Advertisement

ಪ್ರತಿಭಟನೆ ನಡುವೆ ಶಾಲೆ ತೆರೆಯಲು ಅಮೆರಿಕ ಸಿದ್ಧತೆ

01:06 AM Jul 10, 2020 | Hari Prasad |

ವಾಷಿಂಗ್ಟನ್‌: ದೇಶದಲ್ಲಿ ಸೋಂಕು ಕಾಡ್ಗಿಚ್ಚಿನಂತೆ ವ್ಯಾಪಿಸುತ್ತಿದ್ದರೂ, ಅಮೆರಿಕದಾದ್ಯಂತ ಶಾಲೆಗಳನ್ನು ಪುನಾರಂಭಿಸಲು ಟ್ರಂಪ್‌ ಆಡಳಿತ ನಿರ್ಧರಿಸಿದೆ.

Advertisement

ಈಗ ಶಾಲೆಗಳನ್ನು ಆರಂಭಿಸುವುದು ಸರಿಯಾದ ಕ್ರಮವಲ್ಲ ಎಂದು ತಜ್ಞರ ಸಮಿತಿ ಎಚ್ಚರಿಸಿದ್ದರೂ, ಅದನ್ನು ತಳ್ಳಿಹಾಕಿರುವ ಟ್ರಂಪ್‌, ಯಾವೆಲ್ಲ ಶಾಲೆಗಳು ತೆರೆಯುವುದಿಲ್ಲವೋ ಅಂಥ ಶಾಲೆಗಳಿಗೆ ಹಣಕಾಸು ನೆರವು ನೀಡುವುದನ್ನೇ ತಡೆಹಿಡಿಯುತ್ತೇನೆ ಎಂದು ಘೋಷಿಸಿದ್ದಾರೆ.

ಇನ್ನೊಂದೆಡೆ, ಓಕ್ಲಹೋಮಾದಲ್ಲಿ ಕಳೆದ ತಿಂಗಳು ಟ್ರಂಪ್‌ ನಡೆಸಿದ ಪ್ರಚಾರ ಜಾಥಾ, ಅದೇ ಅವಧಿಯಲ್ಲಿ ನಡೆದ ಪ್ರತಿಭಟನೆಗಳೇ ಸೋಂಕು ಹೆಚ್ಚಾಗಲು ಕಾರಣ ಎಂದು ಆರೋಗ್ಯಾಧಿಕಾರಿಗಳು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next