Advertisement

Kerala ಸುರಿದ ಧಾರಾಕಾರ ಮಳೆ: ‘ಮೇಘ ಸ್ಫೋಟ’ದ ಸಾಧ್ಯತೆ

12:40 AM May 29, 2024 | Team Udayavani |

ತಿರುವನಂತಪುರ/ಗುವಾಹಟಿ: ಕೇರಳ ದಲ್ಲಿ ಭಾರೀ ಮಳೆಯಾಗುತ್ತಿರು ವುದರ ಹಿಂದೆ ಮೇಘ ಸ್ಫೋಟ ಆಗಿರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ತಜ್ಞರು ಅಂದಾಜು ಮಾಡಿದ್ದಾರೆ. ರಾಜ್ಯದ ವಿವಿಧ ಭಾಗಗಳಲ್ಲಿ ಮಳೆ ಸಂಬಂಧಿ ದುರಂತದಲ್ಲಿ ನಾಲ್ವರು ಅಸುನೀ ಗಿದ್ದಾರೆ. ಕೊಚ್ಚಿಯಲ್ಲಿ ಈಜಲು ಹೋಗಿದ್ದ ಬಾಲಕ, ಆಲಪ್ಪುಳದಲ್ಲಿ ಮರ ಬಿದ್ದು ವ್ಯಕ್ತಿಯೊಬ್ಬ, ತಿರುವನಂತಪುರದ ಮೀನುಗಾರಿಕಾ ಬಂದರು ಒಂದರಲ್ಲಿ ಮಳೆ ಮತ್ತು ಗಾಳಿಯ ರಭಸಕ್ಕೆ ಮೀನುಗಾರನೊಬ್ಬ ನೀರು ಪಾಲಾಗಿದ್ದಾನೆ. ಹಲವು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಅನ್ನೂ ಘೋಷಿಸಲಾಗಿದೆ.

Advertisement

ಕೇರಳದ ದಕ್ಷಿಣ ಮತ್ತು ಕೇಂದ್ರ ಭಾಗದ ಜಿಲ್ಲೆಗಳಾಗಿರುವ ತಿರುವನಂತ ಪುರ, ಕೊಲ್ಲಂ, ಎರ್ನಾಕುಳಂ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಕಲಮಶೆÏàರಿ ಪ್ರದೇಶದಲ್ಲಿ ಪ್ರವಾಹದ ನೀರು ಜನ ವಸತಿ ಪ್ರದೇಶಗಳಿಗೆ ನುಗ್ಗಿದೆ. ಹೀಗಾಗಿ ಜನರು ಮನೆಯಿಂದ ಹೊರಗೆ ಬಾರದಂಥ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೊಚ್ಚಿಯ ಮಾಹಿತಿ ತಂತ್ರಜ್ಞಾನ ಪಾರ್ಕ್‌ಗೆ ನೀರು ನುಗ್ಗಿ ಅನಾನುಕೂಲ ಉಂಟಾಗಿದೆ.

ಎರ್ನಾಕುಳಂ, ಕೊಲ್ಲಂನ ವಿವಿಧ ಭಾಗಗಳಲ್ಲಿ ಮಳೆಯಿಂದ ಉಂಟಾಗಿರುವ ಪ್ರವಾಹದ ನೀರು ಜನವಸತಿ ಪ್ರದೇಶಗಳಿಗೆ ನುಗ್ಗಿದೆ. ಹೀಗಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಬಿರುಸಿನ ಗಾಳಿಗೆ ಬೃಹತ್‌ ಮರಗಳು ಬುಡಮೇಲಾಗಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ.

ಪಟ್ಟಣಂತಿಟ್ಟ, ಆಲಪ್ಪುಳ ಮತ್ತು ಇಡುಕ್ಕಿ ಜಿಲ್ಲೆ ಗಳಿಗೆ ಆರೆಂಜ್‌ ಅಲರ್ಟ್‌ ಹಾಗೂ ತಿರುವನಂತ ಪುರ, ಪಾಲಕ್ಕಾಡ್‌, ತ್ರಿಶ್ಶೂರ್‌, ಮಲ್ಲಪುರಂ ಜಿಲ್ಲೆ ಗಳಿಗೆ ಎಲ್ಲೋ ಅಲರ್ಟ್‌ ಘೋಷಿಸಲಾಗಿದೆ.

ಅಸ್ಸಾಂನಲ್ಲಿ ಭಾರೀ ಮಳೆ: ಇಬ್ಬರು ಸಾವು, 17 ಮಂದಿಗೆ ಗಾಯ
ರೀಮಲ್‌ ಚಂಡಮಾರುತದ ಪ್ರಭಾವ ತಣ್ಣಗಾಗಿದ್ದರೂ ಅಸ್ಸಾಂ ಸೇರಿದಂತೆ ಈಶಾನ್ಯ ಭಾರತದಲ್ಲಿ ಅದರ ಪ್ರಭಾವ ಮುಂದು ವರಿಸಿದೆ. ಅಸ್ಸಾಂನಲ್ಲಿ ಬಿರುಸಿನ ಮಳೆಯಾಗುತ್ತಿದ್ದು, ಅದರ ಪ್ರಕೋಪಕ್ಕೆ ಇಬ್ಬರು ಅಸುನೀಗಿದ್ದಾರೆ. 17 ಮಂದಿ ಗಾಯ ಗೊಂಡಿದ್ದಾರೆ. ಲಖೀಂಪುರದಲ್ಲಿ ಭೂಕುಸಿತಕ್ಕೆ ಪುತುಲ್‌ ಗೋಗೊ ಯ್‌ ಮೃತಪಟ್ಟಿದ್ದು, ಮೊರಿಗಾಂ ಜಿಲ್ಲೆಯಲ್ಲಿ ಆಟೋರಿಕ್ಷಾ ಮೇಲೆ ಬಿದ್ದು 17 ವರ್ಷದ ಯುವಕ ಅಸುನೀಗಿದ್ದಾನೆ. ಅಸ್ಸಾಂನ ಸೋನಿತ್‌ಪುರದಲ್ಲಿ ಶಾಲಾ ವಾಹನದ ಮೇಲೆ ಮರ ಬಿದ್ದು 12 ಮಂದಿ ವಿದ್ಯಾರ್ಥಿಗಳಿಗೆ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next