ಬದಲಿಸಲು ನೀಡಿದ್ದ ಕಾಲಾವಕಾಶವನ್ನು ಮೇ 16ರ ತನಕ ವಿಸ್ತರಿಸಲಾಗಿದೆ. 2018-19ನೇ ಸಾಲಿನಲ್ಲಿ ರಾಜ್ಯದ ಖಾಸಗಿ ಶಾಲೆಯಲ್ಲಿ ಲಭ್ಯವಿದ್ದ ಆರ್‌ಟಿಇ ಸೀಟಿಗೆ 2 ಲಕ್ಷಕ್ಕೂ ಅಧಿಕ ಅರ್ಜಿಗಳು ಬಂದಿದ್ದವು. ಮೊದಲ ಸುತ್ತಿನ ಆನ್‌ಲೈನ್ ಲಾಟರಿ ಪ್ರಕ್ರಿಯೆಯಲ್ಲಿ 1.11 ಲಕ್ಷ ಮಕ್ಕಳು ಸೀಟು ಪಡೆದಿದ್ದರು.
Advertisement
ಸೀಟು ಪಡೆದ ಮಕ್ಕಳ ಪಾಲಕರು ಶಾಲೆಯನ್ನು ಬದಲಾಯಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಈ ಭಾರಿ ಅವಕಾಶ ಕಲ್ಪಿಸಿತ್ತು.ಬದಲಾಯಿಸಲು ಬಯಸುವ ಶಾಲೆಯಲ್ಲಿ ಸೀಟು ಲಭ್ಯವಿದ್ದಾಗ ಮಾತ್ರ ಇದಕ್ಕೆ ಅವಕಾಶ ಇರುತ್ತದೆ. ಶಿಕ್ಷಣ ಇಲಾಖೆಯ ವೆಬ್‌ಸೈಟ್‌ನ ಆರ್‌ಟಿಇ ಲಿಂಕ್‌ನಲ್ಲಿ ಆಸಕ್ತ ಪಾಲಕರು ತಮ್ಮ ಮಕ್ಕಳ ಅರ್ಜಿ ಸಂಖ್ಯೆ, ಮೊಬೈಲ್ ಸಂಖ್ಯೆಯನ್ನು ನಮೂದಿಸಿದರೆ, ಒಟಿಪಿ(ಒನ್ ಟೈಮ್ ಪಾಸ್‌ವರ್ಡ್) ಬರುತ್ತದೆ. ಅದನ್ನು ಬಳಸಿಕೊಂಡು ಶಾಲೆಯನ್ನು ಬದಲಾಯಿಸಿಕೊಳ್ಳಲು ಮೇ 16ರ ತನಕ ಅವಕಾಶ ನೀಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.