Advertisement

ಕಾರ್ಗಿಲ್‌ ಯುದ್ಧದಲ್ಲಿ ಭಾಗಿಯಾದ ಯೋಧಗೆ ಹೃದಯಸ್ಪರ್ಶಿ ಸ್ಪಾಗತ

08:51 PM Nov 07, 2021 | Team Udayavani |

ಧಾರವಾಡ: ಬಿಎಸ್‌ಎಫ್‌ ಯೋಧರಾಗಿ ಸುದೀರ್ಘ‌ 29 ವರ್ಷಗಳ ಕಾಲ ದೇಶ ಸೇವೆಗೈದು ಇದೀಗ ನಿವೃತ್ತಿ ಹೊಂದಿ ಸ್ವಗ್ರಾಮವಾದ ಉಪ್ಪಿನಬೆಟಗೇರಿ ಗ್ರಾಮಕ್ಕೆ ಆಗಮಿಸಿದ ಅಶೋಕ ಬಸಪ್ಪ ವಿಜಾಪುರ ಅವರಿಗೆ ಗ್ರಾಮಸ್ಥರಿಂದ ಹೃದಯಸ್ಪರ್ಶಿ ಸ್ವಾಗತ ಕೋರಲಾಯಿತು.

Advertisement

ದೀಪಾವಳಿ ಬಲಿಪಾಡ್ಯ ದಿನವಾದ ಶುಕ್ರವಾರ ದಿನವೇ ತಮ್ಮ ಇಬ್ಬರು ಮಕ್ಕಳೊಂದಿಗೆ ಸಮವಸ್ತ್ರದಲ್ಲಿ ಪತ್ನಿಯೊಂದಿಗೆ ಸ್ವಗ್ರಾಮಕ್ಕೆ ಆಗಮಿಸಿದ ಅಶೋಕ ಅವರಿಗೆ ಹೂಮಾಲೆ ಹಾಕಿ, ಆರತಿ ಬೆಳಗಿ, ಹಣೆಗೆ ತಿಲಕವಿಟ್ಟು, ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯಿತು.

1993ರಲ್ಲಿ ಗಡಿ ಭದ್ರತಾ ಪಡೆ ಸೇರಿದ ಯೋಧ ಅಶೋಕ ವಿಜಾಪುರ ಕಾರ್ಗಿಲ್‌ ಯುದ್ಧದಲ್ಲಿ ಪಾಲ್ಗೊಂಡಿದ್ದರು. ಇದಲ್ಲದೇ ಸೇವಾವ ಧಿಯಲ್ಲಿ ಜಮ್ಮು-ಕಾಶ್ಮೀರ ಹಾಗೂ ಪಂಜಾಬ ರಾಜ್ಯಗಳಲ್ಲಿ, ನಕ್ಸಲರ ಹಾವಳಿಯಿರುವ ಛತ್ತಿಸಗಡದಲ್ಲಿ, ಬಾಂಗ್ಲಾ ದೇಶದ ಗಡಿಗೆ ಹೊಂದಿಕೊಂಡಿರುವ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಸೇವೆ ಸಲ್ಲಿಸಿದ್ದಾರೆ. ಇದೀಗ ಸುದೀರ್ಘ‌ 29 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಬಳಿಕ ಆಗಮಿಸಿದ ಅವರು ಮೊದಲು ಗ್ರಾಮದ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಅಲ್ಲಿಂದ ಮಲ್ಲಿಕಾರ್ಜುನ ದೇವಸ್ಥಾನದವರೆಗೆ ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು ಮೆರವಣಿಗೆ ಮೂಲಕ ಸಡಗರದಿಂದ ಬರಮಾಡಿಕೊಂಡರು.

ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಗ್ರಾಪಂ ಆಡಳಿತ ಮಂಡಳಿ ಹಾಗೂ ವಿದ್ಯಾದಾನ ಸಮಿತಿ ವ್ಯವಸ್ಥಾಪಕ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ನಾಗರಿಕ ಸನ್ಮಾನ ಸಮಾರಂಭದಲ್ಲಿ ದಂಪತಿ ಸಮೇತ ಅವರನ್ನು ವಿವಿಧ ಸಂಘ-ಸಂಸ್ಥೆಗಳಿಂದ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅಶೋಕ ಬಸಪ್ಪ ವಿಜಾಪುರ, ಭಾರತಾಂಬೆಯ ಸೇವೆ ಸಲ್ಲಿಸಿ ಇದೀಗ ಸ್ವಗ್ರಾಮಕ್ಕೆ ಬಂದಿರುವೆ. ಈಗ ಸಿಕ್ಕಿರುವ ಸ್ವಾಗತ, ಪ್ರೀತಿ ಕಂಡು ಸಂತೋಷ, ಅಭಿಮಾನ ಉಂಟಾಗಿದೆ. ಪ್ರತಿ ಮನೆಯಿಂದ ಒಬ್ಬರಾದರೂ ಸೈನಿಕರಾಗಬೇಕು ಎಂಬುದೇ ನನ್ನ ಬಯಕೆಯಾಗಿದೆ ಎಂದರು. ಜಿಪಂ ಮಾಜಿ ಸದಸ್ಯ ಕಲ್ಲಪ್ಪ ಪುಡಕಲಕಟ್ಟಿ, ಗ್ರಾಪಂ ಅಧ್ಯಕ್ಷ ಲಕ್ಷ್ಮೀ ಆಯೆಟ್ಟಿ, ಹಿರಿಯರಾದ ವೀರಣ್ಣಾ ಪರಾಂಡೆ, ಚನ್ನಬಸಪ್ಪ ಮಸೂತಿ, ಗಂಗಪ್ಪ ಜವಳಗಿ, ಬಾಬಾ ಮೊಯುದ್ದೀನ ಚೌಧರಿ, ರಾಮಲಿಂಗಪ್ಪ ನವಲಗುಂದ, ಮಲ್ಲಣ್ಣ ಅಷ್ಟಗಿ, ಪಿಡಿಒ ಬಿ.ಎ.ಬಾವಾಖಾನವರ, ಗ್ರಾಪಂ ಸದಸ್ಯ ಬಸೀರಹ್ಮದ ಮಾಳಗಿಮನಿ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next