Advertisement
ನಾಳೆ ಮತದಾನ ಮಾಡುತ್ತೇನೆ ಎಂಬುದು ನನಗೆ ಒಂದು ರೀತಿಯ ರೋಮಾಂಚನ ಉಂಟುಮಾಡು ತ್ತಿದೆ. ಮತದಾನ ನಮ್ಮ ಆದ್ಯತೆಯಾ ಗಬೇಕು. ಹಾಗಾದಾಗ ಯೋಗ್ಯ ಸರ್ಕಾರ ಚುನಾಯಿಸಲು ಸಾಧ್ಯವಾಗುತ್ತದೆ.– ಸಾದಿಕ್, ಬೇಗೂರು, ಗುಂಡ್ಲುಪೇಟೆ.
– ಸಯೀದಾ ಸ್ವಅಜೀಂ, ವಿದ್ಯಾರ್ಥಿನಿ, ಚಿತ್ರದುರ್ಗ ನನ್ನ ಬೌದ್ಧಿಕ ವಿಕಾಸವಾದಾಗಿನಿಂದ ವ್ಯವಸ್ಥೆಯನ್ನು ದೂಷಿಸುತ್ತಾ, ನಕಾರಾತ್ಮಕವಾಗಿ ವಿಶ್ಲೇಷಿಸುತ್ತಾ ಬೆಳೆದು, ಈಗ ಅದೇ ವ್ಯವಸ್ಥೆಯನ್ನು ಆಯ್ಕೆ ಮಾಡುವ ಪರಿಸ್ಥಿತಿ ಎದುರಾದಾಗ ನನ್ನ ಮತದಿಂದ ವ್ಯವಸ್ಥೆ ರಚಿತವಾಗುತ್ತದೆ.
– ಅಮರ್ತ್ಯ ಸಿದ್ಧಾರ್ಥ, ಮಂಡ್ಯ
Related Articles
– ಜಾವೀದ್, ಕೊಪ್ಪಳ
Advertisement
ಪ್ರಜಾಪ್ರಭುತ್ವದ ಸೊಗಸು ಇರು ವುದೇ ಮತದಾನ ಮಾಡುವು ದರಲ್ಲಿ. ನಮಗೆ ಸ್ಪಂದಿಸುವ ಜನಪ್ರತಿನಿಧಿಯನ್ನು ಆಯ್ಕೆ ಮಾಡಲು ಮತದಾನ ಅವಶ್ಯಕ. ನಾನು ಮೊದಲ ಬಾರಿ ಮತದಾನ ಮಾಡುತ್ತಿದ್ದೇನೆ. – ಸಂಜನಾ, ಚಾಮರಾಜನಗರ ನಮ್ಮ ಒಂದು ಮತ ದೇಶ, ರಾಜ್ಯದ ಅಭಿವೃದ್ಧಿ ಮತ್ತು ನಮ್ಮ ಆಳ್ವಿಕೆಗೆ ಬೇಕಾಗುವ ನೀತಿ, ನಿರೂಪಣೆ ನಿರ್ಧರಿಸುತ್ತದೆ. ಮತದಾನದಿಂದ ಉತ್ತಮರನ್ನು ಆಯ್ಕೆ ಮಾಡಿದರೆ ರಾಜ್ಯದ ಅಭಿವೃದ್ಧಿ ನಿರೀಕ್ಷಿಸಬಹುದು.
– ಮಹೇಶ್ ವಿ., ಬಳ್ಳಾರಿ ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ಒಳ್ಳೆಯ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತೇನೆ. ನಾನು ಹಾಕುವ ಒಂದು ಮತ ರಾಜ್ಯದ, ದೇಶದ ಅಭಿವೃದ್ಧಿಗೆ ಪೂರವಾಗುತ್ತದೆ.
– ಜಿ. ಸಿದ್ದರಾಮಣ್ಣ ಹೆಬ್ಟಾಕ, ತುಮಕೂರು ಮೊದಲ ಬಾರಿಗೆ ಮತದಾನ ಮಾಡುವುದನ್ನು ಎಂದೂ ಮರೆ ಯಲಾರೆ. ಮತ ಚಲಾಯಿಸುವ ಹಕ್ಕು ಸಿಕ್ಕಿರುವುದು ನಾನು ಈ ದೇಶದ ಪ್ರಜೆ ಎಂದು ಹೇಳಿಕೊ ಳ್ಳುವ ಅವಕಾಶ. ಉತ್ತಮ ಅಭ್ಯರ್ಥಿ ಆಯ್ಕೆ ಮಾಡುವೆ.
– ತನುಶ್ರೀ, ಹಾಸನ ದೇಶದ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ವ್ಯವಸ್ಥೆಯನ್ನು ಬಲಪಡಿಸಲು ದಕ್ಷ, ನಿಷ್ಠಾವಂತ ನಾಯಕ ಬೇಕು. ಮತದಾನ ಹಕ್ಕಿನ ಮೂಲಕ ನಾನು ಅಂತಹ ನಾಯಕನನ್ನು ಆಯ್ಕೆ ಮಾಡಲಿದ್ದೇನೆ.
– ಅಶ್ವಿನಿ ಎಚ್.ವಿ., ಶಿವಮೊಗ್ಗ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಉತ್ತಮ ಅಭ್ಯರ್ಥಿಗಳು ಚುನಾಯಿಸಿ ಬರುವುದು ಅತಿ ಮುಖ್ಯವಾಗಿದೆ. ಹಾಗಾಗಿ ನಾನು ಅರ್ಹ ವ್ಯಕ್ತಿಗಳಿಗೆ ನಾಳೆ ಮತ ಚಲಾಯಿಸಲಿದ್ದೇನೆ.
– ಗುರುಗೌತಮ್, ಮೈಸೂರು ಶಿಕ್ಷಣ ವ್ಯವಸ್ಥೆಯಲ್ಲಿಂದು ಡೊನೇ ಷನ್ ಹಾವಳಿ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕುವ ರಾಜಕೀಯ ನಾಯಕರು ಬೇಕು. ಶಿಕ್ಷಣ ಕ್ಷೇತ್ರದ ಸುಧಾರಣೆಗಾಗಿ ಕ್ರಾಂತಿಕಾರಕ ನಿರ್ಣಯಗಳನ್ನು ತೆಗೆದುಕೊಳ್ಳುವವರು ಬೇಕು.
– ಅರವಿಂದ್, ಬೆಂಗಳೂರು ನನ್ನ ಕ್ಷೇತ್ರದ ಅಭಿವೃದ್ಧಿಯ ಕನಸುಗಳನ್ನು ನನಸಾಗಿಸುವ, ಜತೆಗೆ ರಾಜ್ಯ ಮತ್ತು ರಾಷ್ಟ್ರದ ಏಳಿಗೆಗೆ ಕ್ಷೇತ್ರದಿಂದಾಗುವ ಪ್ರಯತ್ನವೇನು ಎಂಬ ದೃಷ್ಟಿಕೋನದಿಂದ ಯೋಚಿ ಸುವ ವ್ಯಕ್ತಿಯನ್ನು ನಾನು ನಾಳೆ ಚುನಾಯಿಸಲಿದ್ದೇನೆ.
– ಅಕ್ಷಯ ನಾಯ್ಕರ, ಬೀಳಗಿ ನನ್ನ ಮತ ಮಾರಾಟಕ್ಕಿಲ್ಲ. ಮಾರಾಟ ಮಾಡುವವನೂ ನಾನಲ್ಲ. ನಾನು ನಾಳೆ ಚಲಾಯಿಸಲಿರುವ ಮತ ನಮ್ಮ ದೇಶವನ್ನು ರಕ್ಷಿಸುವವನಿಗೆ ಹೋಗಲಿದೆ ಎಂಬ ನಂಬಿಕೆ ನನಗಿದೆ.
– ಶರಣಬಸವ ಪಾಟೀಲ್, ಲಿಂಗಸಗೂರು ಇದೇ ಮೊದಲ ಬಾರಿಗೆ ಮತದಾನ ಮಾಡುವ ಕ್ಷಣಕ್ಕಾಗಿ ಕಾತುರದಿಂದ ಕಾದಿದ್ದೇನೆ. ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ ಉತ್ತಮರನ್ನು ಆಯ್ಕೆ ಮಾಡಿಕೊಂಡು ಮತ ಚಲಾವಣೆ ಮಾಡಲು ನಿರ್ಧರಿಸಿದ್ದೇನೆ.
– ಜಿ.ಎಂ.ತೇಜಸ್, ಕೋಲಾರ. ಅಭಿವೃದ್ಧಿ ಕೆಲಸ ಮಾಡುವಂತಹ ಒಳ್ಳೆಯವರಿಗೆ ಮತದಾನ ಮಾಡಬೇಕು ಎಂಬುದು ನನ್ನ ಇಚ್ಛೆ. ಯಾವ ಪಕ್ಷದವರು ಎಂಬುದು ಮುಖ್ಯ ಅಲ್ಲ. ಡೆವಲಪ್‌ಮೆಂಟ್ ವರ್ಕ್ಸ್ ಮಾಡ್ತಾರಾ ಅನ್ನೋದು ನೋಡಬೇಕು.
– ಎಸ್.ಎಂ. ಮನುಶ್ರೀ, ಎವಿಕೆ ಕಾಲೇಜು, ದಾವಣಗೆರೆ. ರೈತರೇ ದೇಶದ ಬೆನ್ನುಲುಬಾಗಿ ರುವಾಗ ಅವರ ಕಷ್ಟಗಳಿಗೆ ಸ್ಪಂದಿಸುವ ಹಾಗೂ ಉತ್ತಮ ಸಮಾಜಕ್ಕೆ ಶ್ರಮಿಸುವ ಸಮರ್ಥ ನಾಯಕನನ್ನು ಜಾತಿ ಧರ್ಮದಡಿ ನೋಡದೆ ನನ್ನ ಅಮೂಲ್ಯ ಮತ ನೀಡಿ ಗೆಲ್ಲಿಸುತ್ತೇನೆ.
– ಚೇತನ್, ಹನೂರು ರೈತರ ಸಮಸ್ಯೆಗಳಿಗೆ ಸ್ಪಂದಿಸುವ, ಪಾರದರ್ಶಕ ಆಡಳಿತ ನೀಡುವ ನಾಯಕ ನನಗೆ ಬೇಕು. ಅಂತಹ ಸರಳ ವ್ಯಕ್ತಿತ್ವ ಹೊಂದಿರುವ ನಾಯಕನಿಗೆ ನನ್ನ ಮತ ಮೀಸಲಾಗಿರಲಿದೆ.
– ಆರೀಫ್ ವಾಲೀಕಾರ, ಬೆಳಗಾವಿ ನಾನು ಪಕ್ಷಕ್ಕಿಂತ ಅಭ್ಯರ್ಥಿಯ ವ್ಯಕ್ತಿತ್ವ ನೋಡಿ ಮತ ಚಲಾಯಿಸುತ್ತೇನೆ. ಅಭ್ಯರ್ಥಿ ಹೇಗೆ ಆಡಳಿತ ನಡೆಸುತ್ತಾನೆ, ಜನರ ಕಷ್ಟ ಸುಖಗಳಿಗೆ ಹೇಗೆ ಸ್ಪಂದಿಸುತ್ತಾನೆ ಎಂಬುದನ್ನು ಅಳೆದು ಹಕ್ಕು ಚಲಾಯಿಸುತ್ತೇನೆ.
– ಗೀತಾ ಎಂ ನೀಲಗಾರ, ಬಾಗಲಕೋಟೆ ಎಲೆಕ್ಷನ್‌ಗೂ ಮುನ್ನ ಸ್ಥಳೀಯ ಸಮಸ್ಯೆಗಳ ಬಗ್ಗೆ ಕ್ಯಾರೆ ಅನ್ನದ ವ್ಯಕ್ತಿ, ಚುನಾವಣೆ ಬಂತೆಂದರೆ ಜನರ ಮುಂದೆ ಪ್ರತ್ಯಕ್ಷರಾಗುತ್ತಾರೆ. ಚುನಾವಣೆಯ ಉದ್ದೇಶವನ್ನು ಇಟ್ಟುಕೊಂಡು ಕಣಕ್ಕಿಳಿಯುವ ಅಭ್ಯರ್ಥಿ ಬೇಕಾಗಿಲ್ಲ.
– ಪ್ರಿಯಾಂಕ, ಬೆಂಗಳೂರು ಪ್ರತಿಯೊಂದು ಮತವೂ ಅಮೂಲ್ಯವಾಗಿದ್ದು, ಜಾತಿ, ಧರ್ಮದ ಹೆಸರಲ್ಲಿ ರಾಜಕೀಯ ಮಾಡದೆ, ಜನರ ಏಳಿಗೆಗಾಗಿ ಕೆಲಸ ಮಾಡುವ ಪಕ್ಷ ಹಾಗೂ ಅಭ್ಯರ್ಥಿಯನ್ನು ಗುರುತಿಸಿ ಓಟು ಹಾಕುತ್ತೇನೆ.
– ನರೇಶ್ ಶೆಟ್ಟಿ, ದಕ್ಷಿಣ ಕನ್ನಡ ಕೃಷಿ, ಶಿಕ್ಷಣ,ಆರೋಗ್ಯ ಸೇರಿ ಎಲ್ಲ ಕ್ಷೇತ್ರಗಳ ಬಗ್ಗೆ ತಿಳಿವಳಿಕೆ ಹೊಂದಿರುವ ವ್ಯಕ್ತಿಯಾಗಿರಬೇಕು. ಚುನಾವಣೆಗೂ ಮೊದಲು ಭರವಸೆ ನೀಡಿ, ಆ ನಂತರ ತನ್ನ ಕ್ಷೇತ್ರನ್ನು ಮರೆಯುವ ಅಭ್ಯರ್ಥಿ ನನಗೆ ಬೇಕಾಗಿಲ್ಲ.
– ವಿದ್ಯಾ ಭಾರತಿ, ಬೆಂಗಳೂರು ಮತದಾನ ನನ್ನ ಹಕ್ಕು. ಪಕ್ಷ ಮುಖ್ಯವಲ್ಲ ನನಗೆ. ನನ್ನ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವ ಒಬ್ಬ ಸಮರ್ಥ ನಾಯಕನಿಗೆ ನನ್ನ ಈ ಅಮೂಲ್ಯವಾದ ಮತ ನೀಡುತ್ತೇನೆ. ಆ ಮೂಲಕ ದೇಶದ ಅಭಿವೃದ್ಧಿಗೆ ಕೈಜೋಡಿಸುತ್ತೇನೆ.
– ಭವ್ಯಾ ಶೆಟ್ಟಿಗಾರ್, ಉಜಿರೆ ಮೊದಲಬಾರಿಗೆ ಮತ ಹಾಕುವುದು ಖುಷಿ ತಂದಿದೆ. ಪಕ್ಷಗಳು ಯುವಕ ಯುವತಿಯರಿಗೆ ಉದ್ಯೋಗ ದೊರಕುವ ಯೋಜನೆಯನ್ನು ರೂಪಿಸಬೇಕು. ನಾನಂತೂ ಅಭ್ಯರ್ಥಿಯ ಗುಣ ನೋಡಿ ಮತ ಹಾಕುತ್ತೇನೆ.
– ಡಿ.ಸವಿತಾ, ಮಧುಗಿರಿ