Advertisement

ತೊಗರಿ ಖರೀದಿ ಕೇಂದ್ರ ಬಂದ್‌

05:41 PM Feb 19, 2018 | |

ವಡಗೇರಾ: ಕಳೆದ ಹಲವು ತಿಂಗಳಿಂದ ಸಮೀಪದ ಬೆಂಡೆಬೆಂಬಳಿ ಗ್ರಾಮದ ವ್ಯವಸಾಯ ಸಹಕಾರ ಸಂಘದ ತೊಗರಿ ಖರೀದಿ ಕೇಂದ್ರ ಮುಚ್ಚಿರುವುದರಿಂದ ಈ ಭಾಗದ ಅನೇಕ ರೈತರು ತೊಂದರೆ ಅನುಭವಿಸುತ್ತಿದ್ದಾರೆ.

Advertisement

ಈ ಹಿಂದೆ ಜಿಲ್ಲೆಯಾದ್ಯಂತ ಅನೇಕ ರೈತರು ತೊಗರಿ ಖರೀದಿ ಅವಧಿಯನ್ನು ವಿಸ್ತರಿಸಬೇಕು ಎಂದು ಆಗ್ರಹಿಸಿ ರಸ್ತೆ ತಡೆ ಮಾಡಿ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದ್ದರು. ಆಗ ಜಿಲ್ಲಾಧಿಕಾರಿ ತೊಗರಿ ಖರೀದಿ ಅವಧಿಯನ್ನು ವಿಸ್ತರಿಸಬೇಕು ಎಂದು ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದರು.

ಆಗ ಸರಕಾರ ಫೆ. 14ರಿಂದ ಮಾರ್ಚ್‌ 15ರವರೆಗೆ ರೈತರಿಂದ ತೊಗರಿ ಖರೀದಿಸಬೇಕು ಎಂದು ಆದೇಶ ಹೊರಡಿಸಿತ್ತು. ಜಿಲ್ಲೆಯಲ್ಲಿ ಸರಕಾರ ಸ್ಥಾಪನೆ ಮಾಡಿದ ತೊಗರಿ ಕೇಂದ್ರದಲ್ಲಿ ರೈತರಿಂದ ತೊಗರಿ ಖರೀದಿಸುತಿವೆ. ಆದರೆ ಹಲವು ದಿನಗಳಿಂದ ಬೆಡೆಬೆಂಬಳಿ ತೊಗರಿ ಕೇಂದ್ರದಲ್ಲಿ ತೊಗರಿ ಖರೀದಿಸುತ್ತಿಲ್ಲ. 

ಹೀಗಾಗಿ ತೊಗರಿ ಖರೀದಿ ಕೇಂದ್ರದ ಎದುರು ಲಾರಿ, ಚಕ್ಕಡಿ ಹಾಗೂ ಟ್ರ್ಯಾಕ್ಟರ್‌ ಗಳಲ್ಲಿ ನೂರಾರು ಕ್ವಿಂಟಲ್‌ ತೊಗರಿ ತಂದು ತೊಗರಿ ಖರೀದಿ ಕೇಂದ್ರದ ಎದುರು ರೈತರು ಕಾಯುತ್ತಿದ್ದಾರೆ. ಆದರೆ ಅತ್ತ ವ್ಯವಸಾಯ ಸೇವಾ ಸಹಕಾರ ಸಂಘದ ಯಾವೊಬ್ಬ ಸಿಬ್ಬಂದಿ ಸುಳಿಯುತ್ತಿಲ್ಲ ಎಂದು ರೈತರು ದೂರಿದ್ದಾರೆ.

ಬೆಂಡೆಬೆಂಬಳಿ ಗ್ರಾಮದಲ್ಲಿರುವ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ಇಲ್ಲಿಯವರೆಗೂ ಸುಮಾರು 661 ಜನ
ರೈತರು ತೊಗರಿ ಮಾರಾಟಕ್ಕಾಗಿ ಹೆಸರು ನೋಂದಾಯಿಸಿದ್ದಾರೆ. ಅದರಲ್ಲಿ ಈಗಾಗಲೇ ಸುಮಾರು 392 ರೈತರಿಂದ ಸುಮಾರು 5,444 ಕ್ವಿಂಟಲ್‌ ತೊಗರಿ ಖರೀದಿಸಲಾಗಿದೆ. ಇನ್ನೂಳಿದ 269 ಜನ ರೈತರಿಂದ ತೊಗರಿ ಖರೀದಿಸಬೇಕಾಗಿದೆ. 

Advertisement

ರೈತರ ಆರೋಪ: ಬೆಂಡೆಬೆಂಬಳಿ ವ್ಯವಸಾಯ ಸಹಕಾರ ಸಂಘದಲ್ಲಿ ಸ್ಥಾಪನೆ ಮಾಡಿರುವ ತೊಗರಿ ಕೇಂದ್ರದ ಕೆಲ ಸಿಬ್ಬಂದಿ ಶ್ರೀಮಂತ ರೈತರಿಂದ ತೊಗರಿ ಖರೀದಿಸುತ್ತಿದ್ದಾರೆ. ಆದರೆ ಬಡ ರೈತರ ತೊಗರಿ ಖರೀದಿಸಲು ಸಿಬ್ಬಂದಿ ಕುಂಟು ನೆಪ ಹೇಳುತ್ತಿದ್ದಾರೆ ಎಂದು ರೈತರ ಆರೋಪವಾಗಿದೆ.

ಆದಕಾರಣ ಜಿಲ್ಲಾಧಿಕಾರಿಗಳು ಇತ್ತ ಕಡೆ ಗಮನಹರಿಸಿ ಬೆಂಡೆಬೆಂಬಳಿ ಗ್ರಾಮದಲ್ಲಿರುವ ತೊಗರಿ ಖರೀದಿ ಕೇಂದ್ರದ
ಸಿಬ್ಬಂ ಗಳ ಮೇಲೆ ಸೂಕ್ತ ಕ್ರಮ ಕೈಗೊಂಡು ರೈತರ ಸಮಸ್ಯೆ ಬಗೆಹರಿಸಬೇಕು ಎಂದು ಈ ಭಾಗದ ಅನೇಕ ಗ್ರಾಮಗಳ ರೈತರು ಆಗ್ರಹಿಸಿದ್ದಾರೆ.

ತೊಗರಿ ತುಂಬಲು ಖಾಲಿ ಚೀಲ ಇರಲಿಲ್ಲ ತೊಗರಿ ತುಂಬಲು ಖಾಲಿ ಚೀಲ ಇರಲಿಲ್ಲ ಎಂಬ ಮಾಹಿತಿ ಬಂದಿದೆ. ಅದಕ್ಕಾಗಿ ಸಮಸ್ಯೆಆಗಿದ್ದು, ನೋಂದಣಿ ಮಾಡಿರುವ ಎಲ್ಲಾ ರೈತರಿಂದ ನಾಳೆಯಿಂದ ಬೆಂಡೆಬೆಂಬಳಿ ತೊಗರಿ ಕೇಂದ್ರದಲ್ಲಿ ತೊಗರಿ ಖರೀದಿಸಲಾಗುವುದು.
  ರಂಗನಾಥ, ಎಪಿಎಂಸಿ ಕಾರ್ಯದರ್ಶಿ ಶಹಾಪುರ

ರೈತರ ಸಮಸ್ಯೆ ಶೀಘ್ರ ನಿವಾರಿಸಿ ಕಳೆದ ಹಲವು ದಿನಗಳಿಂದ ಬೆಂಡೆಬೆಂಬಳಿ ತೊಗರಿ ಕೇಂದ್ರದಲ್ಲಿ ತೊಗರಿ ಖರೀದಿಸುತ್ತಿಲ್ಲ. ಇದರಿಂದ ರೈತರಿಗೆ ಸಾಕಷ್ಟು ಸಮಸ್ಯೆ ಆಗಿದೆ. ಜಿಲ್ಲಾಧಿಕಾರಿ ಸೂಕ್ತ ಕ್ರಮ ಕೈಗೊಂಡು ರೈತರ ಸಮಸ್ಯೆ ನಿವಾರಿಸಬೇಕು.
 ನಿಂಗಣ್ಣ ಜಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ರೈತ ಸಂಘ ಹಸಿರು ಸೇನೆ

ನಾಮದೇವ ವಾಟ್ಕರ

Advertisement

Udayavani is now on Telegram. Click here to join our channel and stay updated with the latest news.

Next