Advertisement
1952ರಲ್ಲಿ ಪ್ರವಾಸಿ ಇಂಗ್ಲೆಂಡ್ ವಿರುದ್ಧ ಭಾರತ ಇಲ್ಲಿ ಮೊದಲ ಟೆಸ್ಟ್ ಆಡಿತ್ತು. ಮೂರೇ ದಿನದಲ್ಲಿ ಮುಗಿದ ಈ ಪಂದ್ಯವನ್ನು ವಿಜಯ್ ಹಜಾರೆ ನಾಯಕತ್ವದ ಭಾರತ 8 ವಿಕೆಟ್‌ಗಳಿಂದ ಕಳೆದುಕೊಂಡಿತ್ತು. ಇಲ್ಲಿ ಮುಂದಿನ ಟೆಸ್ಟ್ ಆಡಿದ್ದು 1958ರಲ್ಲಿ. ಎದುರಾಳಿ ವೆಸ್ಟ್ ಇಂಡೀಸ್. ಫಲಿತಾಂಶ-ಭಾರತಕ್ಕೆ 203 ರನ್ನುಗಳ ಆಘಾತಕಾರಿ ಸೋಲು.
Related Articles
Advertisement
ನ್ಯೂಜಿಲ್ಯಾಂಡ್ ವಿರುದ್ಧ ಅಜೇಯನ್ಯೂಜಿಲ್ಯಾಂಡ್ ವಿರುದ್ಧ ಕಾನ್ಪುರದಲ್ಲಿ ಭಾರತ ಈವರೆಗೆ 3 ಟೆಸ್ಟ್ ಪಂದ್ಯಗಳನ್ನಾಡಿದೆ. ಎರಡನ್ನು ಗೆದ್ದರೆ, ಇನ್ನೊಂದು ಡ್ರಾಗೊಂಡಿದೆ. ಭಾರತ-ನ್ಯೂಜಿಲ್ಯಾಂಡ್ ಇಲ್ಲಿ ಮೊದಲ ಸಲ ಮುಖಾಮುಖಿಯಾದದ್ದು 1976ರಲ್ಲಿ. ಬಿಷನ್ ಸಿಂಗ್ ಬೇಡಿ ಮತ್ತು ಗ್ಲೆನ್ ಟರ್ನರ್ ನಾಯಕರಾಗಿದ್ದರು. ಬೃಹತ್ ಮೊತ್ತದ ಈ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತ್ತು. 1999ರ ಸರಣಿಯ ದ್ವಿತೀಯ ಟೆಸ್ಟ್ ಇಲ್ಲಿ ನಡೆದಿತ್ತು. ಸಚಿನ್ ತೆಂಡುಲ್ಕರ್ ಭಾರತ ತಂಡದ ನಾಯಕರಾಗಿದ್ದರು. ಎದುರಾಳಿ ಕಪ್ತಾನ ಸ್ಟೀಫನ್ ಫ್ಲೆಮಿಂಗ್. ಭಾರತ ಈ ಪಂದ್ಯವನ್ನು 8 ವಿಕೆಟ್‌ಗಳಿಂದ ಗೆದ್ದು ಬಂದಿತು. ಕರ್ನಾಟಕದ ಐವರು ಈ ಪಂದ್ಯದಲ್ಲಿ ಆಡಿದ್ದರು. ದ್ರಾವಿಡ್, ಕುಂಬ್ಳೆ, ಶ್ರೀನಾಥ್, ಭಾರದ್ವಾಜ್ ಮತ್ತು ಸುನೀಲ್ ಜೋಶಿ. ಒಟ್ಟು 10 ವಿಕೆಟ್ ಹರಿಸಿದ ಕುಂಬ್ಳೆ ಪಂದ್ಯಶ್ರೇಷ್ಠರಾಗಿ ಮೂಡಿಬಂದರು. ಇದನ್ನೂ ಓದಿ:ಡಬ್ಲ್ಯುಬಿಬಿಎಲ್ ಟೂರ್ನಿಯ ತಂಡ: ಹರ್ಮನ್‌ಪ್ರೀತ್‌ಗೆ ಸ್ಥಾನ 2016ರಲ್ಲಿ ಕೊನೆಯ ಟೆಸ್ಟ್
ಭಾರತ-ನ್ಯೂಜಿಲ್ಯಾಂಡ್ ಕೊನೆಯ ಸಲ ಗ್ರೀನ್ ಪಾರ್ಕ್‌ನಲ್ಲಿ ಎದುರಾದದ್ದು 2016ರಲ್ಲಿ. ನಾಯಕರಾಗಿದ್ದವರು ವಿರಾಟ್ ಕೊಹ್ಲಿ. ಸರಣಿಯ ಈ ಮೊದಲ ಪಂದ್ಯವನ್ನು ಭಾರತ 197 ರನ್ನುಗಳ ಭಾರೀ ಅಂತರದಿಂದ ಜಯಿಸಿತು. 90 ರನ್ ಬಾರಿಸುವ ಜತೆಗೆ 6 ವಿಕೆಟ್ ಉರುಳಿಸಿದ ರವೀಂದ್ರ ಜಡೇಜ ಪಂದ್ಯಶ್ರೇಷ್ಠರಾಗಿ ಮೂಡಿಬಂದಿದ್ದರು. ಈ ಪಂದ್ಯದ ಬಳಿಕ ಕಾನ್ಪುರದಲ್ಲಿ ಟೆಸ್ಟ್ ನಡೆದಿಲ್ಲ. 5 ವರ್ಷಗಳ ಬ್ರೇಕ್ ಬಳಿಕ ಮತ್ತೆ ಗ್ರೀನ್‌ಪಾರ್ಕ್ ಟೆಸ್ಟ್ ಪಂದ್ಯಕ್ಕೆ ತೆರೆದುಕೊಂಡಿದೆ. ಗ್ರೀನ್‌ಪಾರ್ಕ್ ಸ್ವಾರಸ್ಯ
-ಬ್ರಿಟಿಷ್ ಲೇಡಿ, ಮೇಡಮ್ ಗ್ರೀನ್ ಈ ಅಂಗಳದಲ್ಲಿ ಕುದುರೆ ಸವಾರಿ ನಡೆಸುತ್ತಿದುದ್ದರಿಂದ ಇದಕ್ಕೆ “ಗ್ರೀನ್ ಪಾರ್ಕ್’ ಎಂಬ ಹೆಸರು ಬಂತು. “ಬಿಲಿಯರ್ಡ್ಸ್ ಸ್ಟೇಡಿಯಂ’ ಎಂಬುದು ಇದರ ನಿಕ್ ನೇಮ್.
-“ವೂಲ್ಮರ್ ಟರ್ಫ್’ ಎಂದೂ ಇದನ್ನು ಕರೆಯಲಾಗುತ್ತದೆ. 2007ರ ವಿಶ್ವಕಪ್ ವೇಳೆ ನಿಗೂಢ ಸಾವನ್ನಪ್ಪಿದ ಆಸ್ಟ್ರೇಲಿಯದ ಕ್ರಿಕೆಟಿಗ ಬಾಬ್ ವೂಲ್ಮರ್ ಇದೇ ಕ್ರೀಡಾಂಗಣದ ಸನಿಹದಲ್ಲಿರುವ “ಮೆಕ್‌ರಾಬರ್ಟ್ ಹಾಸ್ಪಿಟಲ್’ನಲ್ಲಿ ಜನಿಸಿದ್ದರು. ಅವರ ಸ್ಮರಣೆಗಾಗಿ ಈ ಹೆಸರು.
-ಗಂಗಾ ನದಿಯ ದಡದಲ್ಲಿರುವ ಈ ಸ್ಟೇಡಿಯಂ, ವಿದ್ಯಾರ್ಥಿಗಳ ಗ್ಯಾಲರಿಯನ್ನು ಹೊಂದಿರುವ ಭಾರತದ ಏಕೈಕ ಕ್ರೀಡಾಂಗಣವಾಗಿದೆ.
-ಭಾರತದ ಹೆಮ್ಮೆಯ ಕ್ರಿಕೆಟಿಗ ಗುಂಡಪ್ಪ ವಿಶ್ವನಾಥ್ ಇಲ್ಲಿಯೇ ಟೆಸ್ಟ್ ಪದಾರ್ಪಣೆ ಮಾಡಿದ್ದರು (ಆಸ್ಟ್ರೇಲಿಯ ಎದುರಿನ 1969ರ ಪಂದ್ಯ). ಮೊದಲ ಇನ್ನಿಂಗ್ಸ್ ನಲ್ಲಿ ಖಾತೆ ತೆರೆಯಲು ವಿಫಲರಾದ ಅವರು ದ್ವಿತೀಯ ಇನ್ನಿಂಗ್ಸ್‌ನಲ್ಲಿ 137 ರನ್ ಬಾರಿಸಿ ಮಿಂಚಿದ್ದರು.
-ಸರ್ವಾಧಿಕ ಸ್ಕೋರ್: 7ಕ್ಕೆ 676 (ಭಾರತ, 1987ರ ಶ್ರೀಲಂಕಾ ಎದುರಿನ ಪಂದ್ಯ).
–ಸರ್ವಾಧಿಕ ವೈಯಕ್ತಿಕ ಮೊತ್ತ: 250 (ವಿಂಡೀಸ್‌ನ ಫಾವದ್ ಬ್ಯಾಕಸ್, 1978).
– ಅತ್ಯುತ್ತಮ ಬೌಲಿಂಗ್: 69ಕ್ಕೆ 9, ಜಸುಭಾಯ್ ಪಟೇಲ್ (1959-60ರ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್). ಇದೇ ಪಂದ್ಯದಲ್ಲಿ ಅವರು 124ಕ್ಕೆ 14 ವಿಕೆಟ್ ಕೆಡವಿದ್ದರು. ಇದು ಕಾನ್ಪುರ ಟೆಸ್ಟ್ ಪಂದ್ಯದ ಅತ್ಯುತ್ತಮ ಬೌಲಿಂಗ್ ಸಾಧನೆಯಾಗಿದೆ. ಕಾನ್ಪುರದಲ್ಲಿ ಭಾರತದ ಟೆಸ್ಟ್ ಸಾಧನೆ
ಪಂದ್ಯ: 22, ಗೆಲುವು: 07,
ಸೋಲು: 03, ಡ್ರಾ: 12