Advertisement
ಕಟ್ಟಿಗೆ ಮರುಬಳಕೆ ಮಾಡಿಕೊಳ್ಳಲು ಇದರ ಲಾಗೋಡಿ ಆರ್ಥಿಕ ಹೊರೆಯಾಗುತ್ತದೆ ಎನ್ನಲಾಗುತ್ತದೆ. ಆದರೆ ಬೇಸಿಗೆಯಲ್ಲಿ ಗೊಬ್ಬರ ಮಾಡಿ ಮಳೆಗಾಲದಲ್ಲಿ ಬಳಕೆ ಮಾಡಿದರೇ ಗೊಬ್ಬರ ಖರೀದಿಯಂತ ತಾಪತ್ರಯ ತಪ್ಪಿಸಬಹುದು. ಆದರೆ ಇದರ ಗೋಜಿಗೆ ಬಹುತೇಕರು ಹೋಗುವುದಿಲ್ಲ. ಹೀಗಾಗಿ ಕಲಬರಗಿ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ತೊಗರಿ ಕಟ್ಟಿಗೆ ಮರುಬಳಕೆ ಕುರಿತು ಪ್ರಾಯೋಗಿಕವಾಗಿ ಮಾಡಿ ತೋರಿಸಿದ್ದಾರೆ.
Related Articles
Advertisement
ತೊಗರಿ ಕಟ್ಟಿಗೆ ಸರಾಸರಿ ಶೇ.0.84 ಸಾರಜನಕ, 0.04 ರಂಜಕ ಹಾಗೂ ಶೇ. 0.35ರಷ್ಟು ಪೋಟ್ಯಾಷ್ ಪೋಷಕಾಂಶದ ಜತೆಗೆ ಲಘು ಪೋಷಕಾಂಶಗಳನ್ನು ಹೊಂದಿದೆ. ಆದರೆ ತೊಗರಿಕಟ್ಟಿಗೆ ಸದ್ಬಳಕೆಯಾಗದೇ ನಿರ್ಲಕ್ಷÂದಿಂದ ಅದರಲ್ಲಿನ ಪೋಷಕಾಂಶಗಳು ವ್ಯರ್ಥಗೊಳಿಸುತ್ತಿರುವುದು ಆಘಾತಕಾರಿ ಎನ್ನಲಾಗಿದೆ. ಈ ಕಟ್ಟಿಗೆಯನ್ನು ಸೂಕ್ತವಾಗಿ ಬೆಳೆ ಉತ್ಪಾದನೆಯಲ್ಲಿ ಮರುಬಳಕೆ ಮಾಡಿದರೆ ಬೆಳೆಯ ಇಳುವರಿಯ ಸ್ಥಿರತೆಯೊಂದಿಗೆ ಖರ್ಚಿಲ್ಲದೇ ಮಣ್ಣಿನ ಫಲವತ್ತತೆ ಸುಧಾರಿಸಿ ಉಳಿತಾಯಕ್ಕೆ ರೈತರು ಮುಂದಾಗಬೇಕಾಗಿದೆ.
ಕಟ್ಟಿಗೆ ಮಣ್ಣಿಗೆ ಸೇರಿಸಿ
ತೊಗರಿ ಕಾಯಿಗಳನ್ನು ರಾಶಿ ಮಾಡಿದ ನಂತರ ಉಳಿದ ಕಟ್ಟಿಗೆ ಮತ್ತು ಬೆಳೆಯ ಉಳಿಕೆಗಳನ್ನು ಮಣ್ಣಿನಲ್ಲಿ ಸೇರಿಸಬೇಕು. ಯಂತ್ರೋಪಕರಣಗಳ ಸಹಾಯದಿಂದ ಕಟ್ಟಿಗೆಯನ್ನು ಚಿಕ್ಕ-ಚಿಕ್ಕ ತುಂಡುಗಳಾಗಿ ಕತ್ತರಿಸಿ ಹೊಲದ ಮೇಲೆ ಹೊದಿಕೆಯಂತೆ ಹಾಕಿ ನಂತರ ಮುಂಗಾರಿನಲ್ಲಿ ರಂಟೆ ಹೊಡೆಯುವ ಮೂಲಕವೂ ಮಣ್ಣಿಗೆ ಸೇರಿಸಬಹುದು. ತೊಗರಿಕಟ್ಟಿಗೆ ಚಿಕ್ಕದಾಗಿ ತುಂಡರಿಸಿ ಅಥವಾ ಪುಡಿ ಮಾಡಿ ನೇರವಾಗಿ ಮಣ್ಣಿನಲ್ಲಿ ಸೇರಿಸುವುದು ಅಥವಾ ಎರೆಹುಳು ಗೊಬ್ಬರ ಅಥವಾ ಕಾಂಪೋಸ್ಟ್ ತಯಾರಿಕೆಯಲ್ಲಿ ಕಚ್ಚಾ ಸಾಮಗ್ರಿಯಾಗಿ ಬಳಸಬಹುದು.
ತೊಗರಿ ಕಟ್ಟಿಗೆ ಗೊಬ್ಬರವನ್ನಾಗಿಸಿ
ರಾಶಿಯಾದ ಮೇಲೆ ತೊಗರಿ ಕಟ್ಟಿಗೆ ಸುಡದೇ ಅದನ್ನು ಹಲವು ವಿಧಿಧಾನಗಳಲ್ಲಿ ಗೊಬ್ಬರ ರೂಪದಲ್ಲಿ ಭೂಮಿಗೆ ಹಾಕಿದರೆ ಸಾಕಷ್ಟು ಲಾಭವಿದೆ. ಇದಕ್ಕಾಗಿ ರೈತರು ಶ್ರಮವಹಿಸಬೇಕು. ಇದರಿಂದ ಗೊಬ್ಬರ ಖರೀದಿ ಹಣ ಉಳಿಸಿ ಅದೇ ಲಾಗೋಡಿ ಇಲ್ಲಿ ವ್ಯಯ ಮಾಡಿದರೆ ಭೂಮಿಯ ಫಲವತ್ತತೆ ಜೊತೆಗೆ ಪೋಷಕಾಂಶ ಹೆಚ್ಚಾಗಿ ಇಳುವರಿ ಅಧಿಕವಾಗುತ್ತದೆ. ರೈತರು ಈ ಕೆಲಸ ಮಾಡಿ ಲಾಭ ಮಾಡಿಕೊಳ್ಳಬೇಕು ಎನ್ನುತ್ತಾರೆ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ| ಜಹೀರ ಅಹೆಮದ್ ಹಾಗೂ ಡಾ| ಶ್ರೀನಿವಾಸ ಬಿ.ವಿ.