Advertisement

ಗ್ರ್ಯಾನ್‌ ಪ್ರಿ ಬ್ಯಾಡ್ಮಿಂಟನ್‌ ಲೀಗ್‌ ಟ್ರೋಫಿ ಅನಾವರಣ

11:31 PM Jun 04, 2022 | Team Udayavani |

ಬೆಂಗಳೂರು: ಕರ್ನಾಟಕ ಬ್ಯಾಡ್ಮಿಂಟನ್‌ ಅಸೋಸಿಯೇಶನ್‌ ಆಶ್ರಯದಲ್ಲಿ ನಡೆಯಲಿರುವ ಗ್ರ್ಯಾನ್‌ ಪ್ರಿ ಬ್ಯಾಡ್ಮಿಂಟನ್‌ ಲೀಗ್‌ ಜುಲೈ 1ರಿಂದ 10ರ ವರೆಗೆ ನಡೆಯಲಿದೆ.

Advertisement

ಈ ಸಂಬಂಧ ಬೆಂಗಳೂರಿನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಟ್ರೋಫಿಯನ್ನು ಅನಾವರಣಗೊಳಿಸಲಾಯಿತು. ಈ ವೇಳೆ ವಿವಿಧ ತಂಡಗಳ ಮೆಂಟರ್‌ಗಳು ಉಪಸ್ಥಿತರಿದ್ದರು.

ಈ ಕೂಟದಲ್ಲಿ ಎಂಟು ತಂಡಗಳು ಭಾಗವಹಿಸಲಿವೆ. ಪ್ರತಿಯೊಂದು ತಂಡದಲ್ಲಿ 10 ಆಟಗಾರರು ಇರಲಿದ್ದಾರೆ. ಇದರಲ್ಲಿ ಕಡಿಮೆಪಕ್ಷ ಐವರು ಕರ್ನಾಟಕದ ಮತ್ತು ಮೂವರು ವನಿತಾ ಆಟಗಾರರು ಇರಲಿದ್ದಾರೆ. ಬೆಂಗಳೂರು ಲಯನ್ಸ್‌, ಮಂಗಳೂರು ಶಾರ್ಕ್ಸ್, ಮಂಡ್ಯ ಬುಲ್ಸ್‌, ಮೈಸೂರು ಪಾಂಥರ್, ಮಲಾ°ಡ್‌ ಫಾಲ್ಕನ್ಸ್‌, ಬಂಡಿಪುರ್‌ ಟಸ್ಕರ್, ಕೆಜಿಎಫ್ ವೊಲ್ವ್ಸ್ ಮತ್ತು ಕೊಡಗು ಟೈಗರ್ ಈ ಕೂಟದಲ್ಲಿ ಭಾಗವಹಿಸಲಿವೆ.

ಭಾರತದ ಅಗ್ರ ಶಟ್ಲರ್‌ಗಳಾದ ಎರಡು ಬಾರಿಯ ಒಲಿಂಪಿಕ್‌ ಪದಕ ವಿಜೇತೆ ಪಿ.ವಿ. ಸಿಂಧು, ಕಿದಂಬಿ ಶ್ರೀಕಾಂತ್‌, ಬಿ. ಸಾಯಿ ಪ್ರಣೀತ್‌, ಜ್ವಾಲಾ ಗುಟ್ಟಾ, ಅಶ್ವಿ‌ನಿ ಪೊನ್ನಪ್ಪ, ಚಿರಾಗ್‌ ಶೆಟ್ಟಿ, ಸಾತ್ವಿಕ್‌ಸಾಯಿರಾಜ್‌ ರಾಂಕಿರೆಡ್ಡಿ ಮತ್ತು ಎಚ್‌.ಎಸ್‌. ಪ್ರಣಯ್‌ ಅವರು ವಿವಿಧ ತಂಡಗಳ ಮೆಂಟರ್‌ ಆಗಿ ಕರ್ತವ್ಯ ನಿರ್ವಹಿಸಲಿದ್ದಾರೆ.

60 ಲಕ್ಷ ರೂ. ಬಹುಮಾನ ನಿಧಿಯನ್ನು ಒಳಗೊಂಡ ಈ ಕೂಟದ ವಿಜೇತ ತಂಡವು 24 ಲಕ್ಷ ರೂ. ಮತ್ತು ಟ್ರೋಫಿ ಗೆಲ್ಲಲಿದೆ. ರನ್ನರ್‌ ಅಪ್‌ ತಂಡ 12 ಲಕ್ಷ ರೂ. ಸೆಮಿಫೈನಲಿನಲ್ಲಿ ಸೋತ ತಂಡಗಳು ತಲಾ 6 ಲಕ್ಷ ರೂ. ಪಡೆಯಲಿವೆ. ಇದರ ಜತೆ ಪ್ರತಿಯೊಂದು ಪಂದ್ಯದ ವೇಳೆ ವೈಯಕ್ತಿಕ ನಿರ್ವಹಣೆಗೆ ಬಹುಮಾನ ನೀಡಲಾಗುತ್ತದೆ.

Advertisement

ದೇಶಾದ್ಯಂತ 400 ಆಟಗಾರರು ಈ ಲೀಗ್‌ಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಮುಂದಿನ ವಾರ ಹರಾಜು ಪ್ರಕ್ರಿಯೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next