Advertisement

ನಾಳೆ ನವೀಕೃತ ನಾಗಾಲಯ ಸಮರ್ಪಣೆ: ಬ್ರಹ್ಮಕಲಶೋತ್ಸವ

12:45 AM Mar 07, 2019 | |

ಶಿರ್ವ: ಕೋಡು ಮುಲ್ಕಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಸಂಬಂಧಪಟ್ಟ ಮುಲ್ಕಾಡಿ ಮುದ್ದಣ್ಣಕೆರೆ ಪಂಚದೈವೀಕ ಸನ್ನಿಧಿಯಲ್ಲಿ ಶ್ರೀ ನಾಗಬ್ರಹ್ಮಾದಿ ಖಡೆYàಶ್ವರೀ ಪರಿವಾರ ಶಕ್ತಿಗಳ ನವೀಕೃತ ನಾಗಾಲಯ ಸಮರ್ಪಣೆ, ಬಿಂಬ ಪುನಃಪ್ರತಿಷ್ಠೆ- ಬ್ರಹ್ಮಕಲಶೋತ್ಸವ ಆಶ್ಲೇಷಾ ಬಲಿ-ನಾಗ ಸಂದರ್ಶನ, ಮಹಾ ಅನ್ನಸಂತರ್ಪಣೆಯು ಕ್ಷೇತ್ರದ ತಂತ್ರಿಗಳಾದ ವೇ| ಮೂ| ಕುತ್ಯಾರು ಕೇಂಜ ಶ್ರೀಧರ ತಂತ್ರಿ ಅವರ ನೇತೃತ್ವದಲ್ಲಿ ಕ್ಷೇತ್ರ ಅರ್ಚಕ ಮುಲ್ಕಾಡಿ ಹರಿದಾಸ ಭಟ್‌ ಹಾಗೂ ನಾಗಪಾತ್ರಿ ಬೆಳ್ಳರ್ಪಾಡಿ ಶ್ರೀ ರಮಾನಂದ ಭಟ್ಟರ ಸಹಕಾರದೊಂದಿಗೆ ಮಾ. 8ರಂದು ನಡೆಯಲಿದೆ.

Advertisement

400 ವರ್ಷಗಳ ಇತಿಹಾಸವಿರುವ ಪುರಾತನ ಮುದ್ದಣ್ಣಕೆರೆ ನಾಗಬ್ರಹ್ಮಾದಿ ಪಂಚದೈವೀಕ ಸನ್ನಿಧಿಯ ಜೀರ್ಣೋದ್ಧಾರದ ಸಲುವಾಗಿ ಸಾನ್ನಿಧ್ಯದಲ್ಲಿ ಕೇರಳದ ರೂಪೇಶ್‌ ಪೊದುವಾಳ್‌ ಅವರ ಉಪಸ್ಥಿತಿಯಲ್ಲಿ ತಾಂಬೂಲಾರೂಢ ಪ್ರಶ್ನೆ ನಡೆದಿತ್ತು.ಶಿರ್ವ ಕೋಡು ಮನೆತನಕ್ಕೆ ಒಳಪಟ್ಟ ಶ್ರೀ ಕ್ಷೇತ್ರದಲ್ಲಿ ಪ್ರಧಾನ ವಾಗಿ ಶ್ರೀ ನಾಗಬ್ರಹ್ಮ, ರಕ್ತೇಶ್ವರೀ, ನಂದಿಕೇಶ್ವರ, ಕ್ಷೇತ್ರಪಾಲ, ಶ್ರೀ ಖಡೆಶ್ವರೀ ಸಹಿತ ಇನ್ನಿತರ ಶ‌ಕ್ತಿಗಳ ಕ್ಷೇತ್ರ ಜೀರ್ಣೋ ದ್ಧಾರಗೊಂಡಿದ್ದು ಎಲ್ಲ ಶಕ್ತಿಗಳಿಗೆ ಸದೃಢವಾದ ಗುಡಿ ಗೋಪುರಗಳು, ಆವರ್ಕ ಆರೂಢಗಳು ನಿರ್ಮಾಣ ಗೊಂಡಿದ್ದು, ಬಿಂಬ ಪುನಃಪ್ರತಿಷ್ಠೆ- ಬ್ರಹ್ಮಕಲಶೋತ್ಸವ, ಆಶ್ಲೇಷಾ ಬಲಿ-ನಾಗಸಂದರ್ಶನ ನೆರವೇರಲಿದೆ ಎಂದು ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ಸದಾಶಿವ ಹೆಗ್ಡೆ, ಮೊಕ್ತೇಸರರಾದ ಕೆ. ಜಯಚಂದ್ರ ಹೆಗ್ಡೆ, ಕೆ. ಸುಧೀರ್‌ ಹೆಗ್ಡೆ ಹಾಗೂ ಶಿರ್ವ ಕೋಡು ಮನೆತನದ ಬಾಲಕೃಷ್ಣ ಹೆಗ್ಡೆ, ಸುಮತಿ ಹೆಗ್ಗಡ್ತಿ ಮತ್ತು ಶಾಂಭವಿ ಹೆಗ್ಗಡ್ತಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next