Advertisement

ನಾಳೆ ನರೇಂದ್ರ ಮೋದಿ -ಕ್ಸಿ ಜಿನ್‌ಪಿಂಗ್‌  ಭೇಟಿ

06:40 AM Sep 04, 2017 | Harsha Rao |

ಕ್ಸಿಯಾಮೆನ್‌ (ಚೀನ): ಡೋಕ್ಲಾಮ್‌ ಬಿಕ್ಕಟ್ಟಿನ ಬಳಿಕ ಮೊದಲ ಬಾರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಮಂಗಳವಾರ ಭೇಟಿಯಾಗುವುದು ಬಹುತೇಕ ಖಚಿತಗೊಂಡಿದೆ. ಈ ಸಂದರ್ಭದಲ್ಲಿ ಎರಡೂ ರಾಷ್ಟ್ರಗಳ ನಡುವೆ ಕಗ್ಗಂಟಾಗಿರುವ ವಿಚಾರಗಳ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸುವ ಸಾಧ್ಯತೆ ಇದೆ. 

Advertisement

ಜತೆಗೆ ಭಯೋತ್ಪಾದನೆ, ದ್ವಿಪಕ್ಷೀಯ ವಿಚಾರಗಳ ಸಹಿತ ಪ್ರಮುಖ ವಿಷಯಗಳ ಬಗ್ಗೆ ಪ್ರಸ್ತಾವ ಮಾಡಲಿ ದ್ದಾರೆಂದು ಹೇಳಲಾಗಿದೆ. ಈ ನಡುವೆ ಬ್ರಿಕ್ಸ್‌ ರಾಷ್ಟ್ರಗಳ ಸಮ್ಮೇಳನಕ್ಕಾಗಿ ಚೀನದ ಕ್ಸಿಯಾಮೆನ್‌ಗೆ ಪ್ರಧಾನಿ ನರೇಂದ್ರ ಮೋದಿ ರವಿವಾರ ಆಗಮಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next