Advertisement
ಮಧ್ಯಾಹ್ನ ವರೆಗೆ ಬಿಸಿಲಿನಿಂದ ಕೂಡಿದ್ದ ಸುಬ್ರಹ್ಮಣ್ಯ ಪರಿಸರದಲ್ಲಿ ಬಳಿಕ ಮಳೆ ಆರಂಭವಾಗಿದ್ದು, ಸಂಜೆ ವರೆಗೂ ಮುಂದುವರೆದಿತ್ತು. ಧಾರಕಾರ ಮಳೆಗೆ ಸುಬ್ರಹ್ಮಣ್ಯ-ಗುತ್ತಿಗಾರು-ಸುಳ್ಯ ರಸ್ತೆ ಹಾಗೂ ಸುಬ್ರಹ್ಮಣ್ಯ-ಪಂಜ-ಬೆಳ್ಳಾರೆ ರಸ್ತೆಯ ಹಲವೆಡೆ ಅಸಮರ್ಪಕ ಚರಂಡಿ ವ್ಯವಸ್ಥೆಯಿಂದ ಮಳೆ ನೀರು ಬಾರೀಪ್ರಮಾಣದಲ್ಲಿ ರಸ್ತೆಯಲ್ಲೇ ಹರಿದು ಹೊಳೆಯಂತಾಗಿತ್ತು. ಪರಿಣಾಮ ವಾಹನ ಸವಾರರು ಸಮಸ್ಯೆ ಅನುಭವಿಸಿದರು.
ಹರಿಹರ ಪಳ್ಳತ್ತಡ್ಕದ ಹೊಳೆ, ದರ್ಪಣ ತೀರ್ಥ ಸೇರಿದಂತೆ ಸಣ್ಣ ಪುಟ್ಟ ಹೊಳೆ ಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ.
Related Articles
ಕಡಬ ತಾಲೂಕಿನ ಬಳ್ಪದಲ್ಲಿ ಮಧ್ಯಾಹ್ನ 2ರಿಂದ 5 ಗಂಟೆಯ ಅವಧಿಯಲ್ಲಿ ಗಂಟೆಯಲ್ಲಿ 245 ಮಿ.ಮೀ. ಮಳೆಯಾಗಿದೆ. ಕಲ್ಲಾಜೆಯಲ್ಲಿ 115 ಮಿ.ಮೀ., ಕಮಿಲದಲ್ಲಿ 120 ಮಿ.ಮೀ. ಮಳೆಯಾಗಿದೆ ಎಂದು ಮಳೆಮಾಪಕರಾಗಿರುವ ಬಾಳಿಲದ ಪಿಜಿಎಸ್‌ಎನ್ ಪ್ರಸಾದ್ ಮಾಹಿತಿ ನೀಡಿದ್ದಾರೆ.
Advertisement