Advertisement

ನಾಳೆ ಕೆಪಿಎಲ್‌ ಹರಾಜು

06:00 AM Jul 20, 2018 | Team Udayavani |

ಬೆಂಗಳೂರು: ಏಳನೇ ಆವೃತ್ತಿ ಕೆಪಿಎಲ್‌ ಹರಾಜು ಶನಿವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆ
ಯಲಿದೆ ಎಂದು ಕೆಎಸ್‌ಸಿಎ (ಕರ್ನಾಟಕ ಕ್ರಿಕೆಟ್‌ ಸಂಸ್ಥೆ) ತಿಳಿಸಿದೆ.

Advertisement

ಮಾಜಿ ಕ್ರಿಕೆಟಿಗ ಗುಂಡಪ್ಪ ವಿಶ್ವನಾಥ್‌, ಸೈಯದ್‌ ಕಿರ್ಮಾನಿ, ಬಿ.ಎಸ್‌.ಚಂದ್ರಶೇಖರ್‌ ಹಾಗೂ ನಟ ಕಿಚ್ಚ ಸುದೀಪ್‌ ಸಹಿ
ಹಾಕುವ ಮೂಲಕ ಕೆಪಿಎಲ್‌ ಕ್ರಿಕೆಟ್‌ಅನ್ನು ಗುರುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಘೋಷಿಸಿದರು. ಇದೇ ವೇಳೆ
ಮಾತನಾಡಿದ ಕೆಎಸ್‌ಸಿಎ ಅಧ್ಯಕ್ಷ ಸಂಜಯ್‌ ದೇಸಾಯಿ, ಈ ಹಿಂದಿನ ಎಲ್ಲ ಆವೃತ್ತಿ ಕೆಪಿಎಲ್‌ ಕೂಟ ಅತ್ಯಂತ ಯಶಸ್ವಿಯಾಗಿದೆ. ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರ ಕನಸಿನ ಕೂಸು ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದೆ. ಈ ವರ್ಷವೂ ಹಿಂದಿನ ಎಲ್ಲ ಆವೃತ್ತಿಗಳಿಗಿಂತ ಅದೂಟಛಿರಿಯಾಗಿ ನಡೆಯಲಿದೆ ಎಂದರು.

ಜು.21ಕ್ಕೆ ಕೆಪಿಎಲ್‌ ಹರಾಜು: ಶನಿವಾರ ಬೆಳಿಗ್ಗೆ 10 ಗಂಟೆಯಿಂದ ಕೆಪಿಎಲ್‌ ಹರಾಜು ಆರಂಭವಾಗಲಿದೆ. ಉಳಿಕೆಯಾಗದ ಆಟಗಾರರನ್ನು ಹೊರ ತುಪಡಿಸಿ ಉಳಿದ ಎಲ್ಲ ಆಟಗಾರರು ಹರಾಜಿನಲ್ಲಿರಲಿದ್ದಾರೆ. ಒಟ್ಟಾರೆ 241 ಆಟಗಾರರು ಹರಾಜು ಪಟ್ಟಿಯಲ್ಲಿದ್ದಾರೆ.

ಆದರೆ ಎಲ್ಲ ಆಟಗಾರರು ಮುಖ್ಯ ಹರಾಜಿನಲ್ಲಿ ಇರುವುದಿಲ್ಲ. ತಾರಾ ಆಟಗಾರರ ಜತೆಗೆ ಅಂತಿಮ ಹರಾಜಿನಲ್ಲಿ ಇರುವ ಆಟಗಾರರ ಪಟ್ಟಿ ಫ್ರಾಂಚೈಸಿ ಆಸಕ್ತಿ ಅವಲಂಬಿಸಿದೆ. ಎಲ್ಲ 8 ಫ್ರಾಂಚೈಸಿಗಳು ಶುಕ್ರವಾರ ಸಂಜೆಯೊಳಗೆ ತಮಗೆ ಇಷ್ಟವಾದ ಆಟಗಾರರ ಹೆಸರನ್ನು ಸೂಚಿಸಲಿದ್ದಾರೆ. ಅವರು ಸೂಚಿಸಿದ ಹೆಸರುಗಳು ಮಾತ್ರ ಶನಿವಾರದ ಅಂತಿಮ ಹರಾಜು ಪಟ್ಟಿಯಲ್ಲಿರಲಿದೆ.

ಕರುಣ್‌ ಹೋದ್ರು..ಉತ್ತಪ್ಪ ಬಂದ್ರು:ಇಂಗ್ಲೆಂಡ್‌ ವಿರುದಟಛಿ ಟೆಸ್ಟ್‌ ಸರಣಿಗೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಕರುಣ್‌ ನಾಯರ್‌ ಪ್ರಸ್ತುತ ಕೆಪಿಎಲ್‌ ನಿಂದ ಹೊರಬಿದ್ದಿದ್ದಾರೆ. ಇವರ ಬದಲಿಗೆ ರಾಬಿನ್‌ ಉತ್ತಪ್ಪ ಹರಾಜಿನಲ್ಲಿರುವ ಪ್ರಮುಖ ಆಕರ್ಷಣೆಯಾಗಿದ್ದಾರೆ.

Advertisement

ಕಳೆದ ಕೆಪಿಎಲ್‌ನಲ್ಲಿ ರಾಬಿನ್‌ ಉತ್ತಪ್ಪಗೆ ರಾಜ್ಯ ರಣಜಿ ತಂಡದಲ್ಲಿ ಸ್ಥಾನ ಲಭ್ಯವಾಗಿರಲಿಲ್ಲ. ಇದರಿಂದ ಅಸಮಾಧಾನಗೊಂಡು ಉತ್ತಪ್ಪ ಸೌರಾಷ್ಟ್ರ ತಂಡ ಪ್ರತಿನಿಧಿಸಿದ್ದರು. ರಾಜ್ಯ ಕ್ರಿಕೆಟ್‌ ಸಂಸ್ಥೆ ವಿರುದಟಛಿ ಉತ್ತಪ್ಪ ತೀವ್ರ ಅಸಮಾಧಾನ ಹೊಂದಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ಉತ್ತಪ್ಪ ಮತ್ತೆ ಟಿ20 ಕ್ರಿಕೆಟ್‌ ತಂಡವೊಂದನ್ನು ಸೇರುವ ಮೂಲಕ ಈ ಎಲ್ಲ ಅನುಮಾನಕ್ಕೆ ತೆರೆ ಎಳೆಯಲಿದ್ದಾರೆ.

ಹರಾಜಿನಲ್ಲಿರುವ ಫ್ರಾಂಚೈಸಿಗಳು: ಬಿಜಾಪುರ ಬುಲ್ಸ್‌, ಬೆಳಗಾವಿ ಪ್ಯಾಂಥರ್, ಬಳ್ಳಾರಿ ಟಸ್ಕರ್, ಹುಬ್ಬಳ್ಳಿ ಟೈಗರ್ಸ್‌, ಮೈಸೂರು ವಾರಿಯರ್, ಶಿವಮೊಗ್ಗ ಲಯನ್ಸ್‌, ಬೆಂಗಳೂರು ಬ್ಲಾಸ್ಟರ್ಸ್‌ ಹರಾಜಿನಲ್ಲಿವೆ. ನಮ್ಮ ಶಿವಮೊಗ್ಗ ಹೆಸರು ಬದಲಾಗಿದ್ದು,ಶಿವಮೊಗ್ಗ ಲಯನ್ಸ್‌ ಎನಿಸಿಕೊಂಡಿದೆ.

ಹರಾಜಿನಲ್ಲಿರುವ ತಾರಾ ಆಟಗಾರರು
ಕೆ.ಗೌತಮ್‌, ಅಮಿತ್‌ ವರ್ಮ, ಮಾಯಾಂಕ್‌ ಅಗರ್ವಾಲ್‌, ಅಭಿಮನ್ಯು ಮಿಥುನ್‌, ಆರ್‌.ಸಮರ್ಥ್, ಶ್ರೇಯಸ್‌ ಗೋಪಾಲ್‌, ಶಿಶಿರ್‌ ಭವಾನೆ ಹರಾಜಿನಲ್ಲಿರುವ ಪ್ರಮುಖ ಕ್ರಿಕೆಟಿಗರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next