Advertisement

ನಾಳೆಯಿಂದ ಕವಿಸಂ 130ನೇ ಸಂಸ್ಥಾಪನಾ ದಿನಾಚರಣೆ

08:31 AM Jul 19, 2019 | Suhan S |

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘದ 130ನೇ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಜು. 20ರಿಂದ 26ರ ವರೆಗೆ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಉಡಿಕೇರಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

Advertisement

ಪ್ರತಿದಿನ ಸಂಜೆ 5:30 ಗಂಟೆಗೆ ನಾಟಕ ಸಂಜೆ, ನೃತ್ಯ ಸಂಜೆ, ಹಾಸ್ಯ ಸಂಜೆ, ಸಾಂಸ್ಕೃತಿಕ ಸಂಜೆ, ಜಾನಪದ ಸಂಜೆ, ಮಕ್ಕಳ ಸಾಂಸ್ಕೃತಿಕ ಸಂಜೆ, ಸಂಗೀತ ಸಂಜೆ ಹಾಗೂ ಸಂಘದ ಹಿರಿಯ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮಗಳು ಜರುಗಲಿವೆ ಎಂದರು.

20ರಂದು ಸಂಜೆ 5:30 ಗಂಟೆಗೆ ಕವಿಸಂನ ಕುವೆಂಪು ವೇದಿಕೆಯಲ್ಲಿ ಚಲನಚಿತ್ರದ ಹಿರಿಯ ನಟ ದೊಡ್ಡಣ್ಣ ಚಾಲನೆ ನೀಡಲಿದ್ದಾರೆ. ಬಾಲೆಹೊಸೂರ ದಿಂಗಾಲೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ನಾಡೋಜ ಡಾ| ಪಾಟೀಲ ಪುಟ್ಟಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಬಳಿಕ ಡಾ| ಶ್ರೀಪಾದ ಭಟ್ ನಿರ್ದೇಶನದಲ್ಲಿ ಉಡುಪಿಯ ಕೊಡವೂರಿನ ನೃತ್ಯ ನಿಕೇತನ ತಂಡವು ಚಿತ್ರಾ ನಾಟಕ ಪ್ರದರ್ಶನ ಮಾಡಲಿದೆ ಎಂದು ತಿಳಿಸಿದರು.

21ರಂದು ಡಾ| ದ.ರಾ. ಬೇಂದ್ರೆ ವೇದಿಕೆಯಲ್ಲಿ ಜರುಗುವ ನೃತ್ಯ ಸಂಜೆ ಕಾರ್ಯಕ್ರಮದಲ್ಲಿ ಡಾ| ಅಪ್ಪಗೆರೆ ತಿಮ್ಮರಾಜು, ಸುಜಾತಾ ರಾಜಗೋಪಾಲ ಆಗಮಿಸಲಿದ್ದಾರೆ. ಡಾ| ಎಸ್‌.ಎಂ. ಶಿವಪ್ರಸಾದ ಅಧ್ಯಕ್ಷತೆ ವಹಿಸಲಿದ್ದು, ಜೈ ಕಿಸಾನ್‌ ಸಾಂಸ್ಕೃತಿಕ ಮತ್ತು ಜನಪದ ಕಲಾ ಸಂಘ ಹಾಗೂ ಸುಹಾಸಿನಿ ನಾರಾಯಣಕರ ಮತ್ತು ನೃತ್ಯ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. 22ರಂದು ಡಾ| ಶಿವರಾಜ ಕಾರಂತ ವೇದಿಕೆಯಲ್ಲಿ ನಡೆಯುವ ಹಾಸ್ಯ ಸಂಜೆ ಕಾರ್ಯಕ್ರಮದಲ್ಲಿ ಡಾ| ಮಹೇಶ ಹೊರಕೇರಿ ಆಗಮಿಸಲಿದ್ದಾರೆ. ಎಂ.ಡಿ. ಗೋಗೇರಿ ಅಧ್ಯಕ್ಷತೆ ವಹಿಸಲಿದ್ದು, ಎಸ್‌.ಪಿ. ಹೊಸಪೇಟಿ, ಎಸ್‌.ಆರ್‌. ಡೋಂಗ್ರೆ, ಸಂದೀಪರಾಜ ಹಿರೇವೆಂಕನಗೌಡರ ಅವರಿಂದ ಹಾಸ್ಯ ಸಂಜೆ ಕಾರ್ಯಕ್ರಮ ನಡೆಯಲಿದೆ ಎಂದರು.

23ರಂದು ಮಾಸ್ತಿ ವೆಂಕಟೇಶ ಅಯ್ಯಂಗಾರ ವೇದಿಕೆಯಲ್ಲಿ ಜರುಗುವ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದಲ್ಲಿ ಕವಿವಿ ಗಾಂಧಿ ಅಧ್ಯಯನ ಕೇಂದ್ರದ ಡೀನ್‌ ಡಾ| ಶಿವಾನಂದ ಶೆಟ್ಟರ ಆಗಮಿಸಲಿದ್ದು, ಕವಿವಿ ಸಂಗೀತ ವಿಭಾಗದ ಮುಖ್ಯಸ್ಥ ಡಾ|ಮೃತ್ಯುಂಜಯ ಅಗಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಮೈಸೂರಿನ ಸುಮಾ ರಾಜ್‌ಕುಮಾರ ಅವರಿಂದ ಮಾತನಾಡುವ ಗೊಂಬೆ ಕಾರ್ಯಕ್ರಮ ನಡೆಯಲಿದೆ.

Advertisement

24ರಂದು ಡಾ| ವಿ.ಕೃ. ಗೋಕಾಕ ವೇದಿಕೆಯಲ್ಲಿ ಜರುಗುವ ಜಾನಪದ ಸಂಜೆ ಕಾರ್ಯಕ್ರಮದಲ್ಲಿ ಡಾ| ವೈ.ಎಂ. ಯಾಕೊಳ್ಳಿ ಆಗಮಿಸಲಿದ್ದು, ಬಿ.ಎಲ್. ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರವಾರದ ಪುರುಷೋತ್ತಮಗೌಡ ತಂಡದಿಂದ ಹಾಲಕ್ಕಿ ಗೌಡರ ಗುಮಟೆ ಪಾಂಗ್‌ ನೃತ್ಯ ಪ್ರಸ್ತುತ ಆಗಲಿದ್ದು, ಹುಬ್ಬಳ್ಳಿಯ ನಾಟ್ಯಭೈರವ ನೃತ್ಯ ಹಾಗೂ ಸಾಂಸ್ಕೃತಿಕ ಸಂಸ್ಥೆಯಿಂದ ಜನಪದ ನೃತ್ಯ ವೈಭವ ಅನಾವರಣಗೊಳ್ಳಲಿದೆ. 25ರಂದು ಡಾ| ಯು.ಆರ್‌. ಅನಂತಮೂರ್ತಿ ವೇದಿಕೆಯಲ್ಲಿ ಜರುಗುವ ಮಕ್ಕಳ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದಲ್ಲಿ ವಿ.ಎನ್‌. ಕೀರ್ತಿವತಿ ಆಗಮಿಸಲಿದ್ದು, ನಿಂಗಣ್ಣ ಕುಂಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಲಾ ಮಕ್ಕಳಿಂದ ವೈವಿಧ್ಯಮ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.

26ರಂದು ಡಾ| ಗಿರೀಶ ಕಾರ್ನಾಡ ವೇದಿಕೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಪ್ರೊ| ಹರ್ಷ ಡಂಬಳ ಆಗಮಿಸಲಿದ್ದಾರೆ. ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಜಿನದತ್ತ ದೇಸಾಯಿ ಅಧ್ಯಕ್ಷತೆ ವಹಿಸಲಿದ್ದಾರೆ. ಬಳಿಕ ಸಂಗೀತ ಸಂಜೆಯಲ್ಲಿ ಗಾಯಿತ್ರಿ ಟೊಣಪಿ, ವೀಣಾ ಬಡಿಗೇರ ಪಾಲ್ಗೊಳ್ಳಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಶಿವಣ್ಣ ಬೆಲ್ಲದ, ಕೃಷ್ಣ ಜೋಶಿ, ಸದಾನಂದ ಶಿವಳ್ಳಿ, ಸತೀಶ ತುರಮರಿ, ಶಂಕರ ಕುಂಬಿ, ವಿಶ್ವೇಶ್ವರಿ ಹಿರೇಮಠ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next