Advertisement

ರಜಿನಿ ‘ಜೈಲರ್’ ಗೆ ಸೆಡ್ಡು ಹೊಡೆದ ‘ತೋತಾಪುರಿ- 2’

04:26 PM Jul 31, 2023 | Team Udayavani |

ಸೂಪರ್‌ಸ್ಟಾರ್‌ ರಜನಿಕಾಂತ್‌ ನಟನೆಯ ಬಹುನಿರೀಕ್ಷಿತ “ಜೈಲರ್‌’ ಚಿತ್ರ ಆಗಸ್ಟ್‌ 10 ರಂದು ತೆರೆಕಾಣುತ್ತಿದೆ. ಈ ಕಾರಣದಿಂದಲೇ ಆಗಸ್ಟ್‌ 11ರಂದು ಯಾವುದೇ ಕನ್ನಡ ಸಿನಿಮಾಗಳು ಬಿಡುಗಡೆಯನ್ನು ಅನೌನ್ಸ್‌ ಮಾಡಿರಲಿಲ್ಲ. ಆದರೆ, ಈಗ ಕನ್ನಡ ಚಿತ್ರವೊಂದು ಜೈಲರ್‌ ಮುಂದೆ ಬರಲು ರೆಡಿಯಾಗಿದೆ. ಅದು “ತೋತಾಪುರಿ-2′ ಚಿತ್ರ.

Advertisement

ಹೌದು ಜಗ್ಗೇಶ್‌-ಧನಂಜಯ್‌ ಕಾಂಬಿನೇಶನ್‌ನಲ್ಲಿ ಮೂಡಿಬಂದಿರುವ ಈ ಚಿತ್ರ ಆಗಸ್ಟ್‌ನಲ್ಲಿ ತೆರೆಕಾಣುವುದಾಗಿ ಹೇಳಿಕೊಂಡಿತ್ತು. ಆದರೆ, ಈಗ ಆಗಸ್ಟ್‌ 11ರಂದು ತೆರೆಗೆ ಬರಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಬಗ್ಗೆ ಮಾತನಾಡುವ ನಿರ್ಮಾಪಕ ಸುರೇಶ್‌, “ನಾವು ಆಗಸ್ಟ್‌ ಎರಡನೇ ವಾರ ಬರಲು ತಯಾರಿ ಮಾಡಿಕೊಳ್ಳುತ್ತಿರುವುದು ನಿಜ’ ಎನ್ನುತ್ತಾರೆ.

“ತೋತಾಪುರಿ-2’ನಲ್ಲಿ ಜಗ್ಗೇಶ್‌ ಜೊತೆಗೆ ಧನಂಜಯ್‌ ಅವರಿಗೂ ಪ್ರಮುಖ ಪಾತ್ರವಿದೆ. ಇಲ್ಲಿ ಸುಮನ್‌ ರಂಗನಾಥ್‌ ಕೂಡಾ ಮುಖ್ಯಭೂಮಿಕೆಯಲ್ಲಿ ಕಾಣಿಸಿ ಕೊಂಡಿದ್ದಾರೆ. ತೋತಾಪುರಿ ಚಿತ್ರದ ಮೊದಲ ಭಾಗದಲ್ಲಿ “ಬಾಗ್ಲು ತೆಗಿ ಮೇರಿ ಜಾನ್‌ ಹಾಡು ಸೂಪರ್‌ ಹಿಟ್‌ ಆಗಿತ್ತು. ರೊಮ್ಯಾಂಟಿಕ್‌ ಕಾಮಿಡಿ ಶೈಲಿಯಲ್ಲಿ ಮೂಡಿಬಂದಿದ್ದ ಈ ಹಾಡಿಗೆ ಲಕ್ಷಾಂತರ ಹಿಟ್ಸ್‌ ದಾಖಲಾಗಿತ್ತು. ಇದೀಗ “ತೋತಾಪುರಿ-2 ಚಿತ್ರದ ಮೊದಲ ಹಾಡು ಇತ್ತೀಚೆಗೆ ಬಿಡುಗಡೆಯಾಗಿದ್ದು, ಎಲ್ಲೆಡೆ ಸದ್ದು ಮಾಡುತ್ತಿದೆ. ಅದರಲ್ಲೂ ಮಳೆಗಾಲದಲ್ಲಿ ಈ ಹಾಡು ಮೋಡಿ ಮಾಡುತ್ತಿರೋದು ವಿಶೇಷ. ಹೃದಯಶಿವ ಸಾಹಿತ್ಯ ರಚಿಸಿರುವ “ಮೊದಲ ಮಳೆ ಮನದೊಳಗೆ… ಎಂಬ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ಸೌಂಡು ಮಾಡುತ್ತಿದೆ. ಡಾಲಿ ಧನಂಜಯ್‌ ಹಾಗೂ ಸುಮನ್‌ ರಂಗನಾಥ್‌ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದು, ಸಂಜಿತ್‌ ಹೆಗ್ಡೆ ಕಂಠಸಿರಿಯಲ್ಲಿ “ಮಳೆ ಹಾಡು ಮೂಡಿಬಂದಿದೆ.ಈ ಮೆಲೋಡಿ ಹಾಡಿಗೆ ಕೇಳುಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next