ಮಣಿಪಾಲ: ಎಲ್ಲೆಡೆ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಮನೆ ಮಾಡಿದೆ. ಹೊಸ ಬಟ್ಟೆ ಧರಿಸಿ, ಮನೆ ಶೃಂಗಾರಗೊಳಿಸಿ, ರಂಗೋಲಿ ಹಾಕಿ ದೀಪ ಹಚ್ಚಿ ಮನೆ ಮಂದಿಯೆಲ್ಲ ಸಂತಸದಿಂದ ಕಳೆಯುವುದೇ ಅವಿಸ್ಮರಣೀಯ ಕ್ಷಣ. ಇಂತಹ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ಉದಯವಾಣಿ ಆಯೋಜಿಸಿರುವುದು ರೇಷ್ಮೆ ಜತೆ ದೀಪಾವಳಿ ಫೋಟೋ ಸ್ಪರ್ಧೆ. ಮಹಿಳೆಯರಿಗಂತೂ ರೇಷ್ಮೆ ಸೀರೆ ಅಚ್ಚುಮೆಚ್ಚಿನ ಉಡುಗೆ. ರೇಷ್ಮೆ ಸೀರೆ-ಉಡುಗೆಗಳನ್ನು ದೀಪಾ ವಳಿ ಸಂದರ್ಭ ತೊಟ್ಟು ಸಂಭ್ರಮಿಸುವು ದಷ್ಟೇ ಅಲ್ಲ; ಅವುಗಳ ಉತ್ತಮ ಫೋಟೋಗಳನ್ನು ಕಳುಹಿಸಿ ಬಹುಮಾನವನ್ನೂ ಗೆಲ್ಲಲು ಅವಕಾಶವಿದೆ.
ಕರಾವಳಿ ಕರ್ನಾಟಕದ ಜನಮನದ ಜೀವನಾಡಿ ಉದಯವಾಣಿ ತನ್ನ ಮಹಿಳಾ ಓದುಗರಿಗಾಗಿ ಉದ್ಯಾವರದ ಜವುಳಿ ಮಳಿಗೆ ಜಯಲಕ್ಷ್ಮೀ ಸಿಲ್ಕ್ಸ್ ಅವರ ಸಹಭಾಗಿತ್ವದಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಿದೆ. ಉಡುಪಿ, ದಕ್ಷಿಣ ಕನ್ನಡ, ಕೊಡಗು ಮತ್ತು ಕಾಸರಗೋಡು ಜಿಲ್ಲೆಯ ಮಹಿಳೆಯರು ಇದರಲ್ಲಿ ಪಾಲ್ಗೊಳ್ಳಬಹುದು. ಸಾಂಪ್ರದಾಯಿಕ ರೇಷ್ಮೆಯ ಪ್ರತಿಷ್ಠಿತ ಸ್ಥಾನವನ್ನು ಮತ್ತಷ್ಟು ಔನ್ನತ್ಯಕ್ಕೇರಿಸಲು ಹಾಗೂ ಆ ಮೂಲಕ ಮತ್ತೆ ಸಾಂಪ್ರದಾಯಿಕತೆಗೆ ಒತ್ತು ನೀಡುವುದು ಈ ಸ್ಪರ್ಧೆಯ ಉದ್ದೇಶ.
ಕುಟುಂಬ ಸದಸ್ಯೆಯರು, ಗೆಳತಿಯರು ಹೀಗೆ ಗುಂಪಾಗಿ ಎಲ್ಲರೂ ಸಾಂಪ್ರದಾಯಿಕವಾಗಿ ರೇಷ್ಮೆ ಸೀರೆ ಉಟ್ಟು ದೀಪಾವಳಿ ಆಚರಿಸುವ ಫೋಟೋಗಳನ್ನು ಕಳುಹಿಸಿ. ಗುಂಪಿನಲ್ಲಿ ಯಾರಾದರೂ ಒಬ್ಬರು ಕಡ್ಡಾಯವಾಗಿ ಕೆಂಪು ಬಣ್ಣದ ಸೀರೆ ಉಟ್ಟಿರಬೇಕು. ಗುಂಪಿನಲ್ಲಿ ಕನಿಷ್ಠ ಮೂರು ಮಂದಿ ಇರಲಿ. ಉತ್ತಮ ರೆಸಲ್ಯೂಶನ್ ಹೊಂದಿರುವ, ಕಲಾತ್ಮಕವಾಗಿರುವ, ನೈಜತೆಯಿಂದ ಕೂಡಿರುವ ವಿಶಿಷ್ಟ ಪರಿಕಲ್ಪನೆಯ ಫೋಟೋಗಳಿಗೆ ಹೆಚ್ಚಿನ ಪ್ರಾಶಸ್ತ್ಯ. ಮೊಬೈಲ್‌ನಿಂದ ತೆಗೆದ ಚಿತ್ರಗಳಾದರೆ ಉತ್ತಮ ರೆಸಲ್ಯೂಶನ್ ಇರಲಿ. ಹಳೆಯ ಚಿತ್ರ ತಿರಸ್ಕರಿಸಲಾಗುವುದು.
ಚಿತ್ರ ಕಳುಹಿಸಲು ಅ. 27 ಕೊನೆಯ ದಿನ ಸ್ಪರ್ಧೆಗೆ ಚಿತ್ರಗಳನ್ನು ಕಳುಹಿಸಲು ಅ. 27 (ಗುರುವಾರ) ಕೊನೆಯ ದಿನ. ಇದುವರೆಗೂ ಚಿತ್ರ ಕಳುಹಿಸದಿದ್ದವರು ಕೂಡಲೇ ಕಳುಹಿಸಿ. ನಿಮ್ಮ ಹೆಸರು, ಊರು, ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ತಪ್ಪದೇ ನಮೂದಿಸಿ. ಫಲಿತಾಂಶ ಮತ್ತು ವಿಜೇತ ಫೋಟೋಗಳನ್ನು ಉದಯವಾಣಿ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು.
ಫೋಟೋಗಳನ್ನು ಇ-ಮೇಲ್ ವಿಳಾಸ ri@udayavani.com ಅಥವಾ ವಾಟ್ಸ್‌ಆ್ಯಪ್ ಸಂಖ್ಯೆ 9148594259ಗೆ ಕಳುಹಿಸಿಕೊಡಿ. ಇ-ಮೇಲ್ ಅಥವಾ ವಾಟ್ಸ್‌ಆ್ಯಪ್ ಯಾವುದಾದರೂ ಒಂದಕ್ಕೆ ಮಾತ್ರ ಚಿತ್ರಗಳನ್ನು ಕಳುಹಿಸಬಹುದು.
ಬಹುಮಾನ ವಿವರ
ಉತ್ತಮ ಫೋಟೋಗಳಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಪ್ರೋತ್ಸಾಹಕ ಬಹುಮಾನ ಗಳನ್ನು ನೀಡಲಾಗುವುದು. ಪ್ರಥಮ ಬಹುಮಾನ 25 ಸಾವಿರ ರೂ. ಬೆಲೆಯ ರೇಷ್ಮೆ ಸೀರೆ, ದ್ವಿತೀಯ ಬಹುಮಾನ 15 ಸಾವಿರ ರೂ. ಮೌಲ್ಯದ ರೇಷ್ಮೆ ಸೀರೆ, ತೃತೀಯ ಬಹುಮಾನ 10 ಸಾವಿರ ರೂ. ಮೌಲ್ಯದ ರೇಷ್ಮೆ ಸೀರೆ ಹಾಗೂ 10 ಮಂದಿಗೆ ತಲಾ 5 ಸಾವಿರ ರೂ. ಮೌಲ್ಯದ ಪ್ರೋತ್ಸಾಹಕ ಬಹುಮಾನಗಳನ್ನು ನೀಡಲಾಗುವುದು.