ಮಣಿಪಾಲದ ಪೈ ಮನೆತನದ ಹಿರಿಯರಾದ ಟಿ. ಉಪೇಂದ್ರ ಪೈಗಳು (ಟಿ.ಎ.ಪೈಯವರ ತಂದೆ) ಬಹಳ ಹಿಂದೆಯೇ ಸಹಕಾರಿ ತಣ್ತೀದಡಿಯಲ್ಲಿ ಸಂಘಗಳನ್ನು ಸ್ಥಾಪಿಸಿ ನೇಕಾರಿಕೆ ಮುಂತಾದ ಕಸುಬುಗಳನ್ನು ಪ್ರೋತ್ಸಾಹಿಸಿದ್ದರು. ಡಾ| ಟಿಎಂಎ ಪೈಯವರು ಸಹಕಾರ ತಣ್ತೀದ ಆಧಾರದಲ್ಲಿ ಮಣಿಪಾಲದ ಸಂಸ್ಥೆಗಳನ್ನು ಸ್ಥಾಪಿಸಿದ್ದರಿಂದಲೇ ಈ ಮಟ್ಟಕ್ಕೆ ಬೆಳೆಯಲು ಕಾರಣವಾಯಿತು.
ಯಾವುದೇ ಕ್ಷೇತ್ರವಾಗಲಿ ಅದನ್ನು ಅನುಭವಕ್ಕೆ ತಾರದೆ ಅನುಷ್ಠಾನಗೊಳಿಸಿದರೆ ಈಗ ಕಾಣುವ ವಿವಿಧ ಯೋಜನೆಗಳ ಸ್ಥಿತಿಯೇ ಆಗಲಿದೆ. ಸಹಕಾರ ಕ್ಷೇತ್ರವೂ ಇದಕ್ಕೆ ಹೊರತಲ್ಲ. ಈಗ ಸಹಕಾರಿ ಸಪ್ತಾಹ ನಡೆಯುತ್ತಿರುವ ಸಂದರ್ಭ ಅಖೀಲ ಭಾರತ ಮಟ್ಟದಲ್ಲಿ ಬ್ಯಾಂಕಿಂಗ್, ಸಚಿ ವಾಲಯ, ವಿಮಾ ಸಂಸ್ಥೆ, ನಿರ್ವಹಣ ಸಂಸ್ಥೆಗಳ ಜವಾಬ್ದಾರಿಗಳಲ್ಲಿದ್ದ ಟಿ.ಎ. ಪೈ ಯವರು ಸಹಕಾರಿ ಕ್ಷೇತ್ರದ ಮೂಲಕ ಸ್ಥಳೀಯ ಕೃಷಿ, ಹೈನುಗಾರಿಕೆಯಲ್ಲೂ ಛಾಪು ಮೂಡಿಸಿದ್ದರು ಎನ್ನುವುದನ್ನು ಅವರ ಜನ್ಮಶತಮಾನೋತ್ಸವ ವರ್ಷದಲ್ಲಿ (1922-1981) ಸ್ಮರಿಸಿಕೊಳ್ಳಬೇಕು.
ಪೈಯವರ ಆಲೋಚನ ಶಕ್ತಿ ಒಂದು ಶತಮಾನದ ಮುಂದಕ್ಕೆ ಓಡುತ್ತಿತ್ತು. ದುರ ದೃಷ್ಟವೆಂದರೆ ಆ ವೇಗಕ್ಕೆ ತಕ್ಕುದಾದ ಮಾನವ ಸಂಪನ್ಮೂಲದ ಕೊರತೆ ಇತ್ತು. ಆದ್ದರಿಂದಲೇ ಹೋದಲ್ಲೆಲ್ಲ ಪ್ರತಿಭಾ ಸಂಪನ್ನ ಮಾನವ ಸಂಪನ್ಮೂಲವನ್ನು ಅವರು ಬಳಸಿಕೊಳ್ಳುತ್ತಿದ್ದರು.
ಆರ್‌ಬಿಐಗೂ ಕೆಲಸವೇ ಉತ್ತರ: ಕೃಷಿ ಕ್ಷೇತ್ರಕ್ಕೆ ಯಂತ್ರೋಪಕರಣಗಳನ್ನು ಪರಿಚಯಿಸುತ್ತಿದ್ದ ಕಾಲ. ಎಲ್ಲಿಂದಲೋ ತಂದ ಯಂತ್ರಗಳು ಕೆಲಸ ಮಾಡುವಾಗ ಕೈಕೊಡುತ್ತಿದ್ದವು. ಇದನ್ನು ಕಂಡ ಟಿ.ಎ. ಪೈಯವರು ಮೊದಲು ಆ ಯಂತ್ರಗಳನ್ನು ಗದ್ದೆಗೆ ಇಳಿಸಿ ಸರಿಯಾಗಿ ಕಾರ್ಯನಿರ್ವಹಿಸಿದ ಬಳಿಕವೇ ಯಂತ್ರ ಖರೀದಿಗೆ ಮುಂದಾಗಿದ್ದರು. ಸಿಂಡಿಕೇಟ್ ಬ್ಯಾಂಕ್‌ನಿಂದ ಪಂಪ್‌ಸೆಟ್ ಖರೀದಿಗೆ ಸಾಲ ಕೊಡಲು ಪೈಯವರು ನಿರ್ಧರಿಸಿದಾಗ ಕೃಷಿ ಕ್ಷೇತ್ರ ಲಾಭದಾಯಕವಲ್ಲ ಎಂಬ ಕಾರಣಕ್ಕೆ ಆರ್‌ಬಿಐ ನಿರ್ಬಂಧ ಹೇರಿತು. ಸೊಸೈಟಿಗಳಿಗೆ ಬ್ಯಾಂಕ್ ಸಾಲ ಕೊಡಲು ಅವಕಾಶವಿರುವುದನ್ನು ಉಪಯೋಗಿಸಿ ಕೊಂಡು ಸಹಕಾರಿ ತಣ್ತೀದಡಿ ಸ್ಕ್ಯಾಡ್ಸ್ ನ್ನು 1962ರಲ್ಲಿ ಸ್ಥಾಪಿಸಿದರು. ಎಸ್‌ಸಿಡಿಸಿಸಿ ಬ್ಯಾಂಕ್‌ನಲ್ಲಿ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಕೆ.ವಿ. ಬೆಳಿರಾಯರನ್ನು ಸ್ಕ್ಯಾಡ್ಸ್ ಕಾರ್ಯ ದರ್ಶಿಯಾಗಿ ನೇಮಿಸಿ ದರು. 1964ರಲ್ಲಿ ಬೆಳಿರಾಯರನ್ನು ಸಿಂಡಿಕೇಟ್ ಬ್ಯಾಂಕ್‌ಗೆ ಕರೆಸಿ ಕೃಷಿ ಆರ್ಥಿಕ ಇಲಾಖೆ ಎಂಬ ಹೊಸ ವಿಭಾಗ ತೆರೆದು ಪ್ರಬಂಧಕ ರಾಗಿ ನೇಮಿಸಿದರು. ಬ್ಯಾಂಕ್ ಆಫ್ ಅಮೆರಿಕದಲ್ಲಿ ತರಬೇತಿ ಕೊಡಿಸಿ ಕೃಷಿ ಕ್ಷೇತ್ರದಲ್ಲಿ ಬ್ಯಾಂಕ್ ಮಾಡಬಹುದಾದ ಕೆಲಸಕ್ಕೆ ಉತ್ತೇಜನ ನೀಡಿದರು. ಹೀಗೆ ಕೃಷಿ ಕ್ಷೇತ್ರದ ವಿಕಾಸ ವನ್ನೂ ಸಹಕಾರಿ ರಂಗದ ಮೂಲಕ ಮಾಡಿದರು.
ಅಸಾಧ್ಯವೂ ಸಾಧ್ಯ: ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿ ಸ್ಥಾಪಕಾಧ್ಯಕ್ಷ (1965-98), ಕ್ಷೀರಕ್ರಾಂತಿಯ ಹರಿಕಾರ ಡಾ| ವರ್ಗೀಸ್ ಕುರಿಯನ್ ಅವರು ಹಾಲು ಉತ್ಪಾದನೆಗೆ ಕರಾವಳಿ ಪ್ರದೇಶ ಸೂಕ್ತವಲ್ಲ ಎಂದಿದ್ದರು. ಸಾಧ್ಯ ಎಂದು ತೋರಿಸಲು ಪೈಯವರು 1980ರಲ್ಲಿ ಮಣಿಪಾಲದಲ್ಲಿ ಉಡುಪಿ, ಕುಂದಾಪುರ, ಕಾರ್ಕಳ ತಾಲೂಕು ವ್ಯಾಪ್ತಿಯ ಕೆನರಾ ಮಿಲ್ಕ್ ಯೂನಿಯನ್ ಸ್ಥಾಪಿಸಿದರು. ಈ ವ್ಯಾಪ್ತಿಯಲ್ಲಿ ಪೂರೈಕೆಯಾಗುತ್ತಿದ್ದ ಹಾಲು ನಿತ್ಯ 300 ಲೀ. (ಈಗ ಎರಡೂ ಜಿಲ್ಲೆಗಳ ಉತ್ಪಾದನೆ 5 ಲಕ್ಷ ಲೀ., ಉಡುಪಿ ಜಿಲ್ಲೆಯ ಪಾಲು 2.5 ಲಕ್ಷ ಲೀ.). ಹಳ್ಳಿಗಳಿಗೆ ಹೋಗಿ ರೈತರನ್ನು ಒಗ್ಗೂಡಿಸಿ ಹಾಲು ಉತ್ಪಾದಕರ ಸಹಕಾರಿ ಸಂಘಗಳನ್ನು ಸ್ಥಾಪಿಸುವುದು, ಹಳೆಯ ಸಂಘಗಳಿದ್ದರೆ ಉತ್ಪಾದನೆಗೆ ಆದ್ಯತೆ ಕೊಡುವುದು, ಪಶುವೈದ್ಯಕೀಯ ಸೇವೆ ಒದಗಿಸುವುದು, ಪಶು ಆಹಾರ ಪೂರೈಕೆ, ಹಸಿ ಹುಲ್ಲು ಉತ್ಪಾದನೆ ಇತ್ಯಾದಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಕೇಂದ್ರ ಸರಕಾರದಲ್ಲಿ ಏಕಕಾಲದಲ್ಲಿ ಐದು ಇಲಾಖೆಗಳನ್ನು ಯಶಸ್ವಿಯಾಗಿ ನಿರ್ವ ಹಿಸಿದ್ದ ಸಚಿವರೊಬ್ಬರಿಂದ ಇಂತಹ ಕೆಲಸ ವನ್ನು ಈಗಿನ ಕಾಲದಲ್ಲಿ ನಿರೀಕ್ಷಿಸುವುದು ಸಾಧ್ಯವೆ? ಹೀಗಾಗಿಯೇ ಅವರು ರಾಜಕಾರಣಿಯಲ್ಲ, ಮುತ್ಸದ್ದಿ. ಜನರ ಕೈಯಲ್ಲಿ ಹಣ ಓಡಾಡಿದರೆ ಆ ಮನೆಯ, ಆ ಮೂಲಕ ಊರಿನ ಅಂದರೆ ವಿಶಾಲ ಸಮಾಜ, ದೇಶ ಅಭಿವೃದ್ಧಿ ಯಾಗುತ್ತದೆ ಎನ್ನುವ ಸಹಕಾರಿ ತತ್ತÌದ ಆಶಯ ಅವರ ಚಿಂತನೆಯಾಗಿತ್ತು. 1983ರಲ್ಲಿ ಮಂಗಳೂರಿನಲ್ಲಿ ಸರಕಾರಿ ಡೇರಿ ಆರಂಭ ಗೊಂಡು 1987ರಲ್ಲಿ ದ.ಕ. ಹಾಲು ಒಕ್ಕೂಟದೊಂದಿಗೆ ಮಣಿ ಪಾಲದ ಒಕ್ಕೂಟ ವಿಲೀನಗೊಂಡಿತು.
ದನ ಕಟ್ಟಿ ಹಾಲು ಮಾರಿದ್ದರು: ಯೂನಿಯನ್ ಅಧ್ಯಕ್ಷರಾಗಬೇಕಾದರೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗ ಬೇಕಿತ್ತು. ಪೈಯವರು ಅಂಬಾಗಿಲು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದರು. ಅವರು ಕೇವಲ ನಾಮ್ ಕಾ ವಾಸ್ತೆ ಅಧ್ಯಕ್ಷರಾಗಬಯಸಲಿಲ್ಲ. ದನವನ್ನು ತರಲು ನಿರ್ಧರಿಸಿದರು.
ಹಟ್ಟಿಯನ್ನೂ ಕಟ್ಟಿದರು. ಸಂಘಕ್ಕೆ ಹಾಲು ಪೂರೈಕೆಯಾಗುತ್ತಿತ್ತು. ಒಂದು ವಾರ ಗುಣಮಟ್ಟವಿಲ್ಲದ ಹಾಲು ಪೂರೈಕೆಯಾಯಿತು. ತಾನು ಪೂರೈಸುವ ಹಾಲು ಕಳಪೆ ಗುಣಮಟ್ಟದ್ದೆ ಎಂಬ ಸಂಶಯ ಬಂದು ಹಾಲು ಪೂರೈಸುವ ಹುಡುಗ ನೀರು ಬೆರೆಸುತ್ತಿದ್ದುದನ್ನೂ ಪತ್ತೆ ಹಚ್ಚಿದರು. ಇದಾವುದೂ ಅವರಿಗೆ ನೆಗೆಟಿವ್ ಅನುಭವವಲ್ಲ. ಪ್ರಯೋಗಕ್ಕೆ ಒಡ್ಡುವಾಗ ಯಾವ ಯಾವ ಹಂತದಲ್ಲಿ ಲೋಪ ಆಗುತ್ತದೆ ಎನ್ನುವ ಅನುಭವವೂ ಆಡಳಿತಗಾರನಿಗೆ ಇರಬೇಕು. ಪ್ರಾಕ್ಟಿಕಲ್ ಜ್ಞಾನ ಇಲ್ಲದಿದ್ದರೆ ಯಾಮಾರಿಸುವವರ ಸಂಖ್ಯೆಗೆ ಕೊರತೆ ಇಲ್ಲವಲ್ಲ? ಮನೆಯಲ್ಲಿ ಪತ್ನಿಯಿಂದಲೇ ದನ ಸಾಕಣೆ ನಷ್ಟ ಎಂದು ಟೀಕೆ ಬಂದಾಗ, ನಷ್ಟವಲ್ಲ, ಏನೇನು ಲಾಭವಿದೆ ಎಂಬು ದನ್ನು ಮನ ಗಾಣಿಸಿದರು ಎನ್ನುವುದನ್ನು ಇವರ ಬಳಿ ಕೆಲಸ ಮಾಡಿದ್ದ ಡಾ| ಎಲ್.ಎಚ್.ಮಂಜುನಾಥ್ ಬೆಟ್ಟು ಮಾಡು ತ್ತಾರೆ. ಅಂತಹ ಅನುಭವ ಬಲ ದಿಂದಲೇ ಡಾ| ಮಂಜುನಾಥ್ ಈಗ ಧರ್ಮ ಸ್ಥಳ ಗ್ರಾಮಾ ಭಿವೃದ್ಧಿ ಯೋಜ ನೆಯ ಕಾರ್ಯ ನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿ ಸುತ್ತಿದ್ದಾರೆಂದರೆ ಅತಿಶಯ ವಲ್ಲ.
ಅವಲಕ್ಕಿ ಸೊಸೈಟಿ…: ಪರ್ಕಳದ ರೈತರು ಭತ್ತ ಖರೀದಿ ಸಮಸ್ಯೆಯನ್ನು ಹೇಳಿ ಕೊಂಡಾಗ ಅವಲಕ್ಕಿ ಸೊಸೈಟಿ ತೆರೆದರು. ಎರಡು ವರ್ಷಗಳ ಬಳಿಕ ಇದನ್ನು ಮುಚ್ಚಬೇಕಾಯಿತು. ಯಾವುದೇ ಸೊಸೈಟಿಯನ್ನು ಆರಂಭಿಸುವುದು ಎಷ್ಟು ಕಷ್ಟವೋ ಮುಚ್ಚು ವುದೂ ಅಷ್ಟೇ ಕಷ್ಟ. ಕೊನೆಗೆ ಪೈ ಯವರೇ ಮುಂದು ನಿಂತು ಸೊಸೈಟಿ ಯನ್ನು ಮುಚ್ಚಬೇಕಾಯಿತು. ಹೀಗೆ ಪೈಯವರ ಕಥಾನಕ ಹೇಳಿ ಮುಗಿಯುವುದಿಲ್ಲ ಎನ್ನುತ್ತಾರೆ ಡಾ| ಮಂಜುನಾಥ್.
ಪೈ ಅವರ ಜತೆ ಕೆಲಸ ಮಾಡುತ್ತಿದ್ದಾಗ ಅವರ ದಾರ್ಶನಿಕತೆ, ಕ್ರತುಶಕ್ತಿ, ಸಹೃದ ಯತೆ, ಯೋಜನಾಬದ್ಧ ನಿರ್ವಹಣ ಕಾರ್ಯ ಶೈಲಿ ನನಗೆ ಮಾದರಿ ಆಗಿದ್ದವು. ಆಧುನಿಕ ಭಾರತದ ನಿರ್ಮಾತೃ ಗಳಲ್ಲಿ ಒಬ್ಬರಾದ ಅವರ ಸ್ಮರಣೆಯನ್ನು ಸಹಕಾರಿ ರಂಗದ ನಾವು ಮಾಡಬೇಕಾ ಗಿದೆ ಎಂದು 2009ರಲ್ಲಿ ಮಂಗಳೂರಿನಲ್ಲಿ ಹಿರಿಯ ಸಹ ಕಾರಿ ಪೆರಾಜೆ ಶ್ರೀನಿವಾಸ ರಾವ್ ಅಭಿಪ್ರಾಯಪಟ್ಟಿದ್ದರು.
ಮಟಪಾಡಿ ಕುಮಾರಸ್ವಾಮಿ