Advertisement

ವೆಬ್‌ ಸೈಟ್‌ನಲ್ಲಿ ಟಾಪರ್‌ ಉತ್ತರ ಪತ್ರಿಕೆ ಪ್ರಕಟಿಸದಿರಲು ಮಂಡಳಿ, ಬೋರ್ಡ್‌ ನಿರ್ಧಾರ

12:33 AM Feb 15, 2021 | Team Udayavani |

ಬೆಂಗಳೂರು: ಎಸೆಸೆಲ್ಸಿ, ಪಿಯುಸಿ ವಾರ್ಷಿಕ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಹಿಂದಿನ ವರ್ಷದ ಟಾಪರ್‌ಗಳ ಉತ್ತರ ಪತ್ರಿಕೆಗಳು ವೆಬ್‌ಸೈಟ್‌ನಲ್ಲಿ ಲಭ್ಯವಾಗುವುದಿಲ್ಲ.

Advertisement

ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಯನ್ನು ಮಂಡಳಿಯ ವೆಬ್‌ಸೈಟ್‌ನಲ್ಲಿ ಪ್ರಕಟಿಸದೆ ಇರಲು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮತ್ತು ಪ.ಪೂರ್ವ ಶಿಕ್ಷಣ ಇಲಾಖೆಗಳು ನಿರ್ಧರಿಸಿವೆ.

ವೈರಲ್‌ ಆಗುವ ಭೀತಿ :

ಎಲ್ಲ ವಿಷಯಗಳಲ್ಲೂ ಪೂರ್ಣ ಅಂಕ ಅಥವಾ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಲ್ಲಿ ಒಬ್ಬರ ಉತ್ತರ ಪತ್ರಿಕೆಯನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು. ಉತ್ತರಗಳಲ್ಲಿ ಸಣ್ಣಪುಟ್ಟ ತಪ್ಪುಗಳನ್ನು ಗಣನೆಗೆ ತೆಗೆದುಕೊಳ್ಳದೆ ಪೂರ್ಣ ಅಂಕ ನೀಡಲಾಗುತ್ತದೆ. ಇವುಗಳ ಪ್ರತಿಯನ್ನು ಅಪ್‌ಲೋಡ್‌ ಮಾಡಿ ದಾಕ್ಷಣ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಸಣ್ಣಪುಟ್ಟ ತಪ್ಪುಗಳನ್ನು ಮುಂದಿಟ್ಟು ಮಂಡಳಿ ಮತ್ತು ಇಲಾಖೆಯನ್ನು ಟೀಕಿಸುತ್ತಾರೆ ಮತ್ತು ವೈರಲ್‌ ಮಾಡುತ್ತಾರೆ. ಈ ಕಾರಣಕ್ಕೆ ಉತ್ತರ ಪ್ರತಿಗಳನ್ನು ಅಪ್‌ಲೋಡ್‌ ಮಾಡುತ್ತಿಲ್ಲ ಎಂದು ಎಸೆಸೆಲ್ಸಿ ಮಂಡಳಿಯ ಉನ್ನತ ಅಧಿಕಾರಿಯೇ ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next