Advertisement

ನಾಲಗೆ ಕತ್ತರಿಸಿದ್ರೂ ರಕ್ತ ಚಿಮ್ಮಿಲ್ಲ; ಹಸುಗಳ ನಿಗೂಢ ಸಾವು

12:54 AM Apr 25, 2023 | Team Udayavani |

ಟೆಕ್ಸಾಸ್‌: ಅಮೆರಿಕದ ಟೆಕ್ಸಾಸ್‌ನ ಗ್ರಾಮೀಣ ಭಾಗದಲ್ಲಿ ನಾಲಗೆಗಳು ಕತ್ತರಿಸಲ್ಪಟ್ಟ ಸ್ಥಿತಿಯಲ್ಲಿ 6 ಹಸುಗಳ ಮೃತದೇಹಗಳು ಪತ್ತೆಯಾಗಿವೆ. ಅಚ್ಚರಿಯೆಂದರೆ, ಈ ಎಲ್ಲ ಹಸುಗಳ ನಾಲಗೆ ಗಳೂ ಕತ್ತರಿಸಲ್ಪಟ್ಟಿದ್ದು, ಒಂದೇ ಒಂದು ಹನಿ ರಕ್ತವೂ ಚೆಲ್ಲಿರುವ ಕುರುಹುಗಳಿಲ್ಲ.

Advertisement

ಹೀಗಾಗಿ, ಈ ಪ್ರಕರಣವು ಪೊಲೀಸರನ್ನು ಚಿಂತೆಗೀಡು ಮಾಡಿದೆ. ಮೊದಲಿಗೆ ವ್ಯಕ್ತಿಯೊಬ್ಬರು ತಮ್ಮ ಹೊಲದಲ್ಲಿ 6 ವರ್ಷ ವಯಸ್ಸಿನ ಹಸುವೊಂದು ಸತ್ತುಬಿದ್ದಿರುವ ಬಗ್ಗೆ ಮಾಹಿತಿ ನೀಡಿದರು. ಅದಾದ ಬಳಿಕ ಟೆಕ್ಸಾಸ್‌ನ ವಿವಿಧ ಸ್ಥಳಗಳಿಂದ ಇಂಥದ್ದೇ ದೂರುಗಳು ಬಂದಿದ್ದು, ಒಟ್ಟು 6 ಹಸುಗಳ ಮೃತದೇಹ ಪತ್ತೆಯಾಗಿದೆ.

ಎಲ್ಲ ಹಸುಗಳ ನಾಲಗೆಗಳನ್ನೂ ಸಂಪೂರ್ಣ ವಾಗಿ ಕತ್ತರಿಸಿ ತೆಗೆಯಲಾಗಿದೆ. ಆದರೆ ಎಲ್ಲೂ ರಕ್ತ ಸುರಿದಿಲ್ಲ, ಹುಲ್ಲು ಹಾಸಿನಲ್ಲಿನ ಹುಲ್ಲುಗಳೂ ಅಲುಗಾಡಿಲ್ಲ, ಆ ಪ್ರದೇಶ ದಲ್ಲಿ ಮನುಷ್ಯರ ಹೆಜ್ಜೆ ಗುರುತಾಗಲೀ, ವಾಹನದ ಟೈರ್‌ನ ಅಚ್ಚಾಗಲೀ ಮೂಡಿಲ್ಲ ಎಂದೂ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next