Advertisement
ಲಭ್ಯ ವರದಿಗಳ ಪ್ರಕಾರ ಈ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು 1780 ಕೋವಿಡ್ 19 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಇಂದು ರಾಜ್ಯದಲ್ಲಿ ಕೋವಿಡ್ 19 ಸಂಬಂಧಿತ ಒಟ್ಟು 55 ಸಾವು ಸಂಭವಿಸಿದೆ.
Related Articles
Advertisement
ಕೋವಿಡ್ 19 ಸೋಂಕಿಗೆ ಇದುವರೆಗೂ ರಾಜ್ಯದಲ್ಲಿ 1519 ಸಾವು ಸಂಭವಿಸಿದೆ. ಹಾಗೂ 06 ಜನ ಕೋವಿಡ್ 19 ಸೋಂಕಿತರು ಅನ್ಯ ಕಾರಣದಿಂದ ಮೃತಪಟ್ಟಿದ್ದಾರೆ. 618 ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ 2050 ಪಾಸಿಟಿವ್ ಪ್ರಕರಣ ಸೇರಿದಂತೆ, ಉಡುಪಿ – 281, ಬೆಳಗಾವಿ – 219, ಕಲಬುರಗಿ – 175, ದಕ್ಷಿಣ ಕನ್ನಡ – 162, ಮೈಸೂರು – 145, ಬೆಂಗಳೂರು ಗ್ರಾಮಾಂತರ – 139, ಬಳ್ಳಾರಿ – 134, ಚಿಕ್ಕಬಳ್ಳಾಪುರ – 110, ಇವಿಷ್ಟು ಜಿಲ್ಲೆಗಳಲ್ಲಿ ಇಂದು ಮೂರಂಕಿಯ ಕೋವಿಡ್ 19 ಪ್ರಕರಣಗಳು ದಾಖಲಾಗಿವೆ.
ಇನ್ನುಳಿದಂತೆ, ದಾವಣಗೆರೆ – 96, ಕೋಲಾರ – 88, ಚಿಕ್ಕಮಗಳೂರು – 82, ಬೀದರ್ – 77, ಹಾಸನ – 72, ಗದಗ – 71, ಬಾಗಲಕೋಟೆ – 70, ಉತ್ತರ ಕನ್ನಡ – 63, ಶಿವಮೊಗ್ಗ – 59, ವಿಜಯಪುರ 52, ತುಮಕೂರು – 52, ಹಾವೇರಿ – 50, ರಾಮನಗರ – 45, ಯಾದಗಿರಿ – 43, ಚಿತ್ರದುರ್ಗ – 40, ಮಂಡ್ಯ -37, ಚಾಮರಾಜನಗರ – 31 ಮತ್ತು ಕೊಪ್ಪಳ – 21 ಸೇರಿದಂತೆ ರಾಜ್ಯದ ಒಟ್ಟು 29 ಜಿಲ್ಲೆಗಳಲ್ಲಿ ಇಂದು ಮೂರಂಕಿ ಹಾಗೂ ಎರಡಂಕಿಯ ಕೋವಿಡ್ 19 ಸೋಂಕಿನ ಪ್ರಕರಣಗಳು ವರದಿಯಾಗಿವೆ.