Advertisement

ಹೆಚ್ಚು ಶುಲ್ಕ ಪಡೆದರೆ ಕಠಿಣ ಕ್ರಮ 

06:55 AM Jun 11, 2018 | Team Udayavani |

ಧಾರವಾಡ: ಶಿಕ್ಷಣ ಇಲಾಖೆ ನಿಗದಿಪಡಿಸಿರುವ ಶುಲ್ಕಕ್ಕಿಂತ ಹೆಚ್ಚು ಶುಲ್ಕ, ಡೋನೇಶನ್‌ ಹಾಗೂ ಇತರ ಶುಲ್ಕಗಳ ಹೆಸರಿನಲ್ಲಿ ಹೆಚ್ಚು ಹಣ ಪಡೆಯುವ ಖಾಸಗಿ ಶಾಲೆಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಕೈಗೊಳ್ಳುವಂತೆ ಸೂಚನೆ ನೀಡಿರುವುದಾಗಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ|ಶಾಲಿನಿ ರಜನೀಶ ಹೇಳಿದರು. 

Advertisement

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಣ ವಸೂಲಿ ಕುರಿತು ಅನೇಕ ದೂರು ಗಳು ಬಂದಿವೆ. ಹೀಗಾಗಿ ಸರ್ಕಾರ ಆದೇಶ ಹೊರಡಿಸಿ ದಂತೆ ಪ್ರವೇಶ ಶುಲ್ಕ ಪಡೆಯುತ್ತಿದ್ದಾರೆಯೇ ಹಾಗೂ ಶುಲ್ಕಗಳ ಮಾಹಿತಿಯನ್ನು ನೋಟಿಸ್‌ ಬೋಡ್‌ ìನಲ್ಲಿ ಅಳವಡಿಸಿದ್ದಾರೆಯೇ ಎಂಬುದನ್ನು ಡಿಡಿಪಿಐ ಪರಿಶೀಲನೆ ನಡೆಸಬೇಕು. ಒಂದು ವೇಳೆ ಶಾಲೆ ನಿಯಮ ಪಾಲಿಸದೆ ಇದ್ದಲ್ಲಿ ಕಠಿಣ ಕ್ರಮ ಕೈಗೊಳ್ಳ ಬೇಕು. ಹೀಗಾಗಿ, ಜಿಲ್ಲಾಧಿಕಾರಿ ಅ ಧೀನದಲ್ಲಿರುವ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರಕ್ಕೂ ಸಹ ಮಾಹಿತಿ ಅಥವಾ ದೂರು ನೀಡಬಹುದು ಎಂದರು.

ತಿಂಗಳೊಳಗೆ ಬಯೋಮೆಟ್ರಿಕ್‌ ಜಾರಿ: ಶಿಕ್ಷಕರು ಪಾಠ ಕಲಿಸುವುದನ್ನು ಬಿಟ್ಟು ರಾಜಕೀಯ ಮಾಡುತ್ತಿದ್ದಾರೆ.
ಈ ಕುರಿತು ಸ್ಥಳೀಯರಿಂದ ಅನೇಕ ದೂರುಗಳು ಬಂದಿದೆ. ಹೀಗಾಗಿ, ಶಾಲೆಗಳಲ್ಲಿ ಶಿಕ್ಷಕರ ಹಾಜರಾತಿಗಾಗಿ ಬಯೋಮೆಟ್ರಿಕ್‌ ವ್ಯವಸ್ಥೆ ಮಾಡಲಾಗುವುದು. ಆ ಮೂಲಕ ಆಯಾ ಸ್ಥಳೀಯ ಅ ಧಿಕಾರಿಗಳು ಹಾಗೂ ರಾಜ್ಯಮಟ್ಟದ ಅ ಧಿಕಾರಿಗಳಿಗೆ ಶಿಕ್ಷಕರ ಹಾಜರಾತಿ ಮಾಹಿತಿ ಸರಳವಾಗಿ ದೊರೆಯಲಿದೆ. ಇದಕ್ಕಾಗಿ ಈಗಾಗಲೇ ಸಾಫ್ಟವೇರ್‌ ಸಿದಟಛಿವಾಗಿದ್ದು, ಇನ್ನೊಂದು ತಿಂಗಳೊಳಗಾಗಿ ಜಾರಿ ಮಾಡಲಾಗುವುದು ಎಂದರು.

ಮಕ್ಕಳಿಗೆ ನೀಡುವ ಉಚಿತ ಪಠ್ಯಪುಸ್ತಕಗಳ ವಿತರಣೆ ಕಾರ್ಯ ಶೇ.90ರಷ್ಟಾಗಿದ್ದು, ಸಮವಸ್ತ್ರಗಳು ಇನ್ನೂ  
ಬರಬೇಕಿದೆ. ಇವುಗಳನ್ನು ಶೀಘ್ರದಲ್ಲೇ ವಿತರಿಸುವ ಕಾರ್ಯ ನಡೆಯಲಿದೆ. ಇದಲ್ಲದೇ ಚುನಾವಣೆ ನೀತಿ
ಸಂಹಿತೆಯಿಂದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಹಿನ್ನಡೆಯಾಗಿತ್ತು. ಇದೀಗ ಜೂ.16ರ ನಂತರ ವರ್ಗಾವಣೆಗೆ ಚಾಲನೆ ದೊರೆಯಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next