Advertisement

ತೊಗರಿ ಖರೀದಿ: ರೈತರ ಖಾತೆಗೆ 2.63 ಕೋಟಿ ಜಮೆ

12:53 PM Mar 12, 2018 | Team Udayavani |

ಮಾದನಹಿಪ್ಪರಗಿ: ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಗೆ ಸಂಬಂಧಿಸಿದಂತೆ ಇಲ್ಲಿಯ ವರೆಗೆ ರೈತರ ಖಾತೆ ಒಟ್ಟು
2,63, 17000 ರೂ. ಜಮೆಯಾಗಿದೆ ಎಂದು ಇಲ್ಲಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯದರ್ಶಿ
ಶಿವಶಂಕರ ಪಾಟೀಲ ತಿಳಿಸಿದ್ದಾರೆ.

Advertisement

ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಇಲ್ಲಿಯವರೆಗೆ 7910 ಕ್ವಿಂಟಲ್‌ ತೊಗರಿ ಖರೀದದಿಯಾಗಿದೆ. ತೊಗರಿ ಮಾರಾಟಕ್ಕಾಗಿ 938 ಜನ ರೈತರ ನೋಂದಣಿ ಮಾಡಿದ್ದಾರೆ. ಇದರಲ್ಲಿ 598 ಜನ ರೈತರ ತೊಗರಿ ಖರೀದಿಯಾಗಿದೆ.  ಇದರಲ್ಲಿ 288 ಜನ ರೈತರ ಖಾತೆಗೆ 2, 63, 17000 ರೂ. ಹಣ ಜಮೆಯಾಗಿದೆ. ಇನ್ನೂ 340 ಜನ ರೈತರ ತೊಗರಿ ಖರೀದಿ ಪ್ರಕ್ರಿಯೆ ಆರಂಭವಾಗಿದೆ. ಸರಕಾರದ ಆದೇಶದಂತೆ ಪ್ರತಿ ರೈತರಿಂದ 10 ಕ್ವಿಂಟಲ್‌ ಮಾತ್ರ ಖರೀದಿ ಮಾಡಲಾಗುತ್ತಿದೆ.

ಬರುವ ಶನಿವಾರದ ವೇಳೆಗೆ ಮಾದನ ಹಿಪ್ಪರಗಿ ವಲಯದ ಎಲ್ಲ ರೈತರ ತೊಗರಿ ಖರೀದಿ ಮುಗಿಯುತ್ತದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next