Advertisement
ಲಭ್ಯ ವರದಿಗಳ ಪ್ರಕಾರ ಈ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು 1290 ಕೋವಿಡ್ 19 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಇಂದು ರಾಜ್ಯದಲ್ಲಿ ಕೋವಿಡ್ 19 ಸಂಬಂಧಿತ ಒಟ್ಟು 91 ಸಾವು ಸಂಭವಿಸಿದೆ.
Related Articles
Advertisement
ಈ ಮೂಲಕ ರಾಜ್ಯದಲ್ಲಿ ಕೋವಿಡ್ 19 ಸೋಂಕಿಗೆ ಸಾವನ್ನಪ್ಪಿದವರ ಸಂಖ್ಯೆ ಸಾವಿರದ ಗಡಿ ದಾಟಿದ್ದು ಇಲ್ಲಿಯವರೆಗೆ 1331 ಸಾವು ಸಂಭವಿಸಿದೆ. ಹಾಗೂ 06 ಜನ ಕೋವಿಡ್ 19 ಸೋಂಕಿತರು ಅನ್ಯ ಕಾರಣದಿಂದ ಮೃತಪಟ್ಟಿದ್ದಾರೆ. 579 ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.ಬೆಂಗಳೂರು ನಗರ ಜಿಲ್ಲೆಯಲ್ಲಿ 2156 ಪಾಸಿಟಿವ್ ಪ್ರಕರಣ ಸೇರಿದಂತೆ, ದಕ್ಷಿಣ ಕನ್ನಡ – 285, ವಿಜಯಪುರ 171, ಚಿಕ್ಕಬಳ್ಳಾಪುರ – 135, ಉಡುಪಿ – 134, ಧಾರವಾಡ – 126, ಮೈಸೂರು – 110 ಮತ್ತು ಶಿವಮೊಗ್ಗ – 104 ಜಿಲ್ಲೆಗಳಲ್ಲಿ ಮೂರಂಕಿಯ ಕೋವಿಡ್ 19 ಪ್ರಕರಣಗಳು ದಾಖಲಾಗಿದ್ದರೆ, ಬೆಳಗಾವಿ – 87, ಬಳ್ಳಾರಿ – 73, ಬೆಂಗಳೂರು ಗ್ರಾಮಾಂತರ – 70, ಕಲಬುರಗಿ – 69, ಉತ್ತರ ಕನ್ನಡ – 69, ದಾವಣಗೆರೆ – 62, ಬಾಗಲಕೋಟೆ – 60, ಹಾವೇರಿ – 54, ಬೀದರ್ – 45, ಹಾಸನ – 43, ಚಿಕ್ಕಮಗಳೂರು – 41, ರಾಯಚೂರು – 32, ಗದಗ – 30, ರಾಮನಗರ – 29, ಕೋಲಾರ – 25, ಚಾಮರಾಜನಗರ – 25, ತುಮಕೂರು – 19, ಕೊಪ್ಪಳ – 19, ಚಿತ್ರದುರ್ಗ – 17, ಕೊಡಗು – 13 ಮತ್ತು ಯಾದಗಿರಿ – 10 ಸೇರಿದಂತೆ ರಾಜ್ಯದ ಒಟ್ಟು 28 ಜಿಲ್ಲೆಗಳಲ್ಲಿ ಇಂದು ಮೂರಂಕಿ ಹಾಗೂ ಎರಡಂಕಿಯ ಕೋವಿಡ್ 19 ಸೋಂಕಿನ ಪ್ರಕರಣಗಳು ವರದಿಯಾಗಿವೆ.