Advertisement

Luna-25: ರಷ್ಯಾದ ಲೂನಾ-25 ಲ್ಯಾಂಡರ್ ವಿಫಲ.. ಆಸ್ಪತ್ರೆಗೆ ದಾಖಲಾದ ರಷ್ಯಾದ ಉನ್ನತ ವಿಜ್ಞಾನಿ

10:07 AM Aug 22, 2023 | Team Udayavani |

ರಷ್ಯಾ: ಭಾರತದ ಚಂದ್ರಯಾನ-3 ಗಿಂತ ಮೊದಲು ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಮೇಲೆ ರಷ್ಯಾದ ಲೂನಾ-25 ಲ್ಯಾಂಡ್ ಆಗಬೇಕಿದ್ದ ಕನಸು ಭಗ್ನಕೊಂಡಿದೆ ಇದರ ಬೆನ್ನಲ್ಲೇ ಇದರ ಹಿಂದೆ ಪರಿಶ್ರಮ ವಹಿಸಿದ್ದ ಉನ್ನತ ವಿಜ್ಞಾನಿ ಮತ್ತು ಖಗೋಳಶಾಸ್ತ್ರಜ್ಞ ಮಿಖಾಯಿಲ್ ಮಾರೊವ್ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

Advertisement

ಸುಮಾರು ಅರ್ಧ ಶತಮಾನದಲ್ಲಿ ದೇಶದ ಮೊದಲ ಚಂದ್ರನ ಕಾರ್ಯಾಚರಣೆಯಾದ ಲೂನಾ-25 ಪ್ರೋಬ್, ಲ್ಯಾಂಡಿಂಗ್ ಪೂರ್ವ ಕುಶಲತೆಯ ಸಮಯದಲ್ಲಿ ಚಂದ್ರನ ಮೇಲ್ಮೈಯಲ್ಲಿ ಅಪ್ಪಳಿಸಿದ್ದರಿಂದ ರಷ್ಯಾದ ಚಂದ್ರನ ಭರವಸೆಗಳು ಸಂಪೂರ್ಣ ಭಗ್ನಗೊಂಡಿದೆ.

ರಷ್ಯಾದ ಲೂನಾ-25 ಲ್ಯಾಂಡರ್ ವಿಫಲಗೊಂಡ ಪರಿಣಾಮ ಆಘಾತಕ್ಕೊಳಗಾದ ಮಿಖಾಯಿಲ್ ಮಾರೊವ್ ಅವರ ಆರೋಗ್ಯ ತೀವ್ರ ಹದಗೆಟ್ಟ ಕಾರಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಾಹ್ಯಾಕಾಶ ನೌಕೆಯ ಹಿಂದೆ ನಡೆಸಿರುವ ಪರಿಶ್ರಮವೆಲ್ಲಾ ಲ್ಯಾಂಡರ್ ವಿಫಲಗೊಳ್ಳುವುದರ ಜೊತೆಗೆ ಕೊಚ್ಚಿ ಹೋಯಿತು ಎಂದು ಹೇಳಿಕೊಂಡಿದ್ದಾರೆ.

ವಿಜ್ಞಾನಿ ಸೋವಿಯತ್ ಒಕ್ಕೂಟದ ಹಿಂದಿನ ಬಾಹ್ಯಾಕಾಶ ಕಾರ್ಯಾಚರಣೆಗಳಲ್ಲಿ ಕೆಲಸ ಮಾಡಿದ್ದರು ಮತ್ತು ಲೂನಾ -25 ಮಿಷನ್ ತನ್ನ ಜೀವನದ ಕೆಲಸದ ಪರಾಕಾಷ್ಠೆ ಎಂದು ಹೇಳಿದ್ದರು.

ಮಾರೋವ್ ಅವರು ಮಾಸ್ಕೋದ ಕ್ರೆಮ್ಲಿನ್ ಬಳಿ ಇರುವ ಸೆಂಟ್ರಲ್ ಕ್ಲಿನಿಕಲ್ ಆಸ್ಪತ್ರೆಯಲ್ಲಿ ವೈದ್ಯರ ಮೇಲ್ವಿಚಾರಣೆಯಲ್ಲಿದ್ದು. ಲ್ಯಾಂಡರ್ ವಿಫಲವಾದ ಕಾರಣಗಳ ಬಗ್ಗೆ ಅಧಿಕಾರಿಗಳು ಮೌನವಾಗಿರಬಾರದು ಎಂದು ಅವರು ಕರೆ ನೀಡಿದರು, ಅದರ ಬಗ್ಗೆ ಚರ್ಚಿಸಬೇಕು ಎಂದು ಹೇಳಿದರು.

Advertisement

ಲೂನಾ-25 ಅನ್ನು ಆಗಸ್ಟ್ 11 ರಂದು ಮಾಸ್ಕೋ ಸಮಯ 2 ಗಂಟೆಗೆ ಮಾಸ್ಕೋದ ಪೂರ್ವಕ್ಕೆ ಸುಮಾರು 3,450 ಮೈಲಿಗಳು (5,550) ಕಿಲೋಮೀಟರ್ ದೂರದಲ್ಲಿರುವ ಅಮುರ್ ಪ್ರದೇಶದ ರಷ್ಯಾದ ಬಾಹ್ಯಾಕಾಶ ನಿಲ್ದಾಣವಾದ ವೊಸ್ಟೊಚ್ನಿ ಕಾಸ್ಮೊಡ್ರೋಮ್‌ನಿಂದ ಉಡಾವಣೆ ಮಾಡಲಾಯಿತು.

ಇದನ್ನೂ ಓದಿ: Mumbai To Ranchi Flight: ವಿಮಾನದಲ್ಲೇ ರಕ್ತ ವಾಂತಿ ಮಾಡಿ ಪ್ರಯಾಣಿಕ ಮೃತ್ಯು…

Advertisement

Udayavani is now on Telegram. Click here to join our channel and stay updated with the latest news.

Next