Advertisement

Udupi ಖಾಸಗಿ ಬಸ್‌ ಮಾಲಕರ ಮುಷ್ಕರ ಹಿಂದೆಗೆತ

12:10 AM Aug 21, 2024 | Team Udayavani |

ಉಡುಪಿ: ಬಸ್‌ಗಳ ಮೇಲೆ ಹೆಚ್ಚುವರಿ ಟೋಲ್‌ ದರ ವಿಧಿಸುತ್ತಿರುವ ಹೆಜಮಾಡಿ ಹಾಗೂ ಸಾಸ್ತಾನ ಟೋಲ್‌ ಕೇಂದ್ರಗಳ ವಿರುದ್ಧ ಆ.23ರಂದು ಕೈಗೊಳ್ಳಲು ಉದ್ದೇಶಿಸಿದ್ದ ಮೌನ ಪ್ರತಿಭಟನೆಯನ್ನು ಕೆನರಾ ಬಸ್‌ ಮಾಲಕರ ಸಂಘವು ಹಿಂಪಡೆದಿದೆ.

Advertisement

ಪ್ರಸ್ತುತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆ. 19ರಂದು ಸದ್ಯಕ್ಕೆ ಹೆಚ್ಚುವರಿ ಶುಲ್ಕ ವಸೂಲಾತಿಯನ್ನು ಮುಂದಿನ ಆದೇಶದವರೆಗೆ ಸ್ಥಗಿತಗೊಳಿ ಸಿರುವುದಾಗಿ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಡಲಾಗಿದೆ. ಒಂದು ವೇಳೆ ಮರಳಿ ವಿಧಿಸಿದರೆ ಮತ್ತೆ ಪ್ರತಿಭಟಿಸುವುದಾಗಿ ಸಂಘದ ಪ್ರಧಾನ ಕಾರ್ಯದರ್ಶಿ ಕುಯಿಲಾಡಿ ಸುರೇಶ್‌ ನಾಯಕ್‌ ತಿಳಿಸಿದ್ದಾರೆ.

ಸೋಮವಾರವಷ್ಟೇ ಪ್ರತಿಭಟನೆಗೆ ಮನವಿ ಕೋರಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಈ ಬಗ್ಗೆ ಹೆದ್ದಾರಿ ಇಲಾಖೆಗೂ ಮಾಹಿತಿ ನೀಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next