ಹೊಸದಿಲ್ಲಿ : 2008ರ ಗುಜರಾತ್ ಸರಣಿ ಬಾಂಬ್ ನ್ಪೋಟದ ಹಿಂದಿರುವ ಮುಖ್ಯ ಆರೋಪಿ, Top bomb maker, ಆಬ್ದುಲ್ ಸುಭಾನ್ ಅಲಿಯಾಸ್ ತೌಕೀರ್ ಎಂಬಾತನನ್ನು ಪೊಲೀಸರು ಹತ್ತು ವರ್ಷದ ಬೇಟೆಯ ಬಳಿಕ ಬಂಧಿಸಿರುವುದಾಗಿ ವರದಿಯಾಗಿದೆ.
ಕುರೇಶಿಯು ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (ಸಿಮಿ) ಮತ್ತು ಇಂಡಿಯನ್ ಮುಜಾಹಿದೀನ್ (ಐಎಂ) ಉಗ್ರ ಸಂಘಟನೆಯ ಸದಸ್ಯನಾಗಿದ್ದು ಬಹಳ ದೀರ್ಘ ಕಾಲದಿಂದ ಆತ ಭಾರತದ ಮೋಸ್ಟ್ ವಾಂಟೆಡ್ ಉಗ್ರನಾಗಿದ್ದ.
ವಿಶ್ವದ ಓರ್ವ ಉನ್ನತ ಬಾಂಬ್ ಮೇಕರ್ ಎನ್ನಲಾಗಿರುವ ಕುರೇಶಿ, ಭಾರತದ ಉಸಾಮಾ ಬಿನ್ ಲಾಡೆನ್ ಎಂಬ ಕುಖ್ಯಾತಿಯನ್ನೂ ಹೊಂದಿದ್ದಾನೆ. ಈತ 2006ರ ಮುಂಬಯಿ ಟ್ರೈನ್ ಬಾಂಬಿಂಗ್ ಶಂಕಿತನೂ ಆಗಿದ್ದಾನೆ.
ದಿಲ್ಲಿ ಪೊಲೀಸ್ ವಿಶೇಷ ದಳ ಸಣ್ಣ ಮಟ್ಟಿನ ಗುಂಡಿನ ಕಾಳಗದ ಬಳಿಕ ಬಂಧಿಸಿತೆಂದು ಎಎನ್‌ಐ ವರದಿ ಮಾಡಿದೆ. ಗುಜರಾತ್ ಸರಣಿ ಬಾಂಬ್ ಸ್ಫೋಟದ ಬಳಿಕ ಕುರೇಶಿ ಭೂಗತನಾಗಿದ್ದ. ಆತನ ಪತ್ತೆಗೆ ವ್ಯಾಪಕ ಜಾಲ ಬೀಸಲಾಗಿತ್ತು. ಆದರೂ ಫಲಕಾರಿಯಾಗಿಲಿಲ್ಲ.