Advertisement

ಕೋವಿಡ್ ಸೋಂಕಿನ ವರದಿ ಕೈ ಸೇರಿದಾಗ ಹೊಸ ಪೋಸ್ಟಿಂಗ್ ಆರ್ಡರ್ ಎಂದುಕೊಂಡ CRPF ಯೋಧ!

05:39 PM May 13, 2020 | Hari Prasad |

ನವದೆಹಲಿ: ‘ನನಗೆ ಕೋವಿಡ್ ಇರುವುದನ್ನು ದೃಢಪಡಿಸಿದ ವೈದ್ಯಕೀಯ ದಾಖಲೆಗಳನ್ನು ಓದಿದಾಗ ನಾನು ಧೃತಿಗೆಡಲಿಲ್ಲ. ಇದು ನನ್ನ ಹೊಸ ಪೋಸ್ಟಿಂಗ್‌ನ ಆದೇಶ ಎಂದು ತಿಳಿದುಕೊಂಡೆ.

Advertisement

ನನ್ನನ್ನು ಈ ಹಿಂದೆ, ನಕ್ಸಲ್‌ ಪೀಡಿತ ಪ್ರದೇಶಗಳಿಗೆ ವರ್ಗಾವಣೆ ಮಾಡಲಾಗಿತ್ತು. ಹಾಗೆಯೇ ಇದೂ ಒಂದು ಹೊಸ ವರ್ಗಾವಣೆ ಆದೇಶ ಎಂದು ತಿಳಿದುಕೊಂಡೆ’

– ಇದು ಕೋವಿಡ್ ವೈರಸ್ ಗೆದ್ದು ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿರುವ ಸಿಆರ್‌ಪಿಎಫ್ ಯೋಧ ಸತ್ಯಬೀರ್‌ ಸಿಂಗ್‌ ಹೇಳಿಕೆ.

ನವದೆಹಲಿಯ ಸಿಆರ್‌ಪಿಎಫ್ ಕೇಂದ್ರದಲ್ಲಿ ಹಲವಾರು ಸೋಂಕಿಗೆ ತುತ್ತಾಗಿದ್ದವರ ಪೈಕಿ ಸತ್ಯಬೀರ್‌ ಸಿಂಗ್‌ ಒಬ್ಬರು. ಅವರು 31ನೇ ಬೆಟಾಲಿಯನ್‌ನಲ್ಲಿ ರೇಡಿಯೋ ಆಪರೇಟರ್‌ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಶೀಘ್ರದಲ್ಲಿಯೇ ಅವರು ಚೇತರಿಕೆ ಕಂಡಿದ್ದು ಅಚ್ಚರಿಗೆ ಕೂಡ ಕಾರಣವಾಗಿದೆ.

ಇದಕ್ಕೆ ಸಿಂಗ್‌, “ನಾನು ಕೋವಿಡ್ ಬಂದಿರುವ ವಿಚಾರವನ್ನು ಮನಸ್ಸಿಗೆ ಹಚ್ಚಿಕೊಳ್ಳಲಿಲ್ಲ. ಹಾಗಾಗಿಯೇ ಬೇಗನೇ ಗುಣಮುಖನಾಗಲು ಕಾರಣವಾಯಿತು.

Advertisement

ಸೋಂಕಿಗೆ ಒಳಗಾದಾಗ ಕೊರಗಿದಷ್ಟೂ, ಎದೆಗುಂದಿದಷ್ಟೂ ಅದು ಹೆಚ್ಚು ಕಾಡುತ್ತದೆ. ವೈದ್ಯರು ಹೇಳಿದ್ದನ್ನು ಪಾಲಿಸಿದರೆ ಆ ರೋಗವನ್ನು ಎಂಥವರಾದರೂ ಗೆಲ್ಲಬಹುದು’ ಎಂದರು.

ಆತ್ಮಹತ್ಯೆ: ಕೋವಿಡ್ ಭೀತಿಯಿಂದ CRPFನ ಸಬ್‌ ಇನ್ಸ್‌ಪೆಕ್ಟರ್‌ ಫ‌ತ್ಹಾ ಸಿಂಗ್‌ (55) ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದಕ್ಷಿಣ ಕಾಶ್ಮೀರದ ಅನಂತನಾಗ್‌ ಜಿಲ್ಲೆಯ ಮಟಾನ್‌ ನಗರದಲ್ಲಿ ಈ ದುರಂತ ನಡೆದಿದೆ. ಇದೇ ವೇಳೆ ಕೋಲ್ಕತಾದಲ್ಲಿ CISFನ ಅಧಿಕಾರಿ ಸೋಂಕಿನಿಂದಾಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next