Advertisement

“ಕರುಣೆಯ ಗೋಡೆ’ಗೆ ಹರಿದು ಬರಲಾರಂಭಿಸಿವೆ ಪರಿಕರಗಳು

06:00 AM Jul 06, 2018 | Team Udayavani |

ಉಡುಪಿ: ಅಶಕ್ತರಿಗೆ ಅವಶ್ಯ ವಸ್ತುಗಳು ಸಿಗಬೇಕು, ದಾನ ರೀತಿಯಲ್ಲಿ ನೀಡುವವರಿಗೆ ಸುಲಭ ವೇದಿಕೆ ದೊರಕಿಸಿಕೊಡಬೇಕೆಂಬ ಉದ್ದೇಶದಿಂದ ಶ್ರೀಕೃಷ್ಣ ಮಠದ ಮಧ್ವ ಸರೋವರ ಸಮೀಪ ವೈದ್ಯಕೀಯ ವಿದ್ಯಾರ್ಥಿಗಳ ತಂಡ ಆರಂಭಿಸಿರುವ “ಕರುಣೆಯ ಗೋಡೆ’ಗೆ (ವಾಲ್‌ ಆಫ್ ಕೈಂಡ್‌ನೆಸ್‌) ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

Advertisement

ಆರಂಭ ದಿನ ವಿದ್ಯಾರ್ಥಿಗಳೇ ಕೆಲವು ಬಟ್ಟೆ, ಚಪ್ಪಲಿ ಮತ್ತು ಇತರ ಕೆಲವು ಪರಿಕರಗಳನ್ನು ಇಟ್ಟಿದ್ದರು. ಮರುದಿನ ಅವುಗಳನ್ನು ಯಾರೋ ಪಡೆದುಕೊಂಡು ಹೋಗಿದ್ದಾರೆ. ಅಂತೆಯೇ ಕೆಲವರು ಪಂಚೆ, ಟಿ-ಶರ್ಟ್‌, ಸೀರೆಗಳನ್ನು ಇಟ್ಟು ಹೋಗಿದ್ದರು. ಅವುಗಳನ್ನು ಕೂಡ ಕೊಂಡೊಯ್ಯಲಾಗಿದೆ. ಗುರುವಾರ ಮಧ್ಯಾಹ್ನದವರೆಗೆ 1 ಜತೆ ಚಪ್ಪಲಿ, 4 ಪಂಚೆ, 3 ಟಿ-ಶರ್ಟ್‌, 2 ಶರ್ಟ್‌, 2 ಸೀರೆಗಳನ್ನು “ಕರುಣೆಯ ಗೋಡೆ’ಯಿಂದ ಅವಶ್ಯವುಳ್ಳವರು ಪಡೆದುಕೊಂಡು ಹೋಗಿದ್ದಾರೆ. 

ಈ ರೀತಿ ಪಡೆದುಕೊಂಡವರಲ್ಲಿ ಹಿರಿಯ ನಾಗರಿಕರು ಹೆಚ್ಚಿದ್ದಾರೆ. ಗುರುವಾರದಂದು ಹೊಸತರಂತೆ ಕಾಣುವ, ಇಸಿŒ ಮಾಡಿದ ಬಟ್ಟೆಗಳನ್ನು ಕರುಣೆಯ ಗೋಡೆಯ ರ್ಯಾಕ್‌ನಲ್ಲಿ ತಂದಿಡಲಾಗಿದೆ. ಅಲ್ಲದೆ ಇಲ್ಲಿ ಕೆಲವು ಶರ್ಟ್‌, ಸೀರೆಗಳು ಕೂಡ ಇವೆ. ತಂದಿಡುವವರು ಕೆಲವರು ಪ್ಲಾಸ್ಟಿಕ್‌ ಕವರ್‌ನಲ್ಲಿ ತಂದಿರಿಸಿದರೆ ಇನ್ನು ಕೆಲವರು ಒಪ್ಪವಾಗಿ ಜೋಡಿಸಿಟ್ಟು ಹೋಗುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next