ಬೀದರ: ಗಾನಯೋಗಿ ಪಂಚಾಕ್ಷರ ಗವಾಯಿ ಸೇವಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಾ.30ರಂದು ನಗರದ ಡಾ| ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಪಂ| ಪಂಚಾಕ್ಷರ ಗವಾಯಿ ಅವರ 77ನೇ ಪುಣ್ಯತಿಥಿ, ಡಾ| ಪಂ| ಪುಟ್ಟರಾಜ ಕವಿಗವಾಯಿ ಅವರ 11ನೇ ಪುಣ್ಯತಿಥಿ ಹಾಗೂ ಸಂಘದ 19ನೇ ವಾರ್ಷಿಕೋತ್ಸವ ನಿಮಿತ್ತ ರಾಜ್ಯಮಟ್ಟದ ಸಾಹಿತ್ಯ, ಸಂಗೀತ ಮತ್ತು ನೃತ್ಯೋತ್ಸವ ಆಯೋಜಿಸಲಾಗಿದೆ.
ಈ ಕುರಿತು ಸೇವಾ ಸಂಘದ ಅಧ್ಯಕ್ಷ ಪ್ರೊ| ಎಸ್.ವಿ.ಕಲ್ಮಠ ಹಾಗೂ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ರವಿ ಸ್ವಾಮಿ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಮೈಸೂರಿನ ಡಾ| ಗಂಗೂಬಾಯಿ ಹಾನಗಲ್ ಸಂಗೀತ ವಿವಿ ವಿಶ್ರಾಂತ ಕುಲಪತಿ ಡಾ| ಪಂ.ಹನುಮಣ್ಣ ನಾಯಕ್ ದೊರೆ ಅವರ ಸರ್ವಾಧ್ಯಕ್ಷೆಯಲ್ಲಿ ಸಮ್ಮೇಳನ ನಡೆಯಲಿದ್ದು, ಬೆಳಗ್ಗೆಯಿಂದ ರಾತ್ರಿ ವರೆಗೆ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಬುಧವಾರ ಬೆಳಗ್ಗೆ 9ಕ್ಕೆ ರಂಗಮಂದಿರ ಆವರಣದಲ್ಲಿ ಸಮ್ಮೇಳನ ಸರ್ವಾಧ್ಯಕ್ಷರ ನೇತೃತ್ವದಲ್ಲಿ ಮೆರವಣಿಗೆ ನಡೆಯಲಿದ್ದು, ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಸೊನಾರೆ ಚಾಲನೆ ನೀಡುವರು. ಉದ್ಯಮಿ ಗುರುನಾಥ ಕೊಳ್ಳೂರ್, ರೇವಣಸಿದ್ದಪ್ಪ ಜಲಾದೆ ಇತರರು ಪಾಲ್ಗೊಳ್ಳುವರು. 11ಕ್ಕೆ ಜರುಗುವ ಸಮ್ಮೇಳನಕ್ಕೆ ಪಶು ವಿವಿ ಕುಲಪತಿ ಡಾ| ಕೆ.ಸಿ. ವೀರಣ್ಣ ಚಾಲನೆ ನೀಡುವರು. ಡಾ| ಶಿವಕುಮಾರ ಸ್ವಾಮೀಜಿ ಸಾನ್ನಿಧ್ಯ, ಪ್ರೊ|ದೇವೇಂದ್ರ ಕಮಲ ಅಧ್ಯಕ್ಷತೆ ವಹಿಸುವರು. ಡಾ| ರಜನೀಶ ವಾಲಿ, ಡಾ| ಜಗನ್ನಾಥ ಹೆಬ್ಟಾಳೆ, ಡಾ| ವೀರಭದ್ರಪ್ಪ ಗಾದಗಿ ಇತರರು ಪಾಲ್ಗೊಳ್ಳುವರು ಎಂದು ಹೇಳಿದರು.
ಮಧ್ಯಾಹ್ನ 2ಕ್ಕೆ ಮೂರು ಸಂಗೀತ ಸಮಾವೇಶಗಳು ಜರುಗಲಿವೆ. ಸಾಯಂಕಾಲ 5ಕ್ಕೆ ಸಮಾರೋಪ, ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ ಕಾರ್ಯಕ್ರಮ ಜರುಗಲಿವೆ. ಡಾ| ಚನ್ನವೀರ ಶಿವಾಚಾರ್ಯ ಸಾನ್ನಿಧ್ಯ ವಹಿಸುವರು. ಸರ್ವಾಧ್ಯಕ್ಷ ಡಾ| ಹನುಮಣ್ಣ ನಾಯಕ್ ದೊರೆ ಸಮಾರೋಪ ಭಾಷಣ ಮಾಡುವರು. ಬಾಬು ವಾಲಿ, ಸುರೇಶ ಚನ್ನಶೆಟ್ಟಿ, ದ್ರಾಮ ಸಿಂಧೆ, ಡಾ| ಅಮರ ಏರೋಳಕರ್ ಪಾಲ್ಗೊಳ್ಳುವರು. ಸಂಜೆ 6.30 ಹಾಗೂ 7.30ಕ್ಕೆ ಸಂಗೀತ ಮತ್ತು ನೃತ್ಯ ಕಾರ್ಯಕ್ರಮ ನಡೆಯಲಿದೆ ಎಂದರು.
ಪ್ರೊ| ದೇವೇಂದ್ರ ಕಮಲ, ದಾನಿ ಬಾಬುರಾವ, ಸಹಜಾನಂದ ಕಂದಗೂಳ, ಪ್ರೊ| ಬಿ.ಎಸ್. ಬಿರಾದಾರ ಇದ್ದರು.