Advertisement

ಟಾಪ್‌ ಗೇರ್‌: ಯಾರಿಸ್‌ ಲಕ್ಸೂರಿಯಸ್‌

06:18 PM Mar 26, 2018 | Team Udayavani |

ಯುಗಾದಿ ಕಳೆದು ಈಗ ಇನ್ನಷ್ಟು ಹಬ್ಬಗಳು ಸಾಲು ಸಾಲಾಗಿ ನಿಂತಿವೆ. ಹೀಗಾಗಿ ಆಟೋಮೊಬೈಲ್‌ ಕ್ಷೇತ್ರದ ಘಟಾನುಘಟಿ ಕಂಪನಿಗಳೂ ತಮ್ಮ ಗ್ರಾಹಕರಿಗೆ ಬಂಪರ್‌ ಆಫ‌ರ್‌ಗಳನ್ನು ನೀಡುವುದು ಸರ್ವೇಸಾಮಾನ್ಯ. ಅದೇ ಪ್ರಕಾರ ಮೊನ್ನೆ ಮೊನ್ನೆಯಷ್ಟೇ
ನವದೆಹಲಿಯಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ ಪರಿಚಯಿಸಿದ ಸೆಡಾನ್‌ ಸೆಗೆ¾ಂಟ್‌ನ ಬಹುನಿರೀಕ್ಷಿತ ಯಾರಿಸ್‌ ಕಾರುಗಳನ್ನು ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಮುಂದಿನ ತಿಂಗಳ ಹೊತ್ತಿಗೆ ಅನಾವರಣಗೊಳಿಸಿ, ಮಾರುಕಟ್ಟೆಯ
ಲಾಭ ಪಡೆದುಕೊಳ್ಳುವ ನಿರೀಕ್ಷೆಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿವೆ. 

Advertisement

ವಿನ್ಯಾಸದಲ್ಲಿನ ವಿಶೇಷತೆ ಶಿಸಿರುವ ಸೆಡಾನ್‌ ಸೆಗೆ¾ಂಟ್‌ನ ಹೊಸ ಮಾಡೆಲ್‌ ಕಾರುಗಳಿಗೆ ಸಲೀಸಾಗಿ ಸವಾಲೊಡ್ಡುವ ರೀತಿಯಲ್ಲಿ
ಟೊಯೋಟಾ ಯಾರಿಸ್‌ಗೆ ಹೊಸ ರೂಪ ನೀಡಿದೆ. ಮಾರುಕಟ್ಟೆಯಲ್ಲಿ ತನ್ನದೇ ಆದ ಗ್ರಾಹಕ ವರ್ಗವನ್ನು ಸೃಷ್ಟಿಸಿಕೊಂಡಿರುವ ಮಾರುತಿ ಸುಜುಕಿ ಸಿಯಾಜ್‌, ವೋಕ್ಸ್‌ವ್ಯಾಗನ್‌ ಅವರ ವೆಂಟೋ, ಸ್ಕೋಡಾ ರ್ಯಾಪಿಡ್‌, ಹ್ಯುಂಡೈನ ವೆರ್ನಾ ಹಾಗೂ ಹೋಂಡಾ ಸಿಟಿ ಸೀರೀಸ್‌ ಕಾರುಗಳಿಗೆ ಯಾರೀಸ್‌ ಪ್ರಬಲ ಸ್ಪರ್ಧೆಯೊಡ್ಡುವ ಮಾದರಿಯಲ್ಲಿ ವಿನ್ಯಾಸಗೊಂಡಿದೆ. ಪ್ರಯಾಣಿಕರ ಸೆಮಿಲಕ್ಸುರಿ ನಿರೀಕ್ಷೆಗಳನ್ನು ಪೂರ್ಣ ಪ್ರಮಾಣದಲ್ಲಿ ಪೂರೈಸುವ ಮಟ್ಟದಲ್ಲಿ ತಂತ್ರಜಾnನಗಳ ಬಳಕೆಯನ್ನೂ ಮಾಡಿಕೊಳ್ಳಲಾಗಿದೆ.

ಇವೆಲ್ಲದರ ಜತೆ ಜೊತೆಗೆ ಯಾರಿಸ್‌ ಒಟ್ಟಾರೆ ಸೌಂದರ್ಯ ಹೆಚ್ಚಿಸುವಂತಹ ಎಲ್‌ಇಡಿ ಹೆಡ್‌ಲ್ಯಾಂಪ್‌, ಎಲ್‌ಇಡಿ ಡೇ ಟೈಮ್‌ ಲೈಟ್‌, ಎಲ್‌ಇಡಿ ಟೈಲ್‌ ಲೈಟ್‌ಗಳನ್ನು ಅಳವಡಿಸಲಾಗಿದೆ. ಇನ್ನು ಫ್ರಂಟ್‌ ಬಂಪರ್‌ನ ಭಿನ್ನ ವಿನ್ಯಾಸ ಮುಂಭಾಗದ ಸೌಂದರ್ಯವನ್ನು
ಹೆಚ್ಚಿಸಿದೆ. ಅಲ್ಲದೇ, ಡ್ಯಾಶ್‌ಬೋರ್ಡ್‌ನಲ್ಲಿ ಅಳವಡಿಸಲಾದ ಟಚ್‌ ಸ್ಕ್ರಿನ್‌ ಇನ್ಫೋಟೈನ್‌ಮೆಂಟ್‌ ಹೊಸ ಲುಕ್‌ ನೀಡಿದೆ. ಈ ಎಲ್ಲಾ ಪ್ಲಸ್‌ ಪಾಯಿಂಟ್‌ಗಳಿಂದ ಯಾರಿಸ್‌ ಹೊಸ ಟ್ರೆಂಡ್‌ ಹುಟ್ಟುಹಾಕುವ ನಿರೀಕ್ಷೆಯಲ್ಲಿ ಕಂಪನಿ ಇದೆ.

ಎಂಜಿನ್‌ ಸಾಮರ್ಥ್ಯ
1.5 ಲೀಟರ್‌ 4 ಸಿಲಿಂಡರ್‌ ಪೆಟ್ರೋಲ್‌ ಎಂಜಿನ್‌ ಹೊಂದಿರಿವ ಯಾರಿಸ್‌ ವೇರಿಯಂಟ್‌ಗಳು 6 ಸ್ಪೀಡ್‌ ಮ್ಯಾನುವಲ್‌ ಹಾಗೂ 7 ಸ್ಪೀಡ್‌ ಆಟೋಮ್ಯಾಟಿಕ್‌ ಗೇರ್‌ ಬಾಕ್ಸ್‌ಗಳನ್ನು ಹೊಂದಿರಲಿವೆ. ಗುಣಮಟ್ಟದ ಇಂಧನ ಕಾರ್ಯಕ್ಷಮತೆ ಎಂಜಿನ್‌ಗಳ ಬಳಕೆ ಹೊಂದಿರುವ ಯಾರಿಸ್‌ 1496ಸಿಸಿ ಶಕ್ತಿಯೊಂದಿಗೆ ಸಲೀಸಾಗಿ ಮುನ್ನುಗವ ಸಾಮರ್ಥ್ಯ ಹೊಂದಿದೆ. 

ಸುರಕ್ಷತೆಗೆ ಒತ್ತು
ಪ್ರಸ್ತುತ ಜನರೇಷನ್‌ ಬಯಸುವ ಬಹುತೇಕ ತಂತ್ರಜಾnನಗಳನ್ನು ಯಾರಿಸ್‌ನಲ್ಲಿ ಅಳವಡಿಸಲಾಗಿದೆ. ಡ್ರೆ„ವರ್‌ ಸೀಟ್‌ನಲ್ಲಿ ಮೊಣಕಾಲು ಭಾಗಕ್ಕೂ ಯಾವುದೇ ತೊಂದರೆಯಾಗದಂತೆ ಸುರಕ್ಷತೆ ದೃಷ್ಟಿಯಿಂದ ನೀಡಲಾಗುವ “ನೀ ಏರ್‌ ಬ್ಯಾಗ್‌’ ಸೇರಿ
ಒಟ್ಟು ಏಳು ಏರ್‌ಬ್ಯಾಗ್‌ಗಳನ್ನು ಹೊಂದಿವೆ ಯಾರಿಸ್‌. ಅಲ್ಲದೆ, ಪಾರ್ಕಿಂಗ್‌ ಸೆನ್ಸಾರ್‌, ಅಲಾಯ್‌ ವೀಲ್‌ ಡಿಸ್ಕ್ ಬ್ರೇಕ್‌ ಸೇರಿ ಬಹುತೇಕ ಲಾಕಿಂಗ್‌ ವ್ಯವಸ್ಥೆಗಳನ್ನು ಹೊಂದಿದೆ. ಎಬಿಎಸ್‌ + ಇಬಿಡಿ ಹಾಗೂ ಸ್ಟಾಬಿಲಿಟಿ ಪೋ› ಲ್‌ ಸ್ಟಾರ್ಟ್‌ ಅಸಿಸ್ಟ್‌, ಇಎಸ್‌ಪಿ ವ್ಯವಸ್ಥೆ ನೀಡಲಾಗಿದೆ. 

Advertisement

ಹೋಂಡಾ ಸಿಟಿಗೆ ನೇರ ಸ್ಪರ್ಧಿ
ಮೇಲ್ನೋಟಕ್ಕೆ ಹೋಂಡಾ ಸಿಟಿಗೆ ನೇರ ಪ್ರತಿಸ್ಪರ್ಧಿ. ತಂತ್ರಜಾnನ ಬಳಕೆ, ಸಾಮರ್ಥ್ಯ ಹಾಗೂ ವಿನ್ಯಾಸದಲ್ಲಿಯೂ ಸಾಕಷ್ಟು
ಸಾಮ್ಯತೆಯನ್ನು ಹೊಂದಿದೆ. ಬೆಲೆಯಲ್ಲಿಯೂ ಹೆಚ್ಚುಕಡಿಮೆ ಅಷ್ಟೇ ಆಗಿರಲಿದೆ. ಹೋಂಡಾ ಸಿಟಿಗಿಂತ 15ಮಿ.ಮೀ. ಉದ್ದ ಜಾಸ್ತಿ, 20ಮಿ. ಮೀ. ಎತ್ತರ ಕಡಿಮೆ, 35ಮಿ.ಮೀನಷ್ಟು ಅಗಲ ಜಾಸ್ತಿ. 

ಎಕ್ಸ್‌  ಶೋರೂಂ ಅಂದಾಜು ಬೆಲೆ
8.50 ಲಕ್ಷ ರೂ.ನಿಂದ 12 ಲಕ್ಷ ರೂ
ಮೈಲೇಜ್‌ ಕಂಪನಿ ಇನ್ನೂ ಬಹಿರಂಗಪಡಿಸಿಲ್ಲ

ಗಣಪತಿ ಅಗ್ನಿಹೋತಿ

Advertisement

Udayavani is now on Telegram. Click here to join our channel and stay updated with the latest news.

Next