Advertisement

ತೋಟಿ ಏತನೀರಾವರಿ ಯೋಜನೆ ಶೀಘ್ರ ಪೂರ್ಣ

06:15 AM Jun 14, 2020 | Lakshmi GovindaRaj |

ಚನ್ನರಾಯಪಟ್ಟಣ: ತೋಟಿ ಏತನೀರಾವರಿ ಯೋಜನೆ ಶೀಘ್ರದಲ್ಲಿ ಪೂರ್ಣಗೊಳ್ಳಲಿದ್ದು, ಮುಂದಿನ ಬೇಸಿಗೆ ಒಳಗೆ ಕೆರೆ ಕಟ್ಟೆ ತುಂಬಿಸಲಾಗುವುದು ಎಂದು ಶಾಸಕ ಸಿ.ಎನ್‌.ಬಾಲಕೃಷ್ಣ ಭರವಸೆ ನೀಡಿದರು. ಪಟ್ಟಣ ಹೊರ  ವಲಯದಲ್ಲಿ ಅಮಾನಿಕೆರೆ ಬಳಿ ನಡೆಯುತ್ತಿರುವ ಜಾಕ್‌ವೆಲ್‌ ಕಾಮಗಾರಿ ವೀಕ್ಷಣೆ ಮಾಡಿ ಮಾತನಾಡಿದ ಅವರು, ಕೆರೆಯಿಂದ 16 ಕಿ.ಮೀ. ಪೈಪ್‌ ಲೈನ್‌ ಕೆಲಸದಲ್ಲಿ 14 ಕಿ.ಮೀ. ಕೆಲಸ ಪೂರ್ಣಗೊಂಡಿದೆ.

Advertisement

ದಿಂಡಗೂರು ಬಳಿ ರೈತರುಅ ಕೃಷಿ  ಮಾಡಿರುವುದರಿಂದ ಬಾಕಿ ಉಳಿದಿದೆ. ಜಾಕ್‌ವೆಲ್‌ ಕೆಲಸ ತಳಪಾಯ ಹಾಕಲಾಗುತ್ತಿದ್ದು, ಮೂರು ತಿಂಗಳಲ್ಲಿ ಮುಕ್ತಾಯ ಹಂತ ತಲುಪಲಿದೆ ಎಂದು ಹೇಳಿದರು. 885 ಎಚ್‌ಪಿ ಸಾಮರ್ಥದ ಮೂರು ಯಂತ್ರದಲ್ಲಿ  ನೀರತ್ತಲಾಗುವುದು. ಒಂದು ಯಂತ್ರವನ್ನು ಕಾಯ್ದಿರಿಸ ಲಾಗುವುದು. ನೀರು ಹೊರ ಬೀಳುವ ಜಾಗದಿಂದ ವಿತರಣಾ ಪೈಪ್‌ಲೈನ್‌ ಕಾಮಗಾರಿಯನ್ನು ನಾಲ್ಕು ತಿಂಗಳಲ್ಲಿ ಮುಗಿಸಲಾಗುವುದು.

ಯಂತ್ರಾಗಾರಕ್ಕೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ಈಗಾಗಲೇ ಸರ್ವೆ ಕಾರ್ಯ ಮುಕ್ತಾಯವಾಗಿದೆ. ಯಂತ್ರಾಗಾರದ ಕಟ್ಟಡ  ಕಾಮಗಾರಿ ಮುಗಿಯುವದರೊಳಗೆ ವಿದ್ಯುತ್‌ ಕಂಬ ಅಳವಡಿಸಲಾಗುವುದು ಎಂದು ತಿಳಿಸಿದರು. ಯಂತ್ರಾಗಾರ ಕಟ್ಟಡ ನಿರ್ಮಾಣಕ್ಕೆ ಬಿದರೆ ವಿಜಯಮ್ಮ ಅವರು ಒಂದೂವರೆ ಎಕರೆ  ಕೃಷಿ ಭೂಮಿ ನೀಡಿದ್ದು, ಅವರಿಗೆ ಭೂ ಪರಿಹಾರ ಕೊಡಿಸಲಾಗು ವುದು. ಪೈಪ್‌ಲೈನ್‌ಗೆ ಭೂಮಿ ನೀಡಿರುವ ರೈತರಿಗೂ ಸರ್ಕಾರದಿಂದ ಪರಿಹಾರ ಕೊಡಿಸಲಾಗುವುದು.

ನುಗ್ಗೇ ಹಳ್ಳಿ ಏತನೀರಾವರಿ ಯೋಜನೆಗೆ ಭೂಮಿ ನೀಡಿದ ರೈತರಿಗೆ ಈಗಾಗಲೆ 77 ಲಕ್ಷ ಪರಿಹಾರ ಕೊಡಿಸಲಾಗಿದೆ ಎಂದರು. ಹಿರೀಸಾವೆ ಏತನೀರಾವರಿ ಯೋಜನೆ ನಡೆಯುತ್ತಿದ್ದು ಜುಟ್ಟನಹಳ್ಳಿ ಭಾಗಕ್ಕೆ ಶೀಘ್ರದಲ್ಲಿ ನೀರು ಹರಿಸಲಾಗುವುದು ಎಂದರು. ನೀರಾವರಿ ಇಲಾಖೆ ಅಧಿಕಾರಿ, ಕಾಮಗಾರಿ  ನಡೆಸುತ್ತಿರುವ ಖಾಸಗಿ ಸಂಸ್ಥೆ ಅಭಿಯಂತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next