Advertisement

ನಾಳೆ ವಾರ್ಷಿಕ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ

02:25 PM Aug 28, 2021 | Team Udayavani |

ಮಲಾಡ್‌: ಮಲಾಡ್‌ ಪೂರ್ವದ ವರಮಹಾಲಕ್ಷ್ಮೀ ಪೂಜಾ ಸಮಿತಿಯ 12ನೇ ವಾರ್ಷಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯು ಆ. 29ರಂದು ಅಪರಾಹ್ನ 4ರಿಂದ ಮಲಾಡ್‌ ಪೂರ್ವದ ದಪ್ತರಿ ರೋಡ್‌ನ‌ ಉತ್ಕರ್ಷ ವಿದ್ಯಾ ಮಂದಿರದ ಸಭಾಗೃಹದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳೊಂದಿಗೆ ಸಮಿತಿಯ ಅಧ್ಯಕ್ಷ ನ್ಯಾಯವಾದಿ ಜಗನ್ನಾಥ್‌ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಲಿದೆ.

Advertisement

ಧಾರ್ಮಿಕ ಕಾರ್ಯಕ್ರಮವಾಗಿ ಅಪರಾಹ್ನ 4ರಿಂದ ಭಜನೆ, ಪ್ರತಿಭಾ ವಂತ ವಿದ್ಯಾರ್ಥಿಗಳಿಗೆ ಮತ್ತು ದಾನಿಗಳಿಗೆ ಗೌರವಾರ್ಪಣೆ, ಸಂಜೆ 6.45ರಿಂದ ಸಾಮೂಹಿಕ ಶ್ರೀ ವರಮ ಹಾಲಕ್ಷ್ಮೀ ಪೂಜೆಯನ್ನು ವೇ| ಮೂ| ರಮೇಶ್‌ ವಾಗ್ಲೆ ಡೊಂಬಿವಲಿ ಇವರ ಪೌರೋಹಿತ್ವದಲ್ಲಿ ಆಯೋಜಿ ಸಲಾಗಿದೆ. ರಾತ್ರಿ 8ರಿಂದ ಮಹಾಮಂ ಗಳಾರತಿ ಹಾಗೂ ಸಮಿತಿಯ ಸಲಹೆಗಾರ, ಬಾಂಬೆ ಬಂಟ್ಸ್‌ನ ಉಪಾಧ್ಯಕ್ಷ ಸಿಎ ಸುರೇಂದ್ರ ಶೆಟ್ಟಿ ಇವರ ಸೇವಾರ್ಥವಾಗಿ ಮಹಾಪ್ರಸಾದ ಅನ್ನಸಂತರ್ಪಣೆ ನಡೆಯಲಿದೆ.

ಇದನ್ನೂ ಓದಿ:ಇಪ್ಪತ್ತು ದಿನದಲ್ಲಿ ಸಿಇಟಿ ಫಲಿತಾಂಶ ಪ್ರಕಟ : ಡಾ.ಸಿ.ಎನ್.ಅಶ್ವತ್ಥನಾರಾಯಣ

ಸಮಿತಿಯ ಅಧ್ಯಕ್ಷ ನ್ಯಾಯವಾದಿ ಜಗನ್ನಾಥ ಎನ್‌. ಶೆಟ್ಟಿ, ಸಂಚಾಲಕ ಬಿ. ದಿನೇಶ್‌ ಕುಲಾಲ್‌, ಕೋಶಾಧಿ ಕಾರಿ ಜಗನ್ನಾಥ್‌ ಎಚ್‌. ಮೆಂಡನ್‌, ಸಮಿತಿಯ ಸಲಹೆಗಾರರಾದ ಅಭ್ಯುದಯ ಬ್ಯಾಂಕ್‌ನ ಎಂ. ಡಿ. ಪ್ರೇಮನಾಥ ಸಾಲ್ಯಾನ್‌, ಪರಮಾನಂದ ಜೆ. ಭಟ್‌, ಸಮಿತಿಯ ಸದಸ್ಯರಾದ ಸತೀಶ್‌ ಭಟ್‌, ಸಂತೋಷ್‌ ಕೆ. ಪೂಜಾರಿ,ಕುಮರೇಶ್‌ಆಚಾರ್ಯ, ಮಹಾಬಲ ಪೂಜಾರಿ, ಸುಂದರ ಪೂಜಾರಿ, ದಿನೇಶ್‌ ಪೂಜಾರಿ, ಸನತ್‌
ಪೂಜಾರಿ, ಸಿದ್ದರಾಮ ಗೌಡ, ಸುರೇಂದ್ರ ಆಚಾರ್ಯ, ಚಂದ್ರಶೇಖರ ಶೆಟ್ಟಿ, ನಿತ್ಯಾನಂದ ಕೋಟ್ಯಾನ್‌, ಶೈಲೇಶ್‌ ಪೂಜಾರಿ, ದಿನೇಶ್‌ ಕುಂಬ್ಳೆ, ಗೋಪಾಲ್‌ ಎಂ. ಪೂಜಾರಿ, ಹರೀಶ್‌ ಶೆಟ್ಟಿ ಪೆರಾರ, ಸುರೇಂದ್ರ ಶೆಟ್ಟಿ, ರಾಮ ಪೂಜಾರಿ, ಜಯ ಪೂಜಾರಿ, ಸೋಮನಾಥ್‌ ವಾಗ್ಲೆ, ಹರೀಶ್‌ ಪೂಜಾರಿ ಕಾರ್ನಾಡ್‌, ಸದಾನಂದ ಕೋಟ್ಯಾನ್‌, ದಿನೇಶ್‌ ಕಾಮತ್‌, ಸದಾನಂದ ರಾವ್‌, ಸೂರಪ್ಪ ಕುಂದರ್‌, ಮಂಜು ಗೌಡ, ಉಮೇಶ್‌ ಸಿ. ಪೂಜಾರಿ, ಶಶಿಧರ ಹೆಗ್ಡೆ, ಮೃತ್ಯುಂಜಯ ಪಲ್ಲಿ, ರವಿ ಮೂಲ್ಯ, ಲಕ್ಷ್ಮಣ್‌ ರಾವ್‌, ಈಶ್ವರ ಕುಲಾಲ್‌, ಮಹಿಳಾ ವಿಭಾಗದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಭಾರತಿ ಎಸ್‌. ವಾಗ್ಲೆ, ಸಂಚಾಲಕಿ ಮೋಹಿನಿ ಜೆ. ಶೆಟ್ಟಿ, ಉಪ ಕಾರ್ಯಾಧ್ಯಕ್ಷರಾದ ಶೀಲಾ ಎಂ. ಪೂಜಾರಿ, ರತ್ನಾ ಡಿ. ಕುಲಾಲ್‌, ಲಲಿತಾ ಎಸ್‌. ಗೌಡ, ಕಾರ್ಯದರ್ಶಿ ಕೆ. ಆಚಾರ್ಯ, ಜತೆ ಕಾರ್ಯದರ್ಶಿಗಳಾದ ಗೀತಾ ಜೆ. ಮೆಂಡನ್‌, ಕೃಪಾ ಜೆ. ಮೂಲ್ಯ ಹಾಗೂ ಮಹಿಳಾ ಸದಸ್ಯೆಯರು, ಯುವ ವಿಭಾಗದ ಕಾರ್ಯಾಧ್ಯಕ್ಷೆ ರಶ್ಮಿ ಎಸ್‌. ಪೂಜಾರಿ, ಸಂಚಾಲಕಿ ಪ್ರಣಿತಾ ವಿ. ಶೆಟ್ಟಿ, ಉಪ ಕಾರ್ಯಾಧ್ಯಕ್ಷರಾದ ದಿವ್ಯಾ ಪೂಜಾರಿ, ಸುದೀಪ್‌ ಡಿ. ಪೂಜಾರಿ, ನವೀನ್‌ ಸಾಲ್ಯಾನ್‌, ಕಾರ್ಯದರ್ಶಿ ಸೌಮ್ಯಾ ಜೆ. ಮೆಂಡನ್‌, ಜತೆ ಕಾರ್ಯದರ್ಶಿಗಳಾಗಿ ದಿಶಾ ಕರ್ಕೇರ, ಯೋಗೇಶ್ವರಿ ಗೌಡ ಹಾಗೂ ಯುವ ಸದಸ್ಯರು ಮೊದಲಾದವರ ನೇತೃತ್ವದಲ್ಲಿ ಕಾರ್ಯಕ್ರಮವು ಜರಗಲಿದ್ದು, ಸದ್ಭಕ್ತರು ಪೂಜೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next