Advertisement

ಬಿ.ಸಿ.ಪಾಟೀಲ್‌ಗೆ ಟಾಂಗ್‌ ಕೊಟ್ಟ ಎಚ್ಡಿಕೆ

11:32 AM Jan 21, 2021 | Team Udayavani |

ಚನ್ನಪಟ್ಟಣ: ಗಂಭೀರ ಹುದ್ದೆಯಲ್ಲಿರುವ ಕೃಷಿ ಸಚಿವರು ರೈತರ ಬಗ್ಗೆ ಲಘು ವಾಗಿ ಮಾತನಾಡುವುದನ್ನು ಬಿಡಬೇಕು. ಆತ್ಮಹತ್ಯೆ ಮಾಡಿಕೊಳ್ಳದ ವಾತಾವರಣ ನಿರ್ಮಿಸುವ ಕಾರ್ಯಕ್ರಮವನ್ನು ಸರ್ಕಾರದಿಂದ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರ ಸ್ವಾಮಿ ಹೇಳಿದರು.

Advertisement

ದುರ್ಬಲ ಮನಸ್ಸಿನಿಂದ ರೈತರು ಆತ್ಮಹತ್ಯೆ ಮಾಡಿ ಕೊಳ್ಳುತ್ತಿದ್ದಾರೆ ಎಂಬ ಸಚಿವ ಬಿ.ಸಿ.ಪಾಟೀಲ್‌ ಹೇಳಿಕೆಗೆ ಪ್ರತಿಕ್ರಿಯಿಸಿ, ರೈತರ ಭೂಮಿಯಲ್ಲಿ ಬಂದು ಕಾಲ ಕಳೆಯುತ್ತೇನೆ ಎಂದು ಹೇಳಿ, ಇದನ್ನೇ ರಿಸರ್ಚ್‌ ಮಾಡಲು ಹೋಗಿದ್ದಾರಾ? ಎಂದು ಪ್ರಶ್ನಿಸಿದರು. ಕೃಷಿ ಸಚಿವರು ತಮ್ಮ ಇಲಾಖೆಯಲ್ಲಿ ನಡೆಯುತ್ತಿರುವ ವರ್ಗಾವಣೆ ದಂಧೆ ಯನ್ನು ಮೊದಲು ನಿಲ್ಲಿಸಲಿ, ಸಹಾಯಕ ಕೃಷಿ ನಿರ್ದೇಶಕರ ವರ್ಗಾವಣೆಗೆ ಹಣ ಕೇಳಿದರೆ ಅವರು ಎಲ್ಲರಿಂದ ಹಣ ತರುತ್ತಾರೆಂದರು.

ಇದನ್ನೂ ಓದಿ:ಕಾಲೇಜು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ರೈಲ್ವೆ ಹಳಿಮೇಲೆ ಎಸೆದು ಹೋದ ಆರೋಪಿಗಳು!

ಇಲ್ಲಿಂದಲೇ ಸ್ಪರ್ಧೆ:ಮುಂದಿನ ಚುನಾವಣೆಯಲ್ಲಿ ಬೇರೆ ಕ್ಷೇತ್ರದಿಂದ ಸ್ಪರ್ಧಿಸುವುದಿದ್ದರೆ, ಈ ಕ್ಷೇತ್ರದಲ್ಲಿ ಯಾಕೆ ಇಷ್ಟೊಂದು ಓಡಾಡಬೇಕಿತ್ತು, ಅನಿವಾರ್ಯ ಕಾರಣದಿಂದ ಚನ್ನಪಟ್ಟಣದಿಂದ ಸ್ಪರ್ಧಿಸಬೇಕಾಯಿತು. ಈಗಲೇ ಮುಂದುವರೆಯುವ ಅನಿವಾರ್ಯತೆ ನಿರ್ಮಾಣಗೊಂಡಿದೆ ಎಂದರು.

ಡಿಕೆಶಿ ಸ್ಪರ್ಧಿಸಿದರೆ ಸ್ವಾಗತ

Advertisement

ಮುಂದಿನ ವಿಧಾನಸಭಾ ಚುನಾವಣೆಗೆ ರಾಮ ನಗರದಿಂದ ಡಿ.ಕೆ.ಶಿವಕುಮಾರ್‌ ಸ್ಪರ್ಧಿ ಸುತ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಎಚ್ಡಿಕೆ, ವಿಶ್ವಾಸವೇ ಬೇರೆ ರಾಜ ಕಾರಣವೇ ಬೇರೆ, ರಾಮನಗರಕ್ಕೆ ಯಾರು ಬಂದು ಸ್ಪರ್ಧಿಸಿದರೂ ಸ್ವಾಗತ, ರಾಮನಗರ-ಚನ್ನಪಟ್ಟಣ ಎರಡೂ ಕ್ಷೇತ್ರಗಳು ನನ್ನ ಕಣ್ಣುಗಳಿದ್ದಂತೆ ನಾನು ಈ ಕಣ್ಣನ್ನು ಕಳೆದುಕೊಂಡು ಕುರುಡನಾಗುವುದಿಲ್ಲ ಎಂದರು. ಈ ಎರಡೂ ಕ್ಷೇತ್ರದ ಜನತೆ, ನನ್ನನ್ನು ಬೆಳೆಸಿದ್ದಾರೆ, ಯಾರನ್ನೋ ನಂಬಿ ಇವರು ಮನೆ ಮಗನಿಗೆ ಯಾವ ಕಾರಣಕ್ಕೂ ವಿಷ ಕೊಡುವುದಿಲ್ಲ. ರಾಮನಗರ- ಚನ್ನಪಟ್ಟಣವನ್ನು ಅವಳಿ ನಗರವಾಗಿ ಅಭಿವೃದ್ಧಿ ಪಡಿಸಿ, ಹುಬ್ಬಳ್ಳಿ ಧಾರವಾಡ ಮಾದರಿಯಲ್ಲಿ ನಗರಪಾಲಿಕೆ ಸ್ಥಾಪಿಸಿ ಸಮಗ್ರ ಅಭಿವೃದ್ಧಿ ಮಾಡಿಸುವುದೇ ನನ್ನ ಗುರಿ ಅಲ್ಲಿಯವರೆಗೆ ನಾನು ವಿರಮಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.‌

Advertisement

Udayavani is now on Telegram. Click here to join our channel and stay updated with the latest news.

Next