Advertisement
ಶೆಲ್ಡನ್ ಕಾಟ್ರೆಲ್ ನ ಸೆಲ್ಯೂಟ್ಇತ್ತೀಚಿನ ದಿನಗಳಲ್ಲಿ ವೆಸ್ಟ್ ಇಂಡೀಸ್ ತಂಡದಲ್ಲಿ ಮಿಂಚುತ್ತಿರುವ ವೇಗಿ. ಪ್ರತಿ ವಿಕೆಟ್ ಪಡೆದಾಗಲೂ ತನ್ನ ಹೊಸ ಬಗೆಯ ಸೆಲ್ಯೂಟ್ ಶೈಲಿಯ ಸಂಭ್ರಮಾಚರಣೆಯಿಂದ ಗಮನ ಸೆಳೆಯುತ್ತಿದ್ದಾರೆ.ಸ್ವತಃ ಯೋಧನಾಗಿರುವ ಕಾಟ್ರೆಲ್ ಅದೇ ಶೈಲಿಯಲ್ಲಿ ಸಂಭ್ರಮಿಸುತ್ತಾರೆ. ವಿಕೆಟ್ ಬಿದ್ದ ಕೂಡಲೇ ನಿಂತಿದ್ದ ಸ್ಥಳದಿಂದ ನಾಲ್ಕು ಹೆಜ್ಜೆ ಮುಂದೆ ಬಂದು ಎದೆಯುಬ್ಬಿಸಿ ಸೆಲ್ಯೂಟ್ ಮಾಡುತ್ತಾರೆ. ವಿಶ್ವ ಕಪ್ ನ ಪಂದ್ಯದಲ್ಲಿ ಭಾರತದ ಶಮಿ ಕಾಟ್ರೆಲ್ ವಿಕೆಟ್ ಪಡೆದಾಗ ಸೆಲ್ಯೂಟ್ ಶೈಲಿಯಲ್ಲಿ ಅಣಕವಾಡಿದಾಗ ವಿಂಡೀಸ್ ವೇಗಿ ಸೆಲ್ಯೂಟ್ ಹಿಂದಿನ ಕಥೆ ಜಗಜ್ಜಾಹೀರು ಮಾಡಿದ್ದರು.ಬಾಂಗ್ಲಾದೇಶದ ಬೌಲರ್ ಇಬಾದತ್ ಹುಸೈನ್ ಕೂಡಾ ವಾಯುಪಡೆಯ ಯೋಧನಾದ ಕಾರಣ ಸೆಲ್ಯೂಟ್ ಸೆಲೆಬ್ರೇಶನ್ ಮಾಡುತ್ತಾರೆ.
ಬಹುಶಃ ಅತೀ ಹೆಚ್ಚು ಟೀಕೆಗೆ ಒಳಗಾದ ಒಂದು ತಂಡದ ಸಂಭ್ರಮಾಚರಣೆಯಿದು. ನಿದಹಾಸ್ ತ್ರಿಕೋನ ಸರಣಿಯಲ್ಲಿ ಬಾಂಗ್ಲಾ ಆಟಗಾರರು ಆರಂಭಿಸಿದ ಈ ನಾಗಿನ್ ನೃತ್ಯ ನಂತರ ಅವರನ್ನೇ ಮುಜುಗರಕ್ಕೆ ದೂಡಿತು. ಲಂಕಾ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಗೆದ್ದ ಬಾಂಗ್ಲಾದೇಶದ ಆಟಗಾರರು ಎರಡೂ ಕೈ ಮೇಲಿತ್ತು ನಾಗಿನ್ ಡಾನ್ಸ್ ಮಾಡಿದ್ದರು. ಆದರೆ ಅವರ ಸಂಭ್ರಮಾಚರಣೆಯಿಂದ ಹೆಚ್ಚಾಗಿ ಎದುರಾಳಿಯನ್ನು ಅಣಕಿಸುವಂತಿತ್ತು.
Related Articles
Advertisement
ಇದರಿಂದಾಗಿ ಕೆರಳಿದ್ದ ಲಂಕಾ ಆಟಗಾರರು ಭಾರತ- ಬಾಂಗ್ಲಾ ನಡುವಿನ ಫೈನಲ್ ಪಂದ್ಯದಲ್ಲಿ ಭಾರತ ತಂಡವನ್ನು ಬೆಂಬಲಿಸಿದ್ದರು. ಅಂತಿಮ ಓವರ್ ನಲ್ಲಿ ಬಾಂಗ್ಲಾ ಸೋತಾಗ ಲಂಕಾ ಬೆಂಬಲಿಗರು ಅದೇ ನಾಗಿನ್ ಡ್ಯಾನ್ಸ್ ಮಾಡಿದ್ದರು.
ಕೆಸ್ರಿಕ್ ವಿಲಿಯಮ್ಸ್ ನ ನೋಟ್ ಬುಕ್ ಸಂಭ್ರಮಇತ್ತೀಚೆಗೆ ವಿರಾಟ್ ಕೊಹ್ಲಿ ನೋಟ್ ಬುಕ್ ಶೈಲಿಯ ಸಂಭ್ರಮಾಚರಣೆ ಮಾಡಿದ್ದು ನಿಮಗೆ ಗೊತ್ತಿರಬಹುದು. ಆದರೆ ಈ ಶೈಲಿಯನ್ನು ಮೊದಲು ಮಾಡಿದ್ದು ಕೆಸ್ರಿಕ್ ವಿಲಿಯಮ್ಸ್.
ಒಂದು ಕಾಲದಲ್ಲಿ ಭಾರಿ ಸದ್ದು ಮಾಡಿದ್ದ ಡ್ಯಾನ್ಸ್ ಇದು. ವೆಸ್ಟ್ ಇಂಡೀಸ್ ನ ಆಲ್ ರೌಂಡರ್ ಡ್ವೇನ್ ಬ್ರಾವೋ ಅವರ ಆಲ್ಬಮ್ ಸಾಂಗ್ ‘ಚಾಂಪಿಯನ್ ‘ ಭಾರಿ ಜನಪ್ರೀಯತೆ ಪಡೆಯಿತು. 2016ರಲ್ಲಿ ಬಿಡುಗಡೆಯಾದ ಈ ಹಾಡಿನ ನೃತ್ಯವನ್ನು ಬ್ರಾವೋ ವಿಕೆಟ್ ಪಡೆದ ಪ್ರತಿ ಸಂದರ್ಭದಲ್ಲೂ ಮೈದಾನದಲ್ಲಿ ಮಾಡುತ್ತಿದ್ದರು. ಇದರಿಂದಾಗಿ ಚಾಂಪಿಯನ್ ಹಾಡು ಮತ್ತು ನೃತ್ಯ ಬೇಗನೆ ಜನಪ್ರಿಯವಾಯಿತು. 2016ರ ಟಿ ಟ್ವೆಂಟಿ ವಿಶ್ವಕಪ್ ಅನ್ನು ವೆಸ್ಟ್ ಇಂಡೀಸ್ ಗೆದ್ದಾಗಿ ಇಡೀ ತಂಡ ಮೈದಾನದಲ್ಲಿ ಇದೇ ಹಾಡಿಗೆ ಕುಣಿದಿತ್ತು.