Advertisement

ನಾಳೆ ದೇವರಹೊಸಹಳ್ಳಿ ಲಕ್ಷ್ಮೀ ವೆಂಕಟೇಶ್ವರ ಬ್ರಹ್ಮರಥೋತ್ಸವ

08:52 AM Jul 04, 2017 | |

ಚನ್ನಪಟ್ಟಣ: ಆಷಾಢ ಮಾಸದ ಜಾತ್ರಾ ಮಹೋತ್ಸವ ಎಂದೇ ಪ್ರಸಿದ್ಧಿ ಹೊಂದಿರುವ ತಾಲೂಕಿನ ಇತಿಹಾಸ ಹಾಗೂ ಪುರಾಣ ಪ್ರಸಿದ್ಧ ದೇವರಹೊಸಹಳ್ಳಿ ಲಕ್ಷ್ಮೀವೆಂಕಟೇಶ್ವರಸ್ವಾಮಿ ಬ್ರಹ್ಮರಥೋತ್ಸವ, ಸಂಜೀವರಾಯಸ್ವಾಮಿಗೆ
ತೋಮಾಲ ಸೇವೆ, ವೈಕುಂಠ ಸೇವಾ ದರ್ಶನ, ಲಕ್ಷದೀಪೋತ್ಸವವು ಜುಲೈ 5 ರಂದು ನಡೆಯಲಿದೆ.

Advertisement

ನವ ಜೀವನಕ್ಕೆ ಕಾಲಿಟ್ಟ ಜೋಡಿಗಳು ನಾಡಿನ ಮೂಲೆ ಮೂಲೆಗಳಿಂದ ಜಾತ್ರೆಗೆ ಬಂದು ಸೇರುತ್ತಾರೆ. ಆಷಾಢದಲ್ಲಿ ಒಲಿದ ಜೀವಗಳೂ ಒಂದು ತಿಂಗಳು ದೂರವಾಗಿ  ಏಕಾದಶಿಗೆ (ಉಪವಾಸದ ಹಬ್ಬ) ಅತ್ತೆ ಮನೆಗೆ ಬರುವ ಅಳಿಯ ತನ್ನ ಪತ್ನಿಯ ಜೊತೆ ಈ ಜಾತ್ರೆಗೆ ಬರುವುದು ವಿಶೇಷ. ಭಕ್ತರ ಅನುಕೂಲಕ್ಕಾಗಿ ಚನ್ನಪಟ್ಟಣ, ರಾಮನಗರ ಬಸ್‌ ನಿಲ್ದಾಣದಿಂದ ವಿಶೇಷ ವಾಹನ ಸೌಕರ್ಯ ಕಲ್ಪಿಸಲಾಗಿದೆ. ಜುಲೈ 4 ರ ಏಕಾದಶಿಯಂದು ಬೆಳಗ್ಗೆ ಅಭಿಷೇಕ ಮಹಾಮಂಗಳಾರತಿ ಮತ್ತು ಉತ್ಸವ, ಧ್ವಜಾರೋಹಣ, ಯಾಗ ಶಾಲಾ ಪ್ರವೇಶ, ಅಷ್ಟಾವಧಾನ ಸೇವೆ, ನಂತರ
ದೇವರಹೊಸಹಳ್ಳಿ ಗ್ರಾಮಸ್ಥರಿಂದ ಕಾಶಿಯಾತ್ರೆ ಉತ್ಸವ, ನೂತನವಾಗಿ ನಿರ್ಮಿಸಿರುವ ವಿಶ್ವಕಲಾ ವೈಭವ ಸುವರ್ಣ
ಕಲ್ಯಾಣ ಮಂಟಪದ ಮಧ್ಯೆ ತಿರು ಕಲ್ಯಾಣ ಮಹೋತ್ಸವ, ಕಲ್ಯಾಣೋತ್ಸವ ನೆರವೇರಲಿದೆ.

ಜುಲೈ 5 ರ ಗುರುವಾರ ದ್ವಾದಶಿಯಂದು  ಬೆಳಗ್ಗೆ ಸಂಜೀವರಾಯ ಸ್ವಾಮಿಯವರ ಶಿಲ್ಪಕಲಾ ಸುವರ್ಣ ಮಂಟಪದ ಮಧ್ಯೆ ವೈಕುಂಠ ಸೇವಾ ದರ್ಶನ ತೋಮಾಲ ಸೇವೆ,  ಮಹಾಮಂಗಳಾರತಿ, ಪ್ರಸಾದ ವಿನಿಯೋಗ,ವಿಮಾನ ಗೋಪುರಕ್ಕೆ ವಿದ್ಯುತ್‌ ಲಕ್ಷ  ದೀಪೋತ್ಸವ, ಪುಷ್ಪಾಲಂಕಾರಗಳು, ನಂತರ ಉಷಃಕಾಲ ಸುಪ್ರಭಾತ, ವಿಶ್ವರೂಪ ದರ್ಶನ
ಸೇವೆ, ನಂತರ ತಿರುಪ್ಪಾವಡೆ ಸೇವೆ, ಗೋವು, ಅಶ್ವ, ಗಜಪೂಜೆ ನಡೆಯಲಿದೆ. ಅಂದು ಮಧ್ಯಾಹ್ನ 1.45 ರಿಂದ 2.15
ಗಂಟೆ ಶುಭ ತುಲಾ ಲಗ್ನದಲ್ಲಿ ಸರ್ಕಾರಿ ಸೇವೆಯಲ್ಲಿ ಶಾಸಕ ಸಿ.ಪಿ.ಯೋಗೇಶ್ವರ್‌ ಬ್ರಹ್ಮರಥೋತ್ಸವ, ಮಧ್ಯಾಹ್ನ
ಅನ್ನಸಂತರ್ಪಣೆ, ಸಂಜೆ ಡೋಲೋತ್ಸವ ಮತ್ತು ಮಂದಹಾಸ ದೀಪೋತ್ಸವ, ರಾತ್ರಿ ತೆಪ್ಪೋತ್ಸವ ಮತ್ತು ವರ್ಣರಂಜಿತ ಬಾಣ ಬಿರುಸುಗಳ ಪ್ರದರ್ಶನ, ನಂತರ ವಿದ್ಯುತ್‌ ದೀಪದೊಂದಿಗೆ ಚಂದ್ರಮಂಡಲ ಪಲ್ಲಕ್ಕಿ ಉತ್ಸವ, ಶಾಸ್ತ್ರೀಯ ಸಂಗೀತ ಕಛೇರಿ ಏರ್ಪಾಡಿಸಲಾಗಿದೆ. 

ಜುಲೈ 6ರ ಗುರುವಾರ ತ್ರಯೋದಶಿ ಯಂದು ಬೆಳಗ್ಗೆ ಶಾಂತಿ ಹೋಮ, ಕಳಸಪೂಜೆ, ಅಷ್ಟೋತ್ತರ ಶತ, ಅಮೃತ ಕಳಶ
ಪೂಜೆ, ಅಭಿಷೇಕ, ಮಹಾಕುಂಭಾ ಅಭಿಷೇಕ, ನೈವೇದ್ಯ, ರಾತ್ರಿ ಪುಷ್ಪಯಾಗ ನಡೆಯಲಿದೆ. ಜುಲೈ 7ರ ಚತುರ್ದಶಿಯಂದು ಬೆಳಗ್ಗೆ  ಅಭಿಷೇಕ ಮತ್ತು ಮಹಾಮಂಗಳಾರತಿ, ಅಂದು ರಾತ್ರಿ ಜಿಲ್ಲಾ ಉಸ್ತುವಾರಿ ಸಚಿವ
ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಶಯನೋತ್ಸವ, ನಂತರ ನಾದಸ್ವರ ಕಾರ್ಯಕ್ರಮ ನೆರವೇರಲಿದೆ.
ಬ್ರಹ್ಮರಥೋತ್ಸವವನ್ನು ಶಾಸಕ ಸಿ.ಪಿ.ಯೋಗೇಶ್ವರ್‌ ನೆರವೇರಿಸಲಿದ್ದು, ಧಾರ್ಮಿಕ ದತ್ತಿ ಆಯುಕ್ತರಾದ ಎಸ್‌
.ಪಿ.ಷಡಕ್ಷರಿಸ್ವಾಮಿ, ರಾಮನಗರ ಜಿಲ್ಲಾಧಿಕಾರಿ ಡಾ.ಬಿ.ಆರ್‌.ಮಮತಾ, ಅಪರ ಜಿಲ್ಲಾಧಿಕಾರಿ ಡಾ. ಪ್ರಶಾಂತ್‌, ಉಪವಿಭಾಗಾಧಿಕಾರಿ ಡಾ.ರಾಜೇಂದ್ರಪ್ರಸಾದ್‌, ತಾಲೂಕು ದಂಡಾಧಿಕಾರಿ ಕೆ.ರಮೇಶ್‌ ಮುಂತಾದವರು
ಭಾಗವಹಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next