Advertisement

ತಲೆಗೆ 40 ಲಕ್ಷ ರೂ. ಬಹುಮಾನ ಹೊತ್ತಿದ್ದ ನಕ್ಸಲ್‌ ರಾಮಣ್ಣ ಸಾವು?

10:00 AM Dec 11, 2019 | Hari Prasad |

ರಾಯ್ಪುರ: ತಲೆಗೆ 40 ಲಕ್ಷ ರೂ. ಬಹುಮಾನ ಹೊತ್ತಿದ್ದ ಛತ್ತೀಸ್‌ಗಢದ ಪ್ರಮುಖ ನಕ್ಸಲ್‌ ನಾಯಕ ರಾಮಣ್ಣ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ರಾಮಣ್ಣ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ರಾವುಲು ಶ್ರೀನಿವಾಸ್‌ಗೆ ಅಂದಾಜು 60 ವರ್ಷ ವಯಸ್ಸಾಗಿತ್ತು.

Advertisement

ಆತ ಕಳೆದವಾರ ಛತ್ತೀಸ್‌ಗಢ‌ದ ಬಿಜಾಪುರದಲ್ಲಿ ಮೃತಪಟ್ಟಿದ್ದಾನೆ. ಆತನ ಅಂತಿಮ ಸಂಸ್ಕಾರವನ್ನು ಬಸಗುಡ ಗ್ರಾಮದಲ್ಲಿ ನೆರವೇರಿಸಲಾಗಿದೆ ಎಂದು ನಮಗೆ ಮೂಲಗಳಿಂದ ತಿಳಿದೆ. ಆದರೆ ಈ ಕುರಿತು ನಿಖರ ಮಾಹಿತಿ ಪಡೆಯಲು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಈ ಕುರಿತು ಸಿಪಿಐ (ಮಾವೋವಾದ) ಯಾವುದೇ ಪ್ರಕಟಣೆ ಹೊರಡಿಸಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next