Advertisement

ಕಠಿಣ ಪರಿಶ್ರಮ ಯಶಸ್ವಿನ ಗುಟ್ಟು: ಕೌಂಟಗಿಮಠ 

05:39 PM Apr 20, 2018 | Team Udayavani |

ಮಹಾಲಿಂಗಪುರ: ಜಗತ್ತಿನಲ್ಲಿ ಯಾರು ದಡ್ಡರಲ್ಲ. ಪ್ರತಿಯೊಬ್ಬರು ಒಂದೊಂದು ರೀತಿಯ ಕೌಶಲ್ಯ ಹೊಂದಿರುತ್ತಾರೆ. ಅಸಾಧ್ಯವಾದುದು ಯಾವುದು ಇಲ್ಲ. ಮನಸ್ಸು ಮಾಡಬೇಕು ಎಂದು ಪ್ರತಿಭಾನ್ವಿತ ವಿದ್ಯಾರ್ಥಿ ದಾನಯ್ಯ ಕೌಂಟಗಿಮಠ ಹೇಳಿದರು.

Advertisement

ಸ್ಥಳೀಯ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಕಲಾ, ವಿಜ್ಞಾನ ಹಾಗೂ ಡಿ.ಡಿ.ಎಸ್‌ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕಾಲೇಜಿನ ಸಭಾಭವನದಲ್ಲಿ ಆಯೋಜಿಸಲಾದ 31ನೇ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಅವರು ಮಾತನಾಡಿದರು. ಜೀವನದಲ್ಲಿ ಕೇವಲ ಅಂಕ ಗಳಿಸುವುದು ಮುಖ್ಯವಲ್ಲ. ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಶಿಕ್ಷಣ ಇರುವುದು
ಕೇವಲ ಉದ್ಯೋಗಕ್ಕಾಗಿ ಅಲ್ಲ. ಮನುಷ್ಯನಲ್ಲಿ ಅದು ಉತ್ತಮ ಸಂಸ್ಕಾರ ಬೆಳೆಸಬೇಕು. ಪ್ರತಿಯೊಬ್ಬರು ಉತ್ತಮ ಗುರಿ ಇಟ್ಟುಕೊಂಡಿರಬೇಕು. ಕಠಿಣ ಪರಿಶ್ರಮವಿದ್ದರೆ ಎಂಥಹ ಯಶಸ್ಸು ನಮ್ಮದಾಗುತ್ತದೆ.

ವಿದ್ಯಾರ್ಥಿಗಳಲ್ಲಿ ಸಾಧನೆ ಹುಚ್ಚು ಇರಬೇಕು. ಜೀವನದಲ್ಲಿ ಕಷ್ಟ, ಬಡತನ, ಅವಮಾನ ಇದ್ದರೆ ಸಾಧನೆ ದಾರಿ ಕಾಣುತ್ತದೆ. ಗೆಳೆತನದಲ್ಲೂ ಅಷ್ಟೇ, ನಮ್ಮ ಸುತ್ತಮುತ್ತ ಒಳ್ಳೆಯ ಸ್ನೇಹಿತರನ್ನು ಹೊಂದಿರಬೇಕು. ಒಬ್ಬ ಉತ್ತಮ ಗೆಳೆಯ ಒಂದು ಗ್ರಂಥಾಲಯವಿದ್ದಂತೆ ಎಂದು ತಿಳಿಸಿದರು.

ಆರ್‌ಸಿಯು ಶಿಕ್ಷಕರ ಸಂಘದ ಅಧ್ಯಕ್ಷ ಡಾ. ಚಂದ್ರಶೇಖರ ಗುಡಸಿ ಮಾತನಾಡಿ, ಯಶಸ್ಸಿಗೆ ಕಠಿಣ ಪರಿಶ್ರಮವೊಂದೆ ಮಾರ್ಗ. ವ್ಯಕ್ತಿಗೆ ಸಂವಹನ ಕಲೆ ಅತ್ಯಂತ ಮುಖ್ಯವಾದದ್ದು. ಪರಿಣಾಮಕಾರಿ ಸಂವಹನದಿಂದಾಗಿ ಜಗತ್ತನ್ನೇ ಗೆಲ್ಲಬಹುದು. ಜೀವನದಲ್ಲಿ ಸ್ವಾತಂತ್ರ್ಯ ಎಷ್ಟು ಮುಖ್ಯವೋ ಅಷ್ಟೇ ಜವಾಬ್ದಾರಿಗಳು ಮುಖ್ಯ ಎಂದರು.

ಕ್ರೀಡಾ ಸಾಧಕ ಮತ್ತು ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸ್ಥಳೀಯ ಆಡಳಿತ
ಮಂಡಳಿ ಸದಸ್ಯ ಬಿ.ಎ. ಬಂತಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಚಾರ್ಯ ಡಾ.ಬಿ.ಎಂ. ಪಾಟೀಲ, ವಿ.ಎಂ.
ಮುಜಾವರ, ಎಸ್‌.ಬಿ. ಬಿರಾದಾರ, ವಿ.ಎಸ್‌. ಅಂಗಡಿ, ಎ. ಎಂ. ಉಗಾರೆ, ಆರ್‌.ಎಸ್‌. ಪೂಜಾರಿ, ವಿ.ಎಂ. ಮುಜಾವರ, ಕೆ.ಎಂ. ಅವರಾದಿ, ಶ್ರೇಯಾ ಮಠಪತಿ, ಅಶೋಕ ನರೋಡೆ, ಜಿ.ಎ. ಮಠಪತಿ ಸೇರಿದಂತೆ ಹಲವರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next