಿ ಅದು ಸಾಧ್ಯವಾಗದಿದ್ದರೇ, ದಿನಸಿ ಅಂಗಡಿಗಳ ವ್ಯಾಪಾರಿಗಳಿಗೆ ಕನಿಷ್ಠಮನೆಗಳಿಗೇ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲು ಅವಕಾಶ ಕಲ್ಪಿಸಬೇಕೆಂದು ವಿನಂತಿಸಿದ್ದಾರೆ.

ಪೊಲೀಸ್‌ ಬಂದೋಬಸ್ತ್: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಿಥುನ್‌ಕುಮಾರ್‌ ಅವರು ಜಿಲ್ಲೆಯ ವಿವಿಧಭಾಗಗಳಿಗೆ ಭೇಟಿ ನೀಡಿ ಲಾಕ್‌ಡೌನ್‌ ಯಶಸ್ವಿಗೊಳಿಸಲು ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿದರು.ಅದೇ ರೀತಿಯಲ್ಲಿ ಚಿಕ್ಕಬಳ್ಳಾಪುರ ಡಿವೈಎಸ್ಪಿ ರವಿಶಂಕರ್‌, ಚಿಂತಾಮಣಿ ಡಿವೈಎಸ್ಪಿ ಲಕ್ಷ್ಮಯ್ಯ ಹಾಗೂ ಜಿಲ್ಲೆಯ ಪೊಲೀಸ್‌ ಅಧಿಕಾರಿಗಳು ಗಸ್ತು ನಡೆಸಿದ್ದಾರೆ.

ಆದರೂ, ಪೊಲೀಸರ ಕಣ್ಣುತಪ್ಪಿಸಿ ಆರೋಗ್ಯದಸಮಸ್ಯೆಯೆಂದು ನೆಪವೊಡ್ಡಿ ಕೆಲವರು ಅನಗತ್ಯವಾಗಿವಾಹನಗಳಲ್ಲಿ ಸಂಚರಿಸುತ್ತಿರುವ ದೂರುಗಳು ಸಹಕೇಳಿಬಂದಿದೆ. ಈ ನಿಟ್ಟಿನಲ್ಲಿ ಪೊಲೀಸ್‌ ಅಧಿಕಾರಿಗಳುಕ್ರಮಕೈಗೊಳ್ಳಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next