Advertisement

ತೊನಸಿಹಾಳ-ಮೆಣಸಗೇರಿ ಆದರ್ಶ ಗ್ರಾಮಕ್ಕೆ ಆಯ್ಕೆ

01:37 PM Oct 31, 2020 | Suhan S |

ದೋಟಿಹಾಳ: ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ 2018-19ನೇ ಸಾಲಿನಲ್ಲಿ ಕುಷ್ಟಗಿ ತಾಲೂಕಿನ ಕೇಸೂರ ಗ್ರಾಪಂ ವ್ಯಾಪ್ತಿಯ ತೊನಸಿಹಾಳ ಮತ್ತು ಕ್ಯಾದಿಗುಪ್ಪ ಗ್ರಾಪಂ ವ್ಯಾಪ್ತಿಯ ಮೆಣಸಗೇರಿ ಗ್ರಾಮಗಳನ್ನು ಪಿಎಂ ಆದರ್ಶ ಗ್ರಾಮವನ್ನಾಗಿ ಆಯ್ಕೆ ಮಾಡಲಾಗಿದೆ.

Advertisement

ಈ ಗ್ರಾಮಗಳಲ್ಲಿ ತಲಾ 40 ಲಕ್ಷ ವೆಚ್ಚದಲ್ಲಿಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಹಾಗೂ  ಒಂದು ಲಕ್ಷ ಆಡಳಿತಾತ್ಮಕ ವೆಚ್ಚಕ್ಕೆ ಖರ್ಚು ಮಾಡಲು ಅವಕಾಶ ನೀಡಲಾಗಿದೆ. 2011ರ ಜನಗಣತಿ ಪ್ರಕಾರಪ್ರಧಾನಮಂತ್ರಿ ಆದರ್ಶ ಗ್ರಾ ಯೋಜನೆಗೆ ಒಳಪಡುವ ತೊಣಸಿಹಾಳದಲ್ಲಿ ಜನ ಸಂಖ್ಯೆ 1618 ಇದೆ. ಇದರಲ್ಲಿ ಪರಿಶಿಷ್ಟ ಜಾತಿ ಜನಸಂಖ್ಯೆ 1241 ಹಾಗೂ 251 ಕುಟುಂಬಗಳು ವಾಸವಾಗಿವೆ. ಮೆಣಸಗೇರಿ ಗ್ರಾಮದಲ್ಲಿ 1705 ಜನಸಂಖ್ಯೆ ಇದ್ದು, ಪರಿಶಿಷ್ಟ ಜಾತಿ ಜನಸಂಖ್ಯೆ 895 ಇದೆ. ಇಲ್ಲಿ ಒಟ್ಟು 320 ಕುಟುಂಬಗಳು ವಾಸವಾಗಿವೆ.ಎಲ್ಲ ಕುಟುಂಬಗಳು ಈ ಯೋಜನೆ ಲಾಭ ಪಡೆದುಕೊಳ್ಳುತ್ತವೆ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದೇವಲನಾಯಕ ಮಾಹಿತಿ ನೀಡಿದರು.

ಆದರ್ಶ ಗ್ರಾಮದ ಉದ್ದೇಶ: ಪರಿಶಿಷ್ಟ ಜಾತಿಯ ಜನರು ಹೆಚ್ಚು ಇರುವ ಗ್ರಾಮಗಳ ಅಭಿವೃದ್ಧಿಗೊಳಿಸುವುದು, ಆಯ್ಕೆಯಾಗಿರುವ ಗ್ರಾಮದಲ್ಲಿ ಈಗಾಗಲೆವಿವಿಧ ಯೋಜನೆಗಳಲ್ಲಿ ಬಾಕಿ ಉಳಿದಿರುವ ಅಗತ್ಯ ಕಾಮಗಾರಿ ಗುರುತಿಸುವುದು, ಗ್ರಾಮದ ಸರ್ವತೋಮುಖ ಅಭಿವೃದ್ಧಿಗೊಳಿಸುವುದು ಆದರ್ಶ ಗ್ರಾಮದ ಉದ್ದೇಶವಾಗಿದೆ.

ಪ್ರಮುಖ ಕಾಮಗಾರಿಗಳು: ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಗ್ರಾಮದಲ್ಲಿ ಸ್ವತ್ಛತೆ, ಕಾಪಾಡುವುದು, ಕಸ ವಿಲೇವಾರಿ, ಅಂಗನವಾಡಿ, ಶಾಲೆಗಳಲ್ಲಿ ಶೌಚಾಲಯ ದುರಸ್ತಿ, ಕಾಂಕ್ರೀಟ್‌ ರಸ್ತೆ ನಿರ್ಮಾಣ, ಸೌರ ವಿದ್ಯುತ್‌ ಮತ್ತು ಬೀದಿ ದೀಪಗಳನಿರ್ಮಾಣ, ಅಂಗನವಾಡಿ ಕಟ್ಟಡಗಳನಿರ್ಮಾಣ ಇನ್ನೂ ಮುಂತಾದ ಅಭಿವೃದ್ಧಿ ಕಾಮಗಾರಿಗಳು ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಲ್ಲಿ ನಿರ್ಮಾಣಕ್ಕೆ ಅವಕಾಶವಿರುತ್ತದೆ.

ಈ ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯ ಮೂಲಕ ಗ್ರಾಮಗಳನ್ನುಅಭಿವೃದ್ಧಿ ಪಡಿಸುವ ಹೊಣೆ ಸಮಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಮೇಲಿದೆ. ಯಾವ ರೀತಿಯಾಗಿ ಅಭಿವೃದ್ಧಿಪಡಿಸಿ ಆದರ್ಶ ಗ್ರಾಮವನ್ನಾಗಿ ಮಾಡುತ್ತಾರೋ ಎಂಬುದು ಕಾದು ನೋಡಬೇಕಾಗಿದೆ.

Advertisement

ತೊನಸಿಹಾಳ, ಮೆಣಸಗೇರಾ ಗ್ರಾಮಗಳು ಪಿಎಂ ಆದರ್ಶ ಗ್ರಾಮ ಯೋಜನೆಗೆ ಆಯ್ಕೆಯಾಗಿವೆ. ಈ ಗ್ರಾಮಗಳಲ್ಲಿ ಮೊದಲುಮೂಲಭೂತ ಸೌಕರ್ಯ ಕುರಿತು ಸರ್ವೇ ಮಾಡಲಾಗುವುದು. ಕಾಮಗಾರಿಗಳ ಪಟ್ಟಿ, ಅಂದಾಜು ಮೊತ್ತ ಮತ್ತು ಮಧ್ಯಂತರ ಅಭಿವೃದ್ಧಿ ಕ್ರಿಯಾ ಯೋಜನೆ ಸಿದ್ಧ ಪಡಿಸಲಾಗುವುದು. ಆ ನಂತರ ಪಿಡಿಒ ಮೂಲಕ ಮಾಹಿತಿ ಪಡೆದುಕೊಂಡು. ಅಭಿವೃದ್ಧಿಗೆ ಚಾಲನೆ ನೀಡಲಾಗುವುದು. ಪ್ರಧಾನಮಂತ್ರಿ ಆದರ್ಶ ಗ್ರಾಮದ ಉದ್ದೇಶ ಹಳ್ಳಿಗಳ ಸರ್ವತೋಮುಖ ಅಭಿವೃದ್ಧಿಯಾಗಿದೆ. -ದೇವಲನಾಯಕ, ಗ್ರಾಪಂ ಆಡಳಿತ ಅಧಿಕಾರಿ

 

-ಮಲ್ಲಿಕಾರ್ಜುನ ಮೆದಿಕೇರಿ

Advertisement

Udayavani is now on Telegram. Click here to join our channel and stay updated with the latest news.

Next