Advertisement
ಮೊದಲು ಪ್ರಾರ್ಥನೆಯಲ್ಲಿ ಶರತ್ ಕಡೇಕರ್ ಅಸೋ ನಮನ ತುಜಾ ಮರಾಠಿ ಭಜನೆಯನ್ನು ಹಾಡುವುದರೊಂದಿಗೆ ಕಾರ್ಯಕ್ರಮ ಆರಂಭವಾಯಿತು. ನಂತರ ಸ್ಥಳೀಯ ಪ್ರತಿಭೆ ಸಿದ್ಧಾಪುರದ ಶ್ರವಣ ಪೈ ಸಿ.ಆರ್.ವ್ಯಾಸ ಸಂಗೀತ ರಚನೆಯ ಧನಕೋಣಿ ರಾಗದಲ್ಲಿ ಏಕ್‌ಚಂದಾ ಭಜನೆಯನ್ನು ಹಾಡಿ ಸಂಗೀತದ ಸಂಜೆಗೆ ಬಂದ ಕಲಾಭಿಮಾನಿಗಳನ್ನು ಸಿದ್ದಗೊಳಿಸಿದರು.Related Articles
Advertisement
ಬೆಂಗಳೂರಿನ ರಘನಂದನ ಭಟ್ ದುರ್ಗಾ ರಾಗ ದಲ್ಲಿ ಮನಮೋಹರಿ ಜಾನ್ ಎನ್ನುವ ಹಾಡನ್ನು ಹಾಡಿದರು. ಮುಂಬಯಿಯ ರಾಧಿಕಾ ಸೂಲ್ ಅವರು ಸೂಫಿ ಶೈಲಿಯಲ್ಲಿ ಪಂಜಾಬಿ ಭಾಷೆಯಲ್ಲಿ ಶಾ ಹುಸೇನ್ ಅವರು ರಚಿಸಿದ ರಬ್ಟಾ ಮೇರೆ ಹಾಲದಾ ಮೆಹೆರಮ ತೂ ಹೊಸ ಅನುಭವನ್ನು ನೀಡಿತು.
ಮಣಿಪಾಲದ ರಂಗ ಪೈ ವಾಯೋಲಿನ್‌ನಲ್ಲಿ ಶ್ರೀನಿವಾಸ ಕರೇಜಿಯ ಸಂಗೀತ ಸಂಯೋಜಿಸಿದ ಹಾಡನ್ನು ನುಡಿಸಿದರು.
ಅಂತಿಮವಾಗಿ ಮಹಾರಾಷ್ಟ್ರದ ಆಳಂದಿಯ ಅವಧೂತ ಗಾಂಧಿ ಹಾಗೂ ಹರಿದಾಸ ಶಿಂಡೆಯವರ ವಾರಕರಿ ಶೈಲಿಯ ಮರಾಠಿ ಭಜನೆ ಸಂಗೀತದ ಬೇರೊಂದು ಲೋಕಕ್ಕೆ ಕರೆದ್ಯೊಯಿತು. ಹರಿ ಜೈ ಜೈ ರಾಮ್ ರಾಮಕೃಷ್ಣ ಹರಿ, ಅಭಿರ ಗುಲಾಲ್ ಉದಳೀತ ರಂಗ ಭಜನೆ ಅಧುºತವಾಗಿತ್ತು.
ತಬಲಾದಲ್ಲಿ ವಿಘ್ನೇಶ್ ಕಾಮತ್ ಕೋಟೇಶ್ವರ, ಭಾರವಿ ದೇರಾಜೆ, ರಂಗ ಪೈ ಹಾಗೆಯೇ ಹಾರ್ಮೋನಿಯಂನಲ್ಲಿ ಶ್ರೀಧರ ಭಟ್ ಕೋಟೇಶ್ವರ, ಪ್ರಸಾದ ಕಾಮತ್ ಹಾಗೂ ಸುಧೀರ್ ನಾಯಕ್ ಸಹಕರಿಸಿದರು.
ರಮೇಶ ಭಟ್ ಕೋಟೇಶ್ವರ