Advertisement

ನಾಳೆ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ

06:00 AM Aug 09, 2017 | Team Udayavani |

ಮಂಗಳೂರು: ಸಂತ ಲಾರೆನ್ಸರಿಗೆ ಸಮರ್ಪಿಸಿದ ಧರ್ಮಕೇಂದ್ರ ಹಾಗೂ ಪುಣ್ಯ ಕ್ಷೇತ್ರದ ವಾರ್ಷಿಕ ಮಹೋತ್ಸವವು ಆ. 10ರಂದು ನಡೆಯಲಿದೆ. ಸಂತ ಲಾರೆನ್ಸರಂತೆ ನಾವು ದೇವರ ವಾಕ್ಯದ ಸಾಕ್ಷಿಗಳಾ ಗೋಣ. ಇದು ಈ ವರ್ಷದ ಮಹೋತ್ಸವದ ಸಂದೇಶವಾಗಿದೆ. ಮಹೋತ್ಸ ವಕ್ಕೆ ತಯಾರಿಯಾಗಿ ಒಂಬತ್ತು ದಿನಗಳ ನೊವೆನಾ ಪ್ರಾರ್ಥನೆಯು ಆ. 1 ರಿಂದ 9ರ ತನಕ ನಡೆಯಿತು. ಆ. 1ರಂದು ನೊವೇನಾ ಕಾರ್ಯಕ್ರಮಗಳಿಗೆ ಪಾಲಿಕೆಯ ಮೇಯರ್‌ ಕವಿತಾ ಸನಿಲ್‌ ಧ್ವಜಾರೋಹಣಗೈದು ಚಾಲನೆ ನೀಡಿದರು. 

Advertisement

ಮಂಗಳೂರು ಧರ್ಮಪ್ರಾಂತದ ಜುಡಿಶಿಯಲ್‌ ವಿಕಾರ್‌ ಫಾ| ವಾಲ್ಟರ್‌ ಡಿಮೆಲ್ಲೊ ಉದ್ಘಾಟಿಸಿದರು. ಆ. 9ರಂದು ಕಾರ್ಯಕ್ರಮ ಸಮಾರೋಪ ಗೊಳ್ಳಲಿದ್ದು, ಮಂಗಳೂರು ಸಂತ ಅಲೋಶಿಯಸ್‌ ಕಾಲೇಜಿನ ರೆಕ್ಟರ್‌ ಫಾ| ಡಯೋನಿಸಿಯಸ್‌ ವಾಸ್‌ ಪ್ರಧಾನ ಗುರುಗಳಾಗಿ ಬಲಿಪೂಜೆಯನ್ನು ಅರ್ಪಿಸಲಿದ್ದಾರೆ. 

10ರಂದು ಬೆಳಗ್ಗೆ 10 ಗಂಟೆಗೆ ಮಹೋತ್ಸವದ ಸಂಭ್ರಮಿಕ ಬಲಿ ಪೂಜೆ ನಡೆಯಲಿದೆ. ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ರೈ| ರೆ| ಡಾ| ಅಲೋಶಿಯಸ್‌ ಪಾವ್‌É ಡಿ’ಸೋಜಾ ಪ್ರಧಾನ ಗುರುಗಳಾಗಿ ಬಲಿಪೂಜೆಯನ್ನು ಅರ್ಪಿಸುವರು.

Advertisement

Udayavani is now on Telegram. Click here to join our channel and stay updated with the latest news.

Next