Advertisement

‘ತೂಫಾನ್’ ವೇಗಕ್ಕೆ ದಾಖಲೆಗಳೆಲ್ಲಾ ಉಡೀಸ್..; ಹೊಸ ಮೈಲಿಗಲ್ಲು ನೆಟ್ಟ ಕೆಜಿಎಫ್-2 ಹಾಡು

01:26 PM Mar 22, 2022 | Team Udayavani |

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಚಿತ್ರದ ಹವಾ ಈಗಾಗಲೇ ಆರಂಭವಾಗಿದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ವರ್ಷದ ಬಹುನಿರೀಕ್ಷಿತ ಚಿತ್ರ ಕೆಜಿಎಫ್ ಚಾಪ್ಟರ್ 2 ನ ಹಾಡು ಇದೀಗ ದಾಖಲೆ ಪುಟ ಸೇರಿದೆ.

Advertisement

ಕೆಜಿಎಫ್ ಚಾಪ್ಟರ್ 2 ಚಿತ್ರದ ಮೊದಲ ಲಿರಿಕಲ್ ಹಾಡು ‘ತೂಫಾನ್’ ಸೋಮವಾರ ಬಿಡುಗಡೆಯಾಗಿತ್ತು. ಸೋಮವಾರ ಬೆಳಗ್ಗೆ ಐದು ಭಾಷೆಗಳಲ್ಲಿ ತೆರೆಕಂಡ ಕೆಜಿಎಫ್ ಚಾಪ್ಟರ್ 2 ಚಿತ್ರ ತೂಫಾನ್ ಹಾಡು ಒಂದೇ ದಿನದಲ್ಲಿ ಸೂಪರ್ ಹಿಟ್ ಆಗಿದೆ.

ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಯ ಹಾಡುಗಳು ಲಹರಿ ಮ್ಯೂಸಿಕ್ ನ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿತ್ತು. ರಾಕಿ ಭಾಯ್ ನ ಹೊಸ ಹಾಡು ಇಂಟರ್ನೆಟ್ ನಲ್ಲಿ ಕಿಚ್ಚು ಹಚ್ಚಿದ್ದು, ಬಿಡುಗಡೆಯಾಗಿ ಕೇವಲ 24 ಗಂಟೆಯಲ್ಲಿ 26 ಮಿಲಿಯನ್ ಗೂ ಹೆಚ್ಚಿನ ವೀಕ್ಷಣೆ ಪಡೆದಿದೆ. ಅದಲ್ಲದೆ, ಐದು ಭಾಷೆಗಳಲ್ಲಿ ಎರಡು ಮಿಲಿಯನ್ ಗೂ ಹೆಚ್ಚಿನ ಲೈಕ್ಸ್ ಪಡೆದಿದೆ.

ಇದನ್ನೂ ಓದಿ:ತಮ್ಮ ಪುನೀತ್ ನಿಂದಾಗಿ ನಾನು ಸ್ವರ್ಗ ನೋಡುತ್ತಿದ್ದೇನೆ: ರಾಘವೇಂದ್ರ ರಾಜಕುಮಾರ್

ಕೇವಲ 24 ಗಂಟೆ ಅವಧಿಯಲ್ಲಿ ಅತೀ ಹೆಚ್ಚು ವೀಕ್ಷಣೆ ಪಡೆದ ಭಾರತದ ಮೊದಲ ಲಿರಿಕಲ್ ವಿಡಿಯೋ ಹಾಡು ಎಂಬ ದಾಖಲೆಗೂ ‘ತೂಫಾನ್’ ಪಾತ್ರವಾಗಿದೆ. ರವಿ ಬಸ್ರೂರು ಸಂಗೀತ ನಿರ್ದೇಶನದ ಹಾಡನ್ನು ಕನ್ನಡದಲ್ಲಿ ಸಂತೋಷ್ ವೆಂಕಿ, ಮೋಹನ್ ಕೃಷ್ಣ, ಸಚಿನ್ ಬಸ್ರೂರ್, ರವಿ ಬಸ್ರೂರ್, ಪುನೀತ್ ರುದ್ರನಾಗ್, ಮನೇಶ್ ದಿನಕರ್, ವರ್ಷಾ ಆಚಾರ್ಯ ಹಾಡಿದ್ದಾರೆ.

ಹೊಂಬಾಳೆ ಫಿಲಂಸ್ ನಿರ್ಮಾಣ ಸಂಸ್ಥೆಯಡಿ ವಿಜಯ ಕಿರಗಂದೂರು ನಿರ್ಮಿಸಿರುವ ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕೆ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಿದ್ದಾರೆ. ರಾಕಿಂಗ್ ಸ್ಟಾರ್ ಯಶ್, ಶ್ರೀನಿಧಿ ಶೆಟ್ಟಿ ಜೊತೆಗೆ ಬಾಲಿವುಡ್ ಸ್ಟಾರ್ ಗಳಾದ ಸಂಜಯ್ ದತ್, ರವೀನಾ ಟಂಡನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next